ಭವಿಷ್ಯದ ಜಲ ಬೇಡಿಕೆ ಅಧ್ಯಯನ

FotoJet (1)
Published on

ನಗರಾಡಳಿತ ವ್ಯಾಪ್ತಿಯಲ್ಲಿ ನೀರಿನ ಸಂರಕ್ಷಣೆ, ಬಳಕೆ ಯೋಜನೆ ಅನುಷ್ಠಾನ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಬಳ್ಳಾಪುರ: ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಲಸಂರಕ್ಷಣೆ ಮತ್ತು ಸಮರ್ಪಕ ಬಳಕೆಯ ಯೋಜನೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರಿನ ಸಂರಕ್ಷಣೆ, ಸಮರ್ಪಕ ಬಳಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರ ನಗರಸಭೆಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ರೈತರ ಸಹಭಾಗಿತ್ವದಲ್ಲಿ ಸಮರ್ಪಕ ವಿಲೇವಾರಿ ಬಗ್ಗೆ ಜಿಲ್ಲಾಡಳಿತ ಹಾಗೂ ಚಿಕ್ಕಬಳ್ಳಾಪುರ ನಗರಸಭೆ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಸಿಡಿಆರ್‌ಐ (ಇಟಚ್ಝಜಿಠಿಜಿಟ್ಞ ್ಛಟ್ಟ ಈಜಿಠಿಛ್ಟಿ ್ಕಛಿಜ್ಝಿಜಿಛ್ಞಿಠಿ ಐ್ಞ್ಛ್ಟಠ್ಟ್ಠ್ಚಿಠ್ಠ್ಟಿಛಿ) ಸಂಸ್ಥೆ ರೂಪಿಸಿದ ಯೋಜನೆ ಹಾಗೂ ಅನುಷ್ಠಾನದ ವಿಧಾನವೇ ಪ್ರಮುಖ ಕಾರಣ ಎಂದರು.

ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನಗರ ಆಡಳಿತ ಸಂಸ್ಥೆಯ ವ್ಯಾಪ್ತಿಯಲ್ಲಿ ಜಲಸಂರಕ್ಷಣೆ ಮತ್ತು ಸಮರ್ಪಕ ಬಳಕೆ ಎಂಬ ಮತ್ತೊಂದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಡಿ ದೇಶದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.ನಗರಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜು, ಜಿಲ್ಲಾ ನಗಾರಾಭಿವೃದ್ಧಿ ಕೋಶದ ನಿರ್ದೇಶಕಿ ಮಾಧವಿ, ಸಿಡಿಪಿಆರ್‌ಐ ಸಂಸ್ಥೆಯ ಪುಷ್ಕರ್ ಮತ್ತಿತರರು ಇದ್ದರು.

ಎರಡು ವರ್ಷಗಳಲ್ಲಿ ಪ್ರಾಯೋಗಿಕ ಜಾರಿ

ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಮೂಲಗಳು, ಸಂಗ್ರಹಣೆ, ನೀರಿನ ಪೂರೈಕೆ ಮತ್ತು ಬಳಕೆಯ ವಿಧಾನಗಳನ್ನು ಮೊದಲು ಅಧ್ಯಯನ ಮಾಡಲಾಗುತ್ತದೆ. ಬಳಿಕ ಮುಂದಿನ 30-40 ವರ್ಷಗಳಲ್ಲಿ ನಗರಗಳು ಯಾವ ರೀತಿ ಬೆಳವಣಿಗೆ ಆಗಲಿವೆ?, ಜನಸಂಖ್ಯೆ ಯಾವ ರೀತಿ ಹೆಚ್ಚಳವಾಗಲಿದೆ?, ನೀರಿನ ಬೇಡಿಕೆ ಎಷ್ಟು ಎಂಬ ಬಗ್ಗೆ ವರದಿ ತಯಾರಿಸಲಾಗುತ್ತದೆ. ಇದರಡಿ ಮಳೆಯ ನೀರನ್ನು ಯಾವ ರೀತಿ ಮುಂದಿನ ದಿನಗಳಲ್ಲಿ ಸಂಗ್ರಹಿಸಬೇಕು, ಯಾವ ಮೂಲಗಳಿಂದ ಎಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗಲಿದೆ?, ಈಗಿರುವ ಜಲ ಸಂರಕ್ಷಣೆಯ ಮೂಲಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ವಿಸ್ತರಿಸುವುದು ಹೇಗೆ? ಎಂಬುದನ್ನು ಎಲ್ಲ ಆಯಾಮಗಳಲ್ಲಿ ತಿಳಿದುಕೊಳ್ಳಲಾಗುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತದೆ. ಇದರ ಮೂಲಕ ಮುಂದಿನ 30-40 ವರ್ಷಗಳಲ್ಲಿ ಎದುರಾಗುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈಗಿನಿಂದಲೆ ಪ್ರಯತ್ನಿಸಲಾಗುತ್ತದೆ. ನೂತನ ಯೋಜನೆಯನ್ನು ಜಿಲ್ಲೆಯ ನಗರ ಸ್ಥಳೀಯಾಡಳಿತ ಸಂಸ್ಥೆಗಳು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net