

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವತಿಯಿಂದ ಬಂಟ್ವಾಳ ತಾಲೂಕಿನ ಪೂಂಜಲಕಟ್ಟೆ ಪಿಲಾತಬೆಟ್ಟು ಗ್ರಾಮದ ಕೊಳಕೆಬೈಲು ಎಂಬಲ್ಲಿ ತೀರಾ ಬಡತನದಲ್ಲಿ ವಾಸಿಸುತ್ತಿರುವ ವಸಂತಿ ಎಂಬುವರಿಗೆ ಇತ್ತೀಚೆಗೆ ಧನಸಹಾಯ ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಶೌರ್ಯ ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕಿ ರೇಖಾ ಪಿ, ಸದಸ್ಯರಾದ ಸಂಪತ್ ಶೆಟ್ಟಿ, ನಾರಾಯಣ ಶೆಟ್ಟಿ, ಮಹಾಬಲ ರೈ, ನಾರಾಯಣ ಪೂಜಾರಿ, ಜನಾರ್ದನ, ಅಶೋಕ ಹಾರೊದ್ದು, ಅಶೋಕ ಬೊಲ್ಮಾರು, ಲಕ್ಷ್ಮಣ, ಶಶಿಕಲಾ, ನೈನಾಡು ಉಪಸ್ಥಿತರಿದ್ದರು.