ಚಿಕನ್​ ಅನ್ನು ಒಮ್ಮೆ ಈ ರೀತಿ ಫ್ರೈ ಮಾಡಿ ತಿನ್ನಿ... ಇದರ ರುಚಿ ಸವಿದರೆ ನೀವು ಕಳೆದು ಹೋಗ್ತೀರಾ! Chicken

Chicken
Published on

Chicken : ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಎಲ್ಲರೂ ರುಚಿಕರವಾದ ಊಟ ಮಾಡಿದ ಬಳಿಕ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಚಿಕನ್ ತುಂಬಾ ಅಚ್ಚುಮೆಚ್ಚು. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಚ್ಚಿನ ಜನರು ಚಿಕನ್ ತಿನ್ನಲು ಇಷ್ಟಪಡುತ್ತಾರೆ.

ಭಾನುವಾರ ಅಥವಾ ಇನ್ಯಾವುದೇ ವಿಶೇಷ ದಿನ ಬರಲಿ ರುಚಿಕರವಾದ ಚಿಕನ್​ ಖಾದ್ಯ ಮಾಡಲು ಬಯಸುತ್ತಾರೆ. ಅದರಲ್ಲೂ ಒಂದೇ ರೀತಿಯ ಚಿಕನ್​ ಖಾದ್ಯ ತಿಂದು ತಿಂದು ಬೋರ್​ ಆದ ಮಂದಿ ಹೊಸ ರೀತಿಯ ಚಿಕನ್​ ರೆಸಿಪಿ ಟ್ರೈ ಮಾಡುತ್ತಾರೆ. ಹೈದರಾಬಾದಿ ಚಿಕನ್​ ರೆಸಿಪಿ, ಆಂಬೂರ್​ ಬಿರಿಯಾನಿ, ಕೊಲ್ಲಾಪುರಿ ಚಿಕನ್​ ಕರಿ ಹೀಗೆ ನಾನಾ ರೀತಿಯ ಚಿಕನ್​ ರೆಸಿಪಿಗಳಿವೆ. ಯೂಟ್ಯೂಬ್​ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಅಡುಗೆ ಕುರಿತು ಲಭ್ಯವಿರುವ ಅನೇಕ ವಿಡಿಯೋ ಹಾಗೂ ಪೋಸ್ಟ್​ಗಳನ್ನು ನೋಡಿ ಚಿಕನ್​ ರೆಸಿಪಿ ಟ್ರೈ ಮಾಡಿದ ಅನೇಕ ಮಂದಿಯನ್ನು ನಾವು ನೋಡಿದ್ದೇವೆ. ನೀವು ಕೂಡ ಟ್ರೈ ಮಾಡುತ್ತೀರಿ.

ಇದೀಗ ತುಂಬಾ ಟೇಸ್ಟಿಯಾದ ಚಿಕನ್​ ರೆಸಿಪಿ ಟ್ರೈ ಮಾಡಬೇಕು ಅಂತಾ ನೀವು ಬಯಸಿದ್ದರೆ ಸಖತ್​ ರುಚಿಕರವಾದ ಚಿಕನ್ 65 ಅನ್ನು ಒಮ್ಮೆ ಟ್ರೈ ಮಾಡಿ ನೋಡಿ. ಕಬಾಬ್​ ತಿಂದು ತಿಂದು ಬೋರ್​ ಆಗಿರುವವರಿಗೆ ಈ ಚಿಕನ್​ 65 ಫ್ರೈ ಹೊಸ ರೀತಿ ಟೇಸ್ಟ್​ ಕೊಡುತ್ತದೆ. ಹಾಗಾದರೆ, ಚಿಕನ್ 65​ ಮಾಡುವುದು ಹೇಗೆಂದು ನಾವೀಗ ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು

* ಕೋಳಿ ಮಾಂಸ - 3/4 ಕೆಜಿ

* ಈರುಳ್ಳಿ - 10

* ಬೆಳ್ಳುಳ್ಳಿ - 10

* ಶುಂಠಿ - ಅಗತ್ಯಕ್ಕೆ ತಕ್ಕಷ್ಟು

* ಕರಿಬೇವು - ಒಂದು ಗೊಂಚಲು

* ಕೊತ್ತಂಬರಿ ಸೊಪ್ಪು - ಒಂದು ಹಿಡಿ

* ಒಣ ಮೆಣಸಿನಕಾಯಿ - 7

* ಮೊಟ್ಟೆ - 1

* ಕಾಶ್ಮೀರಿ ಮೆಣಸಿನ ಪುಡಿ - 1.5 ಟೀ ಸ್ಪೂನ್

* ಜೋಳದ ಹಿಟ್ಟು - 1.5 ಟೀ ಸ್ಪೂನ್

* ಅರಿಶಿನ ಪುಡಿ - 1/2 ಟೀ ಸ್ಪೂನ್

* ಮೆಣಸಿನ ಪುಡಿ - 1/2 ಟೀ ಸ್ಪೂನ್

* ನಿಂಬೆ ರಸ - 1 ಟೀ ಸ್ಪೂನ್

* ಉಪ್ಪು - ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ನಂತರ, ಮಿಕ್ಸರ್ ಜಾರ್​ನಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಸೋಂಪು, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಒಣ ಮೆಣಸಿನಕಾಯಿಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ತೊಳೆದ ಕೋಳಿ ಮಾಂಸಕ್ಕೆ ರುಬ್ಬಿದ ಮಸಾಲೆ ಸೇರಿಸಿ ಮತ್ತು ಮೆಣಸಿನ ಪುಡಿ, ಮೊಟ್ಟೆ, ಕಾರ್ನ್‌ಸ್ಟಾರ್ಚ್, ಅರಿಶಿನ ಪುಡಿ, ಮೆಣಸು, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಕಡೆ ಇಡಿ. ಸುಮಾರು 30 ನಿಮಿಷಗಳ ಕಾಲ ಮ್ಯಾರಿನೇಟ್​ ಮಾಡಿದ ನಂತರ, ಒಂದು ಪ್ಯಾನ್‌ಗೆ ಎಣ್ಣೆ ಸುರಿಯಿರಿ, ಬಿಸಿ ಮಾಡಿ ಮತ್ತು ಮ್ಯಾರಿನ್​ ಮಾಡಿದ ಚಿಕನ್ ಅನ್ನು ಕಾದ ಎಣ್ಣೆಯೊಳಗೆ ಬಿಟ್ಟು ಫ್ರೈ ಮಾಡಿ. ಈ ವೇಳೆ ನಿಮ್ಮ ಗ್ಯಾಸ್​ ಸ್ಟೌ ಮಧ್ಯಮ ಉರಿಯಲ್ಲಿರಲಿ. ಚಿಕನ್​ ಚೆನ್ನಾಗಿ ಬೆಂದ ನಂತರ ಹೊರತೆಗೆಯಿರಿ. ಈಗ ವಿಶಿಷ್ಟ ರುಚಿಯ ಚಿಕನ್ 65 ಸವಿಯಲು ಸಿದ್ಧ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net