ಗೌಡರ ಸಮ್ಮುಖದಲ್ಲೇ ಜೆಡಿಎಸ್ ಮುಖಂಡರ ಅಸಮಾಧಾನ ಸ್ಫೋಟ!

shira jds
Published on

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲೇ ಜೆಡಿಎಸ್ ಮುಖಂಡರ ಅಸಮಾಧಾನ ಸ್ಫೋಟಗೊಂಡಿತು.

ಶಿರಾ ಉಪಸಮರದ ಕಳ್ಳಂಬೆಳ್ಳ ಹೋಬಳಿ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್, ಭಾನುವಾರ ಜೆಡಿಎಸ್ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಭಾಷಣ ಸಾಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಡೆದಿದ್ದಕ್ಕೆ ಸಿಟ್ಟಿಗೆದ್ದ ಗೌರಿಶಂಕರ್ ‘ಮೈಕ್ ಸ್ಟಾೃಂಡ್’ ಮೇಲೆ ಮೈಕ್ ಎಸೆದು ವೇದಿಕೆ ಮೇಲಿನ ಹಿಂಬದಿ ಸಾಲಿಗೆ ಹೋಗಿ ಕುಳಿತರು.

ರೇವಣ್ಣನ ವರ್ತನೆಯಿಂದ ಕೋಪದ್ರಿಕ್ತರಾಗಿ ಒಳಗೊಳಗೆ ಕುದಿಯುತ್ತಿದ್ದ ಗೌರಿಶಂಕರ್‌ರನ್ನು ವೈ.ಎಸ್.ವಿ.ದತ್ತಾ, ಸಂಸದ ಪ್ರಜ್ವಲ್ ರೇವಣ್ಣ ಸಮಾಧಾನ ಪಡಿಸಿದರಾದರೂ ಗೌರಿಶಂಕರ್ ಕೋಪತಾಪ ಕಡಿಮೆಯಾಗಿರಲಿಲ್ಲ.

ನಿಖಿಲ್ ಎಡವಟ್ಟು: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವೇದಿಕೆಯಲ್ಲಿ ಮತ್ತೊಂದು ಎಡವಟ್ಟು ಮಾಡಿದರು. ನಿಖಿಲ್ ಭಾಷಣದಲ್ಲಿ ದೊಡ್ಡಪ್ಪ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹೆಸರನ್ನು ಹೇಳುವುದನ್ನೇ ಮರೆತುಬಿಟ್ಟಿದ್ದರು. ಕೊನೆಗೆ ತಪ್ಪಾಯ್ತು ಎಂದು ಕ್ಷಮೆಕೋರಿದ ನಿಖಿಲ್, ಭಾಷಣ ಮುಂದುವರಿಸಿದರು. ಪ್ರಜ್ವಲ್‌ಗೆ ಸಮಾವೇಶದಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ. ಇದರಿಂದ ಅಸಮಾಧಾನಿತರಾದಂತೆ ಕಂಡ ಪ್ರಜ್ವಲ್, ಮುಖಂಡರ ಭಾಷಣ ನಡೆಯುತ್ತಿರುವಾಗಲೇ ವೇದಿಕೆಯಿಂದ ನಿರ್ಗಮಿಸಿದ್ದು ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲವೆಂಬುದನ್ನು ತೋರುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net