ಈ ವ್ಯಕ್ತಿ ಜತೆಗೆ ಸೆಲ್ಫಿ ತೆಗೆಸಿದ್ರೆ ಅದೃಷ್ಟ ಖುಲಾಯಿಸುತ್ತೆ..! ಬಿ-ಟೌನ್ ಸ್ಟಾರ್​​​ ನಟ-ನಟಿಯರೂ ಸೆಲ್ಫಿಗಾಗಿ ಕಾಯುತ್ತಾರೆ; ಸೆಲ್ಫಿಗೆ ಸಿಗೋ ಸಂಭಾವನೆ 25-30 ಲಕ್ಷ ಅನ್ನೋದನ್ನ ಕೇಳಿ ನಟ ಸಲ್ಮಾನ್​​ ಶಾಖ್​​..!

ಕಜಹ
Published on

ಬಿಟೌನ್ ಸೆಲೆಬ್ರಿಟಿಗಳ ಬೆಸ್ಟ್​​ಫ್ರೆಂಡ್​ ಅಂದ್ರೆ ಓರಿ, ಈತನ ನಿಜವಾದ ಹೆಸರು ಓರ್ಹಾನ್ ಅವತ್ರಮಣಿ. ಇದೀಗ ಈತ ಪ್ರತಿಯೊಂದುಸೆಲ್ಫಿಗೆ ಪಡೆಯುವ ಸಂಭಾವನೆಯ ಬಗ್ಗೆ ಮಾಹಿತಿ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗಿದೆ.


ಓರ್ಹಾನ್ ಅವತ್ರಮಣಿ ಜಾಹ್ನವಿ ಕಪೂರ್​, ಶ್ರದ್ಧಾ ಕಪೂರ್​, ಜಾಕ್ವಾಲಿನ್​​, ಕರೀನಾ ಕಪೂರ್​​ ಹೀಗೆ ನಾನಾ ಟಾಪ್​ ಸೆಲಿಬ್ರಿಟಿಗಳ ಪಾರ್ಟಿಗಳಲ್ಲಿ ಹಾಜರಿರುತ್ತಾರೆ. ಇನ್ನು ಜನ ಸಾಮಾನ್ಯ ಓರಿ ಪಾರ್ಟಿಗೆ ಹಾಜರಾದ್ರೆ ದುಡ್ಡು ಕೊಡುತ್ತಾರೆಯೇ ಎಂದೂ ಪ್ರಶ್ನೆ ಮಾಡಿದ್ದಾರೆಂದು ಸಲ್ಮಾನ್​​ ಖಾನ್ ಓರಿಯನ್ನ ಬಿಗ್​​ ಬಾಸ್​​ ಸೀಸನ್​17 ರ ವೈಲ್ಡ್​ ಕಾರ್ಡ್​ ಎಂಟ್ರಿಯಾಗಿರೋ ಓರಿಯನ್ನ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದವ ಓರಿ ನಾನು ಪಾರ್ಟಿಗೆ ತೆರಳಿದ್ದಕ್ಕೆ ಯಾವುದೇ ಹಣ ಕೊಡಲ್ಲ ಆದ್ರೆ ಆರ್ಗನೈಸರ್ಸ್​​​ ನನ್ನ ಮ್ಯಾನೇಜರ್​ಗೆ ಕಾಲ್​ ಮಾಡಿ ಪಾರ್ಟಿಗೆ ಇನ್ವೈಟ್​​ ಮಾಡುತ್ತಾರೆ ಎಂದು ಹೇಳಿದ್ದಾರೆ.


ಸೆಲೆಬ್ರಿಟಿ ಜತೆ ತೆಗೆಸಿಕೊಳ್ಳುವ ಸೆಲ್ಫಿಗೆ 20-30 ಲಕ್ಷ ಸಂಭಾವನೆ ಪಡೆಯುತ್ತಾರೆಯೇ ಓರಿ?!
ಇನ್ನು ಓರಿಗೆ ನಟ ಸಲ್ಮಾನ್​​ ಖಾನ್​ ಕೇಳಿದ ಪ್ರಶ್ನೆ ಅಂದ್ರೆ ನೀವು ಸೆಲೆಬ್ರಿಗಳ ಜತೆಗೆ ತೆಗಿಸಿಕೊಳ್ಳುವ ಫೋಟೋಫಗೆ ಎಷ್ಟು ಹಣ ಪಡೆಯುತ್ತೀರಿ? ಮತ್ತು ಯಾಕೆ ಅಷ್ಟೊಂದು ಹಣವನ್ನ ಅವರು ಕೊಡ್ತಾರೆ?
ಈ ಪ್ರಶ್ನೆಗೆ ಉಯತ್ತರಿಸಿದ ಓರಿ ನಾನು ಸೆಲೆಬ್ರಿಟಿಗಳ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ್ರೆ ಅವರ ಅದೃಷ್ಟ ಕಖುಲಾಯಿಸುತ್ತೆ ಅನ್ನೋದು ಅವರ ನಂಬಿಕೆ. ಅದಕ್ಕಾಗಿ ಪಾರ್ಟಿಯಲ್ಲಿ ಎಲ್ಲಾ ಸೆಲೆಬ್ರಿಟಿಗಳು ನನ್ನ ಜತೆ ಫೋಟೋ ಕ್ಲಿಕ್ಕಿಸಿಕೊಳ್ತಾರೆ. ಮತ್ತು ಅದಕ್ಕಾಗಿ ನೈಟ್​ ಪಾರ್ಟಿಯ ನಂತರ ನಾನು 25-30 ಲಕ್ಷ ಸಂಪಾದಿಸುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​​​ ವೈರಲ್​ ಆಗುತ್ತಿದ್ದು, ಸಲ್ಮಾನ್​​ ಸಹ ಓರಿ ಉತ್ತರವನ್ನ ಕೇಳಿ ಶಾಖ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net