

ಚನ್ನಮ್ಮನ ಕಿತ್ತೂರು: ತಾಲೂಕಿನ ಕುಲವಳ್ಳಿ ಭಾಗದ ರೆತರು ತಾವು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಪಡೆದುಕೊಳ್ಳಲು ಮತ್ತೆ ಸೋಮವಾರದಿಂದ ಹೋರಾಟ ಆರಂಭಿಸಿದ್ದಾರೆ.
ಅರ್ನಿದಿಷ್ಟಾವಧಿ ರೈತರ ಹೋರಾಟಕ್ಕೆ ಮಠಾಧೀಶರ ಬೆಂಬಲವೂ ದೊರೆತಿದ್ದು, ತಹಸೀಲ್ದಾರ್ ಕಚೇರಿಯ ಎದುರು ಹೋರಾಟ ಆರಂಭವಾಗಿದೆ. ನ್ಯಾಯ ದೊರೆಯದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನೀಡಿದರು.
ಕುಲವಳ್ಳಿ ಗುಡ್ಡದ ಪ್ರದೇಶದಲ್ಲಿ ಮೊದಲಿನ ಜನರು ಗುಡ್ಡ ಸಾಗುವಳಿ ಮಾಡಿಕೊಂಡು ಜೀವನ ನಡೆಸಿದ್ದಾರೆ. ಆದರೆ, ಈಗ ಪಹಣಿಯಲ್ಲಿ ಹೆಸರುಗಳು ತಿದ್ದುಪಡಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ಮೋಸದಿಂದ ಹಿಡಿದು ಕೊಟ್ಟಿರುವ ಕಾರಣಕ್ಕೆ ಬ್ರಿಟಿಷರು ರಾಜೇಂದ್ರ ಇನಾಮದಾರ ಅವರಿಗೆ ಇನಾಂ ಭೂಮಿ ನೀಡಿದ್ದಾರೆ. ಅವರು ಶ್ರಮಪಟ್ಟು ಗಳಿಸಿದ ಭೂಮಿ ಇದಲ್ಲ. ಕುಲವಳ್ಳಿಯ 9 ಹಳ್ಳಿಯ ರೆತರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದನ್ನು ರೆತರಿಗೆ ನೀಡಿದ್ದಲ್ಲಿ ಬದುಕಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಇನಾಮದಾರ ರೆತರ ಜತೆ ಹೊಂದಾಣಿಕೆ ಮಾಡಿಕೊಂಡು ರೆತರಿಗೆ ಭೂಮಿ ನೀಡಬೇಕು. ಅಧಿಕಾರಿಗಳು ರೆತರಿಗೆ ಬೇಕಾಗಿರುವ ದಾಖಲೆ ಒದಗಿಸಬೇಕು. ಒಂದು ವೇಳೆ ರೆತರಿಗೆ ನ್ಯಾಯ ಸಿಗದಿದ್ದರೆ ಹೋರಾಟದ ಸ್ಥಳದಲ್ಲಿ ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಎಚ್ಚರಿಸಿದರು. ರೆತ ಮುಖಂಡ ಬಿಷ್ಠಪ್ಪ ಶಿಂಧೆ ಮಾತನಾಡಿದರು. ಕಿತ್ತೂರು ಕರ್ನಾಟಕ ರೆತ ಜಾಗತಿ ಸಂದ ಅಧ್ಯ ಎಂ. ಎ್. ಜಕಾತಿ, ಮುಖಂಡರಾದ ಅರ್ಜುನ ಮಡಿವಾಳರ, ಮಹಾಂತೇಶ ಎಮ್ಮಿ, ದಶರಥ ಮಡಿವಾಳರ, ವಿಜಯಕುಮಾರ ಶಿಂಧೆ, ಮಡಿವಾಳೇಪ್ಪ ವರಗನ್ನವರ, ಲೋಕೇಶ ಗಂಗನ್ನವರ, ಮಹಾಂತೇಶ ಒಕ್ಕುಂದಮಠ ಹಾಗೂ ರೆತರು, ಮಹಿಳೆಯರು ಪಾಲ್ಗೊಂಡಿದ್ದರು.