ಭಯ್ಯಾ ಎನ್ನುತ್ತಿದ್ದೆ ಈಗ ಅವನ ಮಗುವಿಗೆ ತಾಯಿಯಾದೆ! ಮಹಿಳೆಯ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು

Vini and Jai
Published on

ನವದೆಹಲಿ: ಭಾರತದಲ್ಲಿ ಹಿರಿಯ ಸಹೋದರ ಸಮಾನವಾದ ವ್ಯಕ್ತಿಯನ್ನು ಭಯ್ಯಾ ಅಂತಲೂ ಕರೆಯುತ್ತಾರೆ. ಇದೀಗ ನಾವು ಹೇಳಲು ಹೊರಟಿರುವುದು ಓರ್ವ ಮಹಿಳೆಯ ಕತೆ. 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗಿ ಮಗುವನ್ನು ಪಡೆದಿರುವ ಮಹಿಳೆಯ ಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಮಹಿಳೆಯ ಹೆಸರು ವಿನಿ. ತನ್ನ ಕತೆಯನ್ನು ತಾನೇ ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ಜಾಲತಾಣದಲ್ಲಿ 5 ಮಿಲಿಯನ್​ಗು ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದ

ಭಯ್ಯಾ ಎಂದು ಕರೆಯುತ್ತಿದ್ದೆ ವಿಡಿಯೋದಲ್ಲಿ ವಿನಿ ಮತ್ತು ಆಕೆಯ ಪತಿ ಜೈ ಅವರ ಬಾಲ್ಯದ ಫೋಟೋಗಳು ಒಳಗೊಂಡಂತೆ ಅನೇಕ ಫೋಟೋಗಳಿವೆ. 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದೆ, ಇದೀಗ ಅವರನ್ನೇ ಮದುವೆಯಾಗಿ ಒಂದು ಮಗುವಿಗೆ ತಾಯಿಯಾಗಿದ್ದೇನೆ ಎಂದು ವಿಡಿಯೋ ಕುರಿತು ಬರೆಯಲಾಗಿದೆ.

ವಯಸ್ಸಿನ ವ್ಯತ್ಯಾಸ ಕಾರಣ

ಅಂದಹಾಗೆ ವಿನಿ ಮತ್ತು ಜೈ ಇಬ್ಬರು ಸಂಬಂಧಿಗಳು. ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ ಕಾರಣ ಸುಮಾರು 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದರಂತೆ. ಸಂಬಂಧಿಕರು ಇಬ್ಬರ ಮದುವೆ ಮಾಡಿಸಿದ ಬಳಿಕ ಇದೀಗ ಗಂಡ-ಹಂಡತಿಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದಾರೆ.

ಎರಡೂ ರೀತಿಯಲ್ಲೂ ಕಾಮೆಂಟ್​ ವಿಡಿಯೋದಲ್ಲಿ ದಂಪತಿಯ ಮಗುವಿನ ಚಿತ್ರಗಳು ಸಹ ಇವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ವಿಶೇಷವಾಗಿ ವಿಡಿಯೋದ ಶೀರ್ಷಿಕೆಗಾಗಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ಕಾಮೆಂಟ್​ಗಳು ಬಂದಿವೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net