

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕಲ್ಲಬೆಟ್ಟು ನಡ್ಯೋಡಿ ದೈವಸ್ಥಾನದ ನಾಲ್ಕನೇ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ನೇಮೋತ್ಸವ ಫೆ.25ರಿಂದ ವಾರ್ಚ್ 3ರವರೆಗೆ ನಡೆಯಲಿದ್ದು, ವಾಯಂದಲೆ ದೇವಿ ಮೂರ್ತಿ ಪುನಃ ಪ್ರತಿಷ್ಠಾಪನೆ, ಪ್ರವೇಶ ದ್ವಾರ, ನೂತನ ಮುಖಮಂಟಪ ಮತ್ತು ರಾಜಗೋಪುರ ಲೋಕಾರ್ಪಣೆಗೊಳ್ಳಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್ ಕುವಾರ್ ಶೆಟ್ಟಿ ಹೇಳಿದರು.
ಫೆ.25ರಂದು ಸಂಜೆ 4 ಗಂಟೆಗೆ ಕೋಟೆಬಾಗಿಲು ವೀರವಾರುತಿ ದೇವಸ್ಥಾನದಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆಯನ್ನು ಮುಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ವಾರೂರು ಖಂಡಿಗ ಶ್ರೀರಾಮದಾಸ್ ಆಸ್ರಣ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
26ರಂದು ರಾತ್ರಿ 7ರಿಂದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ನಾಟಕ ಪ್ರದರ್ಶನಗೊಳ್ಳಲಿದೆ. 27ರಂದು ರಾತ್ರಿ 7ರಿಂದ ದೈವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ಕುವಾರ್ ರೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ, ದಾನಿಗಳಿಗೆ ಸನ್ಮಾನ, ರಾತ್ರಿ 9ರಿಂದ ತುಳು ಯಕ್ಷಗಾನ ನಡೆಯಲಿದೆ. 28ರಂದು ಬೆಳಗ್ಗೆ 7ಕ್ಕೆ ವಾಯಂದಲೆ ದೇವಿ ಮೂರ್ತಿ ಪುನಃ ಪ್ರತಿಷ್ಠಾಪನೆ, 7.30ರಿಂದ ಬ್ರಹ್ಮಕಲಶಾಭಿಷೇಕ, ಸಂಜೆ 5ಕ್ಕೆ ದೈವದ ಗಗ್ಗರ ಸೇವೆ, 6.30ಕ್ಕೆ ನೂತನ ರಾಜಗೋಪುರ ಲೋಕಾರ್ಪಣೆಯಾಗಲಿದೆ. ಬಳಿಕ ವಿವಿಧ ಕ್ಷೇತ್ರದ ಸಾಧಕರು ಹಾಗೂ ದಾನಿಗಳನ್ನು ಸನ್ಮಾನಿಸಲಾಗುವುದು. ವಾರ್ಚ್ 1 ಮತ್ತು 2ರಂದು ರಾತ್ರಿ ವಾರ್ಷಿಕ ನೇಮೋತ್ಸವ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಎಂ.ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ರೈ, ಕಾರ್ಯದರ್ಶಿ ಯತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.