ಫ್ರೆಂಡ್​ಷಿಪ್​ ಡೇ: ಫ್ರೆಂಡ್, ಫಿಲಾಸಫರ್, ಗೈಡ್

Ullasa- milana
Published on

ಸಾಮಾನ್ಯವಾಗಿ ಹಿರಿತೆರೆ ಮತ್ತು ಕಿರುತೆರೆಗಳ ಮುಸುಕಿನ ಗುದ್ದಾಟ, ಜಗಳ, ದ್ವೇಷದ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ. ಒಳ್ಳೆಯ ಸ್ನೇಹದ ಬಗ್ಗೆ ಚರ್ಚೆಯಾಗುವುದು ಬಹಳ ಕಡಿಮೆಯೇ. ಸೆಲೆಬ್ರಿಟಿಗಳು ಹೆಚ್ಚು ಜನರ ಜತೆ ಸೇರದಿದ್ದರೂ, ಅವರಿಗೆ ಅವರದ್ದೇ ಆದ ಗೆಳೆಯರ ವೃಂದವಿರುತ್ತದೆ. ಅವರು ವೃತ್ತಿಗೆ ಸೇರಿದವರೂ ಇರಬಹುದು, ಬೇರೆ ವೃತ್ತಿಯವರೂ ಆಗಿರಬಹುದು. ಈ ಬಾರಿಯ ವಿಶ್ವ ಸ್ನೇಹ ದಿನಕ್ಕಾಗಿ ಒಂದಿಷ್ಟು ಸೆಲೆಬ್ರಿಟಿಗಳು ತಮ್ಮ ಕುಚ್ಚಿಕು ಕುಚ್ಚಿಕೂ ಸ್ನೇಹಿತರ ಬಗ್ಗೆ ಮಾತಾಡಿದ್ದಾರೆ.

ಸಿನಿಮಾ ಕರಿಯರ್​ನ ಆರಂಭದ ದಿನಗಳಿಂದಲೂ ಕೃಷ್ಣ ನನಗೆ ಗೊತ್ತು. ಆಗ ಪ್ರೀತಿ ಬಗ್ಗೆ ಇಬ್ಬರೂ ವಿಚಾರ ಮಾಡಿರಲಿಲ್ಲ ಎಂಬುದಕ್ಕಿಂತ ನಮ್ಮಿಬ್ಬರಲ್ಲೂ ಆ ಭಾವನೆ ಮೂಡಿರಲಿಲ್ಲ. ಒಳ್ಳೆಯ ಸ್ನೇಹಿತರಾಗಿದ್ದೆವು. ಒಟ್ಟಿಗೆ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡುತ್ತಿದ್ದೆವು. ಈಗಲೂ ಮಾಡುತ್ತೇವೆ. ಸಿನಿಮಾಗೆ ಸಂಬಂಧಿಸಿದಂತೆ ಅವರಿಂದ ಹಲವು ಸಲಹೆಗಳನ್ನು ನಾನು ಪಡೆದುಕೊಂಡಿದ್ದೇನೆ. ಸಿನಿಮಾ ಅಂದರೆ ಅಲ್ಲಿ ಸೋಲು-ಗೆಲುವು ಸಹಜ. ಏರಿಳಿತಗಳು ಸಾಕಷ್ಟಿರುತ್ತವೆ. ಅದರಿಂದ ಮಾನಸಿಕವಾಗಿ ಹೆದರದೆ, ಗಟ್ಟಿಯಾಗಿರಬೇಕು. ಸಿನಿಮಾನೇ ಎಲ್ಲ ಅಂದುಕೊಳ್ಳುವುದಕ್ಕಿಂತ ಅದೊಂದು ಕರಿಯರ್ ಅಷ್ಟೇ, ಜೀವನದಲ್ಲಿ ಅದಕ್ಕಿಂತ ಹೆಚ್ಚಿನದ್ದು ತುಂಬ ಇದೆ ಎಂಬ ಸಲಹೆ ನೀಡಿದ್ದಾರೆ. ಒಂದಷ್ಟು ವಿಚಾರಗಳನ್ನು ನಮಗೆ ಬೇಕಾದವರ ಕಡೆ ಮಾತ್ರ ರ್ಚಚಿಸುತ್ತೇವೆ. ಎಲ್ಲವನ್ನೂ ಎಲ್ಲರ ಬಳಿ ಹಂಚಿಕೊಳ್ಳಲು ಆಗದು. ಅದೇ ರೀತಿ ಕೃಷ್ಣ ನನ್ನ ಕರಿಯರ್​ನ ಜತೆ ಪಯಣಿಸಿದ್ದಾರೆ. ಅವರಿಗೆ ಎಲ್ಲವೂ ಗೊತ್ತು. ಈಗಲೂ ನಮ್ಮಿಬ್ಬರ ಮಧ್ಯೆ ಹೆಚ್ಚು ಚರ್ಚೆಯಾಗುವುದು ಮತ್ತದೇ ಕರಿಯರ್ ಬಗ್ಗೆ. ಒಳ್ಳೇ ಸ್ನೇಹಿತನಾಗಿ, ಪ್ರೇಮಿಯಾಗಿ, ಆಪ್ತನಾಗಿ ಸಲಹೆ ನೀಡುತ್ತಾರೆ. ಹಾಗಾಗಿ ನನಗೆ ಕೃಷ್ಣನೇ ಎಲ್ಲ ಆಗಿದ್ದಾರೆ ಎಂದು ಹೇಳುತ್ತಾರೆ ಮಿಲನಾ ನಾಗರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net