ಕಣಚೂರು ಕಾಲೇಜಿನಲ್ಲಿ ಪ್ರೆಶರ್ಸ್‌ ಡೇ

Ull_Kanachur
Published on

ಉಳ್ಳಾಲ: ವಿದ್ಯಾರ್ಥಿನಿಯರು ಕಲಿಕೆ ಜತೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗಿಯಾಗಬೇಕು. ಸಮಾಜದ ಪ್ರತಿಯೊಬ್ಬರಿಗೂ ಗೌರವ ನೀಡಿ ಕರುಣೆ, ಸಹಾನುಭೂತಿಯಿಂದ ವರ್ತಿಸಬೇಕು. ಜೀವನದಲ್ಲಿ ಬಹಳಷ್ಟು ಅವಕಾಶಗಳಿದ್ದು ಕೇವಲ ಪಠ್ಯ ವಿಷಯದಲ್ಲಿ ಮಾತ್ರವಲ್ಲದೆ ಸಾಮಾನ್ಯ ಜ್ಞಾನ ಹಾಗೂ ಸಂಪರ್ಕ ಭಾಷೆಯಲ್ಲೂ ಜ್ಞಾನ ಹೊಂದಬೇಕು ಎಂದು ಕಣಚೂರು ಸಂಸ್ಥೆ ಸಲಹಾ ಸಮಿತಿ ಅಧ್ಯಕ್ಷ, ವಿಶ್ರಾಂತ ಕುಲಪತಿ ಪ್ರೊ.ಎಂ.ಅಬ್ದುಲ್ ರೆಹಮಾನ್ ಹೇಳಿದರು.

ಕಣಚೂರು ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಪ್ರೆಶರ್ಸ್‌ ಡೇ ಮತ್ತು ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿಲೂಷಾ, ಕಾರ್ಯದರ್ಶಿ ಆಯಿಷಾ ಸಾನಿಯಾ, ಸಹ ಕಾರ್ಯದರ್ಶಿ ಕೆ.ರೈನಾ, ಕ್ರೀಡಾ ಕಾರ್ಯದರ್ಶಿ ಶಹದಿಯ ಪರ್‌ವಿನ್, ಸಾಂಸ್ಕೃತಿಕ ಕಾರ್ಯದರ್ಶಿ ಕತೀಜತುಲ್ ಕುಬ್ರಾ ಅವರಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಇಕ್ಬಾಲ್ ಅಹಮ್ಮದ್ ಯು.ಟಿ. ಪ್ರಮಾಣ ವಚನ ಬೋಧಿಸಿದರು.

ಕಣಚೂರು ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಕ್ಯಾರೆನ್ ಡಿಸೋಜ, ಪ್ರೀ ಪ್ರೈಮರಿ ಪ್ರಾಂಶುಪಾಲೆ ಲಿನೆಟ್ ಡಿಸೋಜ, ಪಿಯು ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ. ಉಪಸ್ಥಿತರಿದ್ದರು.

ಉಪನ್ಯಾಸಕಿ ವಿಯೋಲಾ ಲೋಬೊ ಸ್ವಾಗತಿಸಿದರು. ವಿದ್ಯಾರ್ಥಿ ಸಂಘ ಅಧ್ಯಕ್ಷೆ ನಿಲೂಶಾ ವಂದಿಸಿದರು. ಉಪನ್ಯಾಸಕಿ ತೇಜಶ್ರೀ ಬಿ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net