

ಹೆಬ್ರಿ: ಇಷ್ಟೊಂದು ಸಂಸ್ಥೆಗಳು ಸೇರಿ ನಡೆಸುತ್ತಿರುವ ಸಾಮಾಜಿಕ ಕಾರ್ಯ ಸ್ತುತ್ಯರ್ಹ. ವಿದ್ಯಾರ್ಥಿಗಳು ಈ ಕಲಿಕಾ ವಸ್ತುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಮಂಜುನಾಥ ಭಟ್ ಹೇಳಿದರು.
ಒನ್ ಗುಡ್ ಸ್ಟೆಪ್ ಬೆಂಗಳೂರು, ಮ್ಯಾಸಿಲಿ ಇಂಡಸ್ಟ್ರಿ ಹಿರಿಯಡ್ಕ, ಜೆನೆಸಿಸ್ ಇಂಡಸ್ಟ್ರಿ ಮತ್ತು ನವನೀತ್ ಪಬ್ಲಿಷರ್ಸ್ ಸಿಎಸ್‌ಆರ್ ಫಂಡ್‌ನಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 800 ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಚಿತ ನೋಟ್‌ಬುಕ್ ಮತ್ತು ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು ಒನ್ ಗುಡ್ ಸ್ಟೆಪ್‌ನ ಅಮಿತಾ ಪೈ, ಹಿರಿಯಡ್ಕ ಮ್ಯಾಸಿಲಿ ಇಂಡಸ್ಟ್ರಿ ನಿರಾಲಿ, ಡೈಯಟ್ ಉಡುಪಿ ಉಪನ್ಯಾಸಕ ಯೋಗಾನಂದ, ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಎಲ್.ವಿಶ್ವಾಸ, ಸದಸ್ಯರಾದ ಅಶೋಕ್ ಜೋಗಿ, ದೇವರಾಜ್ ಶಾಸ್ತ್ರಿ, ವಿಜೇತ ಕುಮಾರ ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ ಕುಸುಮಾ ಸ್ವಾಗತಿಸಿದರು. ಶಿಕ್ಷಕ ಮೋಹನ್ ಕಡಬ ವಂದಿಸಿದರು.