

ವಿಜಯವಾಣಿ ಸುದ್ದಿಜಾಲ ಉಡುಪಿ
ವಿವಿಧ ದೃಶ್ಯ, ಚಿತ್ರ ಸೆರೆ ಹಿಡಿಯುವ ತಮ್ಮ ಕ್ಯಾಮರಾಗಳ ಲೆನ್ಸ್ (ಕಣ್ಣು)ಅನ್ನು ಎಲ್ಲ ಫೋಟೋಗ್ರಾಫರ್ಸ್ಗಳು ಅತ್ಯಂತ ಜತನದಿಂದ ಹಾಗೂ ಕಾಳಜಿಯಿಂದ ರಕ್ಷಿಸಿಕೊಳ್ಳುತ್ತಾರೆ. ಅದರಂತೆ ಎಲ್ಲ ಛಾಯಾಗ್ರಾಹಕರೂ ಸಹ ತಮ್ಮ ಕಣ್ಣುಗಳ ಬಗ್ಗೆಯೂ ಜಾಗೃತಿ ಹಾಗೂ ಕಾಳಜಿ ವಹಿಸಬೇಕು. ತಮ್ಮ ಸಂಘಟನೆಯ ಸದಸ್ಯರು ಅಥವಾ ಕುಟುಂಬದವರು ಯಾರಿಗಾದರೂ ಕಣ್ಣಿನ ದೋಷ, ಚಿಕಿತ್ಸೆಯ ಅಗತ್ಯತೆ ಇದ್ದಲ್ಲಿ ಉಚಿತವಾಗಿ ಮಾಡಿಕೊಡಲು ಬದ್ಧನಿದ್ದೇನೆ ಎಂದು ಉಡುಪಿಯ ಪ್ರಸಾದ ನೇತ್ರಾಲಯದ ಡಾ. ಕೃಷ್ಣಪ್ರಸಾದ ಭರವಸೆ ನೀಡಿದರು.
ಅಸೋಸಿಯೇಷನ್ ವತಿಯಿಂದ ಡಾ. ಕೃಷ್ಣಪ್ರಸಾದ ಹಾಗೂ ದಿನಾಚರಣೆ ನಿಮಿತ್ತ ಹಿರಿಯ ಛಾಯಾಗ್ರಾಹಕ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂದ ಸದಸ್ಯರ ಆರೋಗ್ಯಕ್ಕೆ ಸಹಾಯಧನ ವಿತರಿಸಲಾಯಿತು.
ಉಡುಪಿ ವಲಯದ ಅಧ್ಯಕ್ಷ ಸುಧೀರ ಎಂ. ಶೆಟ್ಟಿ. ಜಿಲ್ಲಾ ಉಪಾಧ್ಯಕ್ಷ ಪ್ರವೀಣ, ಉಡುಪಿ ವಲಯದ ಗೌರವಾಧ್ಯಕ್ಷರಾದ ನವೀನ ಬಲ್ಲಾಳ, ಕಾರ್ಯದರ್ಶಿಗಳಾದ ದಿವಾಕರ ಹಿರಿಯಡ್ಕ, ರಮೇಶ ಭಟ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಸಂಸ್ಥೆಯ 70ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು.