ಚಿನ್ನಾಭರಣ ಪಡೆದು ವಂಚನೆ

Fraud
Published on

ಉಪ್ಪಿನಂಗಡಿ: ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಪಡೆದು ವಂಚಿಸಿರುವುದು ಉಪ್ಪಿನಂಗಡಿಯಲ್ಲಿ ನಡೆದಿದೆ. ತುರ್ತಾಗಿ ಆಭರಣ ಬೇಕಾಗಿದ್ದು, ಹುಡುಗನೋರ್ವನನ್ನು ಚೆಕ್‌ನೊಂದಿಗೆ ಕಳುಹಿಸುತ್ತಿದ್ದೇನೆ. ಅವನಿಂದ ಚೆಕ್ ಪಡೆದು ಚಿನ್ನಾಭರಣ ನೀಡಿ ಎಂದು ಪೋನ್ ಮೂಲಕ ಮಹಿಳೆಯೋರ್ವರು ತಿಳಿಸಿದ ಕಾರಣಕ್ಕೆ ಚಿನಾಭರಣ ನೀಡಲಾಗಿದೆ. ಆದರೆ ಚೆಕ್ ಖಾತೆಯಲ್ಲಿ ಹಣವಿಲ್ಲವೆಂದು ತಿಳಿಸಿದ್ದಕ್ಕೆ ಆ ಮಹಿಳೆ ಚೆಕ್ಕನ್ನು ಬ್ಯಾಂಕಿಗೆ ಹಾಕಬೇಡಿ, ನನಗೆ ಇನ್ನಷ್ಟು ಚಿನ್ನಾಭರಣಬೇಕಾಗಿದ್ದು, ಹಣವನ್ನು ನೆಫ್ಟ್ ಮಾಡುತ್ತೇನೆಂದು ತಿಳಿಸಿ ನೆಫ್ಟ್ ದಾಖಲೆಯನ್ನು ವಾಟ್ಸ್ಯಾಪ್ ಮೂಲಕ ಕಳುಹಿಸಿದ್ದಾಳೆ. ಕೂಡಲೇ ಮತ್ತಷ್ಟು ಚಿನ್ನಾಭರಣವನ್ನು ಬಸ್ ಮೂಲಕ ಕಳುಹಿಸಿದ್ದು, ಬಳಿಕ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ನೆಫ್ಟ್ ಹಣವೂ ಖಾತೆಗೆ ಜಮೆಯಾಗಿಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ. ಒಟ್ಟು 53 ಗ್ರಾಂ ತೂಕದ ಚಿನ್ನಾಭರಣವನ್ನು ಚೆಕ್ ಮತ್ತು ನೆಫ್ಟ್ ಹೆಸರಿನಲ್ಲಿ ಪಡೆದು ವಂಚಿಸಲಾಗಿದೆ ಎಂದು ಅಂಗಡಿ ಮಾಲೀಕ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net