ಜರ್ಮನಿಯಿಂದ ಔಷಧ ತರಿಸಿಕೊಡುವುದಾಗಿ ನಂಬಿಸಿ 1.50 ಲಕ್ಷ ರೂ. ದೋಖಾ

medicine
Published on

ಮೈಸೂರು: ಜರ್ಮನಿಯಿಂದ ಔಷಧ ತರಿಸಿಕೊಡುವುದಾಗಿ ನಗರದ ಮಹಿಳೆಯೊಬ್ಬರಿಗೆ 1.5 ಲಕ್ಷ ರೂ. ವಂಚಿಸಲಾಗಿದೆ.

ಗಾಯಿತ್ರಿಪುರಂ ನಿವಾಸಿ ಹುಮೇರಾ ಜೈನಾಬ್ ವಂಚನೆಗೊಳಗಾದವರು. ಹುಮೇರಾ ಜೈನಾಬ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡ ವಂಚಕನೊಬ್ಬ, ಜರ್ಮನಿಯಲ್ಲಿ ನನ್ನ ಸಹೋದರ ಡಾಕ್ಟರ್ ಆಗಿದ್ದು, ಅವರ ಮೂಲಕ ನಿಮ್ಮ ಪುತ್ರನಿಗೆ ಅಗತ್ಯವಿರುವ ಔಷಧ ತರಿಸಿಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದಿದ್ದ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net