ಮೂಡುಬಿದಿರೆಯಲ್ಲಿ ಪಶು ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ

New Project (22)
Published on

ಮೂಡುಬಿದಿರೆ: ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಎರಡು ಪಶು ಚಿಕಿತ್ಸಾ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಕಾರಣಾಂತರಗಳಿಂದ ತಡವಾಗಿದೆ. ಇದೀಗ ಹಳೇ ಕಟ್ಟಡ ದುರಸ್ತಿಗೊಳಿಸಿ ಹೊಸ ಕಟ್ಟಡ ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಉವಾನಾಥ ಕೋಟ್ಯಾನ್ ಹೇಳಿದರು.

ದ.ಕ. ಜಿಪಂ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆರ್.ಐ.ಡಿ.ಎಫ್.28ರಲ್ಲಿ ಮೂಡುಬಿದಿರೆ ಹಾಗೂ ಶಿರ್ತಾಡಿಯಲ್ಲಿ ತಲಾ 53 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾ ಣಗೊಳ್ಳಲಿರುವ ಪಶು ಆಸ್ಪತ್ರೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಎಂಆರ್‌ಪಿಎಲ್‌ನ ಸಿಆರ್‌ಎಸ್ ಅನುದಾನದಿಂದ ಪಶು ಶಸ್ತ್ರಚಿಕಿತ್ಸಾ ವಿಭಾಗ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಬೇಕಾಗುವ ಸವಲತ್ತು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದರು. ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರಾದ ರಾಜೇಶ್ ನಾಯ್ಕ, ನವೀನ್ ಶೆಟ್ಟಿ, ಸೌಮ್ಯಾ ಶೆಟ್ಟಿ, ಪ್ರಸಾದ್ ಭಂಡಾರಿ, ಶಿರ್ತಾಡಿ ಗ್ರಾಪಂ ಅಧ್ಯಕ್ಷೆ ಆಗ್ನೇಸ್ ಡಿಸೋಜ, ಸದಸ್ಯ ಸಂತೋಷ್, ಪ್ರವೀಣ್ ಕುವಾರ್ ಜೈನ್, ಸಂತೋಷ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕುಸುವಾಧರ, ಜಿಲ್ಲಾ ಸಹಾಯಕ ಪಶು ಉಪನಿರ್ದೇಶಕ ಡಾ.ಅರುಣ್ ಕುವಾರ್, ಹಿರಿಯ ಪಶುವೈದ ಡಾ.ಮಲ್ಲಿಕಾರ್ಜುನ ರಾಯಪ್ಪ ಈಳಿಗೇರ, ಇಂಜಿನಿಯರ್ ದತ್ತಾತ್ರೆಯ ಕುಲಕರ್ಣಿ, ರಾಜ್ಯ ಸರ್ಕಾರಿ ನೌಕರರ ಸಂದ ಅಧ್ಯಕ್ಷ ದೊರೆಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net