

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಜಗತ್ತಿನಲ್ಲಿ ಒಳ್ಳೆಯ ಶಕ್ತಿಗಳು ಇರುವಂತೆ ದುಷ್ಟ ಶಕ್ತಿಗಳೂ ಇವೆ. ದೇವಸ್ಥಾನ, ಮಠಗಳು ಹೆಚ್ಚಾದಂತೆ ಮನುಷ್ಯನಲ್ಲಿರುವ ಕಾಮ, ಕ್ರೋಧ, ಮತ್ಸರ ನಿಯಂತ್ರಣಗೊಂಡು ದುಷ್ಟಶಕ್ತಿಗಳು ದೂರವಾಗುತ್ತವೆ. ದೇವರ ಮೇಲಿನ ದೃಢನಂಬಿಕೆ ನಮ್ಮ ಕೆಲಸ ಕಾರ್ಯಗಳಿಗೆ ಶಕ್ತಿ ನೀಡುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಡೂರು ಮರಿಯಾಣ ಪಾಲು ಕೊಂಡಾಣದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಶಿವ ದುರ್ಗಂಬಾ ಮಠಕ್ಕೆ ಶಿಲಾನ್ಯಾಸಗೈದು ಮಾತನಾಡಿದರು.
ಮಾಜಿ ಸಂಸದರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಿವ ದುರ್ಗಂಬಾ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಕೂಡ್ಲು ಸದಾಶಿವ ದೇವಸ್ಥಾನದ ಅರ್ಚಕ ನಾಗೇಂದ್ರ ಭಟ್, ವಿಟ್ಲ ಸೀಮೆ ಹೊಸಬೀಡು ಅರಮನೆಯ ಜನಾರ್ದನ ಬಳ್ಳಾಲ್, ಚಲನಚಿತ್ರ ನಟ ಎಸ್.ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂದ ನಿರ್ದೇಶಕ ಉದಯಕುಮಾರ್ ಶೆಟ್ಟಿ, ವಕೀಲ ಉಮೇಶ್ ಶೆಟ್ಟಿ, ಉದ್ಯಮಿ ದಯಾನಂದ ಬೆಂಗಳೂರು, ಮಠದ ಮೊಕ್ತೇಸರ ಯಶವಂತ್ ಆಳ್ವ, ಕೋಟೆಕಾರ್ ಪ.ಪಂ. ಸದಸ್ಯ ನವೀನ್ ಕೊಂಡಾಣ ಮೊದಲಾದವರಿದ್ದರು.
ನವನಿರ್ಮಾಣ ಸಮಿತಿ ಅಧ್ಯಕ್ಷ ಸಂತೋಷ್ ಕುವಾರ್ ರೈ, ಬೋಳಿಯಾರ್ ಸ್ವಾಗತಿಸಿದರು. ಮಠದ ಆಡಳಿತ ಮೋಕ್ತೇಸರ ಚಂದ್ರಶೇಖರ್ ಉಚ್ಚಿಲ್ ಪ್ರಸ್ತಾವಿಸಿದರು. ವೇಣುಗೋಪಾಲ ಭಟ್ ನಿರೂಪಿಸಿದರು. ಆನಂದ ಶೆಟ್ಟಿ ವಂದಿಸಿದರು.
ನಾನು, ನನ್ನಿಂದ ಎನ್ನುವುದೆಲ್ಲವೂ ಶೂನ್ಯ. ತಿಂಗಳ ಹಿಂದೆ ನಡೆಸಿದ ಚಿಂತನೆ ಇಷ್ಟು ಬೇಗ ಸಾಕಾರ ಆಗಬೇಕಾದರೆ ದೇವರು ನಮ್ಮ ಜತೆ ಇರುವುದಕ್ಕೆ ಸಾಕ್ಷಿ. ಶ್ರದ್ಧಾ, ಭಕ್ತಿಯಿಂದ ಭಗವಂತನನ್ನು ಆರಾಧಿಸಿದರೆ ಎಲ್ಲ ಕಾರ್ಯ ಯಶಸ್ವಿಯಾಗಿ ನೆರವೇರುತ್ತದೆ. ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಶಿವ ದುರ್ಗಂಬಾ ಮಠ ಕರಾವಳಿ ಕರ್ನಾಟಕದಲ್ಲಿ ದೇವರ ಕೆಲಸ ಅತ್ಯಂತ ಶ್ರದ್ಧೆ, ಭಕ್ತಿಯಿಂದ ಮಾಡುವಂತೆ ಬೇರೆಲ್ಲೂ ಇಲ್ಲ. ಹಿಂದು ಸಮಾಜ ಹಲವಾರು ಸಮಯಗಳಿಂದ ಪೀಳಿಗೆಯಿಂದ ಪೀಳಿಗೆಗೆ ಜಾತಿಯ ಕಾರಣಕ್ಕೆ ದೂರವಿಡುವ ಪದ್ಧತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ಇದೆ. ಮಠ, ದೇವಸ್ಥಾನಗಳು ಎಲ್ಲ ಸಮಾಜವನ್ನು ಹತ್ತಿರ ಸೇರಿಸುವ ತಾಣವಾಗಬೇಕು. ಸತ್ಯ, ಧರ್ಮದ ಆಧಾರದಲ್ಲಿ ನಮ್ಮ ನಡೆ ನುಡಿ ಇರಬೇಕು. ಕ್ಯಾ.ಬ್ರಿಜೇಶ್ ಚೌಟ, ಸಂಸದರು https://www.vijayavani.net/adinathswamy-basadi-program https://www.vijayavani.net/nh-75-four-lane-work