ಬದಿಯಡ್ಕ: ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದ ನೂತನ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಅ.23ರಂದು ಬುಧವಾರ ಬೆಳಗ್ಗೆ 10.33ಕ್ಕೆ ಜರುಗಲಿರುವುದು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಶಿಲಾನ್ಯಾಸ ನೆರವೇರಿಸುವರು. ಕಿಳಿಂಗಾರು ಶಿವಶಂಕರ ಭಟ್, ಶಿಲ್ಪಿ ರಮೇಶ್ ಕಾರಂತ ನೇತೃತ್ವ ವಹಿಸುವರು. ಬಳಿಕ ಶ್ರೀಗಳು ಆಶೀರ್ವಚನ ನೀಡುವರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಸಭೆ ಉದ್ಘಾಟಿಸಲಿರುವರು.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. ಉಳಿಯ ವಿಷ್ಣು ಆಸ್ರ, ಬೇಳ ಪದ್ಮನಾಭ ಶರ್ಮ ಇರಿಞಾಲಕ್ಕುಡ, ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ, ಮಧುಸೂದನ ಆಯರ್, ಉದ್ಯಮಿ ದಿನಕರ ಭಟ್ ಮಾವೆ ಪಾಲ್ಗೊಳ್ಳಲಿರುವರು ಎಂದು ಪ್ರಕಟಣೆ ತಿಳಿಸಿದೆ.