ಆರೋಗ್ಯವಂತ ಜನರಿಂದ ಸಮಾಜ ಸುಸ್ಥಿರ : ಪಾಲ್ತಾಡಿಯಲ್ಲಿ ಭಾಗೀರಥಿ ಮುರುಳ್ಯ ಅನಿಸಿಕೆ

New Project (13)
Published on

ಕಡಬ: ಆರೋಗ್ಯದಿಂದ ಸಮಾಜ ಸುಸ್ಥಿರವಾಗುತ್ತದೆ. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಕೇಂದ್ರ ಆರಂಭಿಸುವ ಮೂಲಕ ಎಲ್ಲರಿಗೂ ಆರೋಗ್ಯ ಸೇವೆ ದೊರೆಯಲು ಸಹಕಾರಿಯಾಗುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಪಾಲ್ತಾಡಿಯ ಅಂಕತಡ್ಕದಲ್ಲಿ ಸುಮಾರು 65 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಸವಣೂರು ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಗಿರಿಶಂಕರ ಸುಲಾಯ, ಸತೀಶ್ ಅಂಗಡಿಮೂಲೆ, ಎಂ.ಎ.ರಫೀಕ್, ಭರತ್ ರೈ, ಬಾಬು ಎನ್, ಚಂದ್ರಾವತಿ ಸುಣ್ಣಾಜೆ, ಯಶೋದಾ ನೂಜಾಜೆ, ಚೇತನಾ ಶಿವಾನಂದ, ಹರಿಕಲಾ ರೈ ಕುಂಜಾಡಿ, ತಾರಾನಾಥ ಬೊಳಿಯಾಲ, ವಿನೋದಾ ರೈ ಚೆನ್ನಾವರ, ಶಬೀನಾ, ಸವಣೂರು ಪ್ರಾಕೃಪಸ ಸಂಘದ ನಿರ್ದೇಶಕ ಗಂಗಾಧರ ಪೆರಿಯಡ್ಕ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಸುಧಾಕ್ಷಿಣಿ, ಚೈತ್ರಾ, ಅಕ್ಷತಾ, ರಶ್ಮಿ ಮೊದಲಾದವರಿದ್ದರು. ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಮಧುಶ್ರೀ ಸ್ವಾಗತಿಸಿದರು. ಪಾಲ್ತಾಡಿ ಗ್ರಾಮವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ವಂದಿಸಿದರು. ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ. ನಿರೂಪಿಸಿದರು.

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ವರ್ಷ 7 ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, 3 ಕೇಂದ್ರಗಳ ಕಾಮಗಾರಿ ಆರಂಭವಾಗಿದೆ. ಭಾಗೀರಥಿ ಮುರುಳ್ಯ, ಸುಳ್ಯ ಶಾಸಕಿ https://www.vijayavani.net/kootaja-re-establishment-brahmakalashotsava-meeting https://www.vijayavani.net/establishment-of-a-nursery-school-in-kalyangad-constituency

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net