

ಭಾರತೀಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರು ಕಳಪೆ ಫಾರ್ಮ್ನಿಂದ ಹೊರಬರಲು ದೇಶಿಯ(Ranaji)(ರಣಜಿ ಟ್ರೋಫಿ) ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ, ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಸಲಹೆ ನೀಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಎಎನ್ಐ ಸಂದರ್ಶನದಲ್ಲಿ ಮಾತಮಾಡಿದ ಯೋಗರಾಜ್ ಸಿಂಗ್, ಕಿಂಗ್ ಕೊಹ್ಲಿ ಮತ್ತು ಹಿಟ್ಮ್ಯಾನ್ ರೋಹಿತ್ ಫಾರ್ಮ್ ಬಗ್ಗೆ ಟೀಕೆ ಮಾಡಿದ್ದಾರೆ.
ನೀವು(ರೋಹಿತ್ ಮತ್ತು ಕೊಹ್ಲಿ) ಎಂದಿಗೂ ಆಟಕ್ಕಿಂತ ದೊಡ್ಡವರಾಗಲು ಸಾಧ್ಯವಿಲ್ಲ. ವಿವ್ ರಿಚರ್ಡ್ಸ್ ಅಥವಾ ಡಾನ್ ಬ್ರಾಡ್ಮನ್ ಆಗಲಿ ಎಂದಿಗೂ ಕ್ರಿಕೆಟ್‌ಗಿಂತ ದೊಡ್ಡವರಾಗಿರಲಿಲ್ಲ ಅದು ಯಾರೂ ಆಗಲು ಸಾಧ್ಯವಿಲ್ಲ. ಹೀಗಾಗಿ, ನೀವು ಏನು ಮಾಡುತ್ತೀರಿ ಎಂದರೆ ಪ್ರವಾಸದಿಂದ ಹಿಂತಿರುಗಿ ನೀವು ದೇಶೀಯ ಕ್ರಿಕೆಟ್ ಆಡಲು ಪ್ರಾರಂಭಿಸಬೇಕು. ಟೆಸ್ಟ್ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಆಡಿದಾಗ ಅವರೊಂದಿಗೆ ಆಡುವ ಉಳಿದ ಯುವಕರು ಹೆಚ್ಚಿನ ಆತ್ಮವಿಶ್ವಾಸವನ್ನು ಪಡೆಯುತ್ತಾರೆ ಎಂದು ಯೋಗರಾಜ್ ತಿಳಿಸಿದ್ದಾರೆ.
ಭಾರತ ತಂಡಕ್ಕೆ ಸೇರ್ಪಡೆಯಾಗದಿದ್ದಾಗ ಅವರ ಮಗ ಯುವರಾಜ್ ಕೂಡ ರಣಜಿ ಪಂದ್ಯಗಳನ್ನು ಆಡುತ್ತಿದ್ದರು ಎಂದು ಯೋಗರಾಜ್ ಸಂದರ್ಶನದಲ್ಲಿ ಗಮನಸೆಳೆದರು. ವಿರಾಮದ ಅವಧಿಯಲ್ಲಿ ರೋಹಿತ್ ಮತ್ತು ಕೊಹ್ಲಿಗೆ ಅದೇ ರೀತಿ ಮಾಡುವಂತೆ ಒತ್ತಾಯಿಸಿದ ಅವರು, ಏಕೆಂದರೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅವರಿಗೆ ಹೆಚ್ಚು ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)