

ಅಕ್ಲೆಂಡ್: 1955ರಲ್ಲಿ ಬೆಂಗಳೂರಿನಲ್ಲಿ ಬೀದಿ ನಾಯಿ ಕಡಿತಕ್ಕೊಳಗಾಗಿದ್ದ ನ್ಯೂಜಿಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮ್ಯಾಟ್ ಪೂರೆ ಶನಿವಾರ ನಿಧನರಾದರು. ಪ್ರಾಣಿ ಪ್ರಿಯರಾಗಿದ್ದ ಮ್ಯಾಟ್, ಸಿಲಿಕಾನ್ ಸಿಟಿಗೆ ಟೆಸ್ಟ್ ಆಡಲು ಆಗಮಿಸಿದ್ದ ವೇಳೆ ಬೀದಿ ನಾಯಿಯೊಂದನ್ನು ಮುದ್ದಾಡಲು ಹೋಗಿ ಕಡಿಸಿಕೊಂಡಿದ್ದರು ಎಂದು ವರದಿಯಾಗಿತ್ತು. ಈ ವೇಳೆ 12 ದಿನಗಳ ಕಾಲ ಬೆಂಗಳೂರಿನಲ್ಲೇ ಉಳಿದ ಮ್ಯಾಟ್ 12 ಆಂಟಿ-ರೇಬಿಸ್ ಇಂಜೆಕ್ಷನ್ ಪಡೆದಿದ್ದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು.
stuff.co.nz ವರದಿಯಂತೆ ಬೆಂಗಳೂರಿನಲ್ಲಿ ಮೈದಾನದಲ್ಲಿ ನುಗ್ಗಿದ ನಾಯಿಯನ್ನು ಹಿಡಿಯಲು ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ರೇಬಿಸ್ ಕಾಯಿಲೆ ಭಯದಿಂದಾಗಿ 12 ಚುಚ್ಚು ಮದ್ದುಗಳನ್ನು ನೀಡಲಾಗಿತ್ತು ಎಂದು ವರದಿ ಹೇಳಿದೆ. ಆದರೆ, ಆ ವೇಳೆ ಬೆಂಗಳೂರಿನಲ್ಲಿ ಯಾವುದೇ ಟೆಸ್ಟ್ ಪಂದ್ಯಗಳು ನಡೆದಿಲ್ಲ ಅಂತಾನೂ ಹೇಳಲಾಗುತ್ತಿದೆ. ಯಾವ ವೇಳೆ ಮ್ಯಾಟ್ ಪೂರೆ ಬೆಂಗಳೂರಿನಲ್ಲಿ ನಾಯಿಯಿಂದ ಕಡಿತಕ್ಕೊಳಗಾಗಿದ್ದರು ಎಂಬುದು ಸ್ಪಷ್ಟತೆ ಇಲ್ಲ. ಈ ವೇಳೆ ಹೈದರಾಬಾದ್, ದೆಹಲಿ, ಮುಂಬೈ ಹಾಗೂ ಚೆನ್ನೈನಲ್ಲಿ ಟೆಸ್ಟ್ ಪಂದ್ಯಗಳು ನಡೆದಿದ್ದವು.
ಅಂದಿನ ಪ್ರವಾಸಕ್ಕೆ ವೈದ್ಯರನ್ನು ಕರೆದೊಯ್ದಿರಲಿಲ್ಲ. ನಾಯಿ ಕಡಿತಕ್ಕೊಳಗಾದ ಮ್ಯಾಟ್‌ಗೆ 2 ವಾರಗಳ ಕಾಲ ಚುಚ್ಚುಮದ್ದು ನೀಡಲಾಗಿತ್ತು. ‘ನಮ್ಮ ಇಡೀ ಕುಟುಂಬಕ್ಕೆ ನಾಯಿಗಳನ್ನು ಕಂಡರೆ ಇಷ್ಟ. ಒಮ್ಮೆ ನಾಯಿಯಿಂದಲೂ ತಂದೆ ಕಚ್ಚಿಸಿಕೊಂಡಿದ್ದರು ಎಂದು ಮ್ಯಾಟ್ ಪೊರೆ ಮಗ ರಿಚರ್ಡ್ ಸ್ಮರಿಸಿದ್ದಾರೆ. 1953 ರಿಂದ 1956 ನ್ಯೂಜಿಲೆಂಡ್ ತಂಡವಾಗಿದ್ದ ಮ್ಯಾಟ್ 14 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಸರಾಸರಿ 15.43 ರಂತೆ 355 ರನ್ ಗಳಿಸಿದ್ದರು.