

ನವದೆಹಲಿ: ಕ್ರಿಕೆಟ್ ಲೋಕದ ಮಾಂತ್ರಿಕ ಎನಿಸಿಕೊಂಡಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸಚಿನ್ ತೆಂಡೂಲ್ಕರ್ ಜತೆ ಪುಟಾಣಿ ಬಾಲಕನೊಬ್ಬ ಬಾಕ್ಸಿಂಗ್ ಮಾಡಿದ್ದಾನೆ. ಆತನ ಬಾಕ್ಸಿಂಗ್ ಶೈಲಿಯನ್ನು ಮೆಚ್ಚಿರುವ ಸಚಿನ್, ಪೋರನ ಬಗ್ಗೆ ಸಿಹಿಯಾದ ಮಾತುಗಳನ್ನಾಡಿದ್ದಾರೆ.
ನಿನ್ನೆ (ಮಾ.8) ಸಚಿನ್ ತೆಂಡೂಲ್ಕರ್ ತನ್ನ ಸಹ ಆಟಗಾರ ಇರ್ಫಾನ್ ಪಠಾಣ್ ಅವರ ಮಗ ಇಮ್ರಾನ್ನನ್ನು ಭೇಟಿ ಮಾಡಿದ್ದಾರೆ. ಮೂರು ವರ್ಷದ ಆ ಪುಟ್ಟ ಬಾಲಕನೊಂದಿಗೆ ಮಗುವಾಗಿ ಕಾಲ ಕಳೆದಿದ್ದಾರೆ. ಆಟದ ಒಂದು ಭಾಗವಾಗಿ ಇಮ್ರಾನ್ ಸಚಿನ್ಗೆ ಬಾಕ್ಸಿಂಗ್ ಪಂಚ್ಗಳನ್ನು ನೀಡಿದ್ದಾನೆ.
ತನ್ನ ಮಗ ಸಚಿನ್ಗೆ ಪಂಚ್ ಮಾಡುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಇರ್ಫಾನ್, ಅವನು ಏನು ಮಾಡಿದ್ದಾನೆ ಅವನಿಗೆ ತಿಳಿದಿಲ್ಲ, ದೊಡ್ಡವನಾದ ಮೇಲೆ ಅವನಿಗೆ ಅದು ತಿಳಿಯುತ್ತದೆ ಎಂದು ಹೇಳಿಕೊಂಡಿದ್ದಾರೆ. ಇರ್ಫಾನ್ ಅವರ ಈ ಪೋಸ್ಟ್ನ್ನು ಶೇರ್ ಮಾಡಿರುವ ಸಚಿನ್, "ಮಕ್ಕಳೊಂದಿಗೆ ಆಟವಾಡಲು ಯಾವಾಗಲೂ ಖುಷಿಯಾಗುತ್ತದೆ. ನಿನ್ನ ತೋಳುಗಳು ಖಂಡಿತವಾಗಿಯೂ ಒಂದು ದಿನ ನಿನ್ನ ಅಪ್ಪ ಇರ್ಫಾನ್ ಮತ್ತು ನನ್ನ ತೋಳುಗಳನ್ನು ಮೀರಿ ಬೆಳೆಯುತ್ತದೆ." ಎಂದು ಹೇಳಿದ್ದಾರೆ.
ಸದ್ಯ ಸಚಿನ್ ತೆಂಡೂಲ್ಕರ್ ಮತ್ತು ಇರ್ಪಾನ್ ಪಠಾಣ್ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ನಲ್ಲಿ ಭಾಗವಹಿಸುತ್ತಿದ್ದಾರೆ. ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾದ ಕ್ರಿಕೆಟ್ ತಂಡಗಳು ಈ ಸೀರಿಸ್ನಲ್ಲಿ T20 ಆಟವನ್ನು ಆಡುತ್ತಿವೆ. (ಏಜೆನ್ಸೀಸ್)