ಮಾಜಿ ಗೃಹ ಸಚಿವ ಡಾ. ಆಚಾರ್ಯ ಪುಣ್ಯ ಸಂಸ್ಮರಣೆ

udp-14-bjp
Published on

ಉಡುಪಿ: ಮಾಜಿ ಗೃಹ ಸಚಿವ, ನವ ಉಡುಪಿ ನಿಮಾರ್ತೃ ಕೀರ್ತಿಶೇಷ ಡಾ. ವಿ.ಎಸ್​. ಆಚಾರ್ಯ ಪುಣ್ಯ ಸಂಸ್ಮರಣೆಯ ಪ್ರಯುಕ್ತ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಸಂಕೀರ್ಣ ಮಣಿಪಾಲ ರಜತಾದ್ರಿ ಮುಂಭಾಗದಲ್ಲಿರುವ ಡಾ. ವಿ.ಎಸ್​. ಆಚಾರ್ಯ ಅವರ ಪುತ್ಥಳಿಗೆ ಪುಷ್ಪಾರ್ಚನೆಗೈದು ಗೌರವ ನಮನ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ ಹಾಗೂ ಶಾಸಕ ಯಶ್ಪಾಲ್​ ಎ. ಸುವರ್ಣ ಮಾಲಾರ್ಪಣೆಗೈದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್​, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್​ ರತ್ನಾಕರ ಹೆಗ್ಡೆ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್​ ಕಾವೇರಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್​ ಅಮೀನ್​, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್​. ಕುಂದರ್​, ಉಡುಪಿ ನಗರಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್​. ನಾಯಕ್​, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್​, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಪ್​ ಡಿಸೋಜ, ಪ್ರಮುಖರಾದ ನಳಿನಿ ಪ್ರದಿಪ್​ ರಾವ್​, ವೀಣಾ ಎಸ್​. ಶೆಟ್ಟಿ, ಜಗದೀಶ್​ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ಅಶೋಕ್​ ನಾಯ್ಕ್​, ಕಲ್ಪನಾ ಸುಧಾಮ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net