ಐಸಿಸಿ ರ‌್ಯಾಂಕಿಂಗ್ ಪದ್ಧತಿಯ ರೂವಾರಿ, ಇಂಗ್ಲೆಂಡ್ ಮಾಜಿ ನಾಯಕ ಡೆಕ್ಸ್‌ಟರ್ ಇನ್ನಿಲ್ಲ

dexter web
Published on

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪ್ರತಿಷ್ಠಿತ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಮಾಜಿ ಅಧ್ಯಕ್ಷ ಟೆಡ್ ಡೆಕ್ಸ್‌ಟರ್ (86 ವರ್ಷ) ವಯೋಸಹಜ ಅನಾರೋಗ್ಯದಿಂದ ಗುರುವಾರ ನಿಧನ ಹೊಂದಿದರು. ಐಸಿಸಿ ರ‌್ಯಾಂಕಿಂಗ್ ಪದ್ಧತಿ ರೂಪಿಸುವಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಮಧ್ಯಮ ವೇಗದ ಬೌಲರ್ ಆಗಿದ್ದ ಡೆಕ್ಸ್‌ಟರ್ 1958ರಿಂದ 1968ರ ನಡುವೆ 62 ಟೆಸ್ಟ್ ಆಡಿ 47.89ರ ಸರಾಸರಿಯಲ್ಲಿ 4,502 ರನ್ ಮತ್ತು 66 ವಿಕೆಟ್ ಗಳಿಸಿದ್ದರು. ಈ ಪೈಕಿ 30 ಟೆಸ್ಟ್‌ಗಳಲ್ಲಿ ಅವರು ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದರು. ಅವರ 9 ಶತಕಗಳ ಪೈಕಿ 6ರಲ್ಲಿ 140ಕ್ಕಿಂತ ಹೆಚ್ಚಿನ ರನ್ ಪೇರಿಸಿದ್ದರು. ‘ಲಾರ್ಡ್ ಟೆಡ್’ ಎಂಬ ನಿಕ್‌ನೇಮ್ ಹೊಂದಿದ್ದ ಅವರು ಈ ವರ್ಷ ಐಸಿಸಿ ಹಾಲ್ ಆ್ ೇಮ್‌ಗೂ ಸೇರ್ಪಡೆಗೊಂಡಿದ್ದರು.

ಕ್ರಿಕೆಟ್‌ನಲ್ಲಿ ಡಿಜಿಟಲ್ ತಂತ್ರಜ್ಞಾನದ ಕ್ರಾಂತಿ ತರುವಲ್ಲಿ ಡೆಕ್ಸ್‌ಟರ್ ಪ್ರಮುಖ ಪಾತ್ರವಹಿಸಿದ್ದರು. ಅವರು 1986ರಲ್ಲಿ ರೂಪಿಸಿದ್ದ ಆಟಗಾರರ ರ‌್ಯಾಂಕಿಂಗ್ ಪದ್ಧತಿಯನ್ನು ಬಳಿಕ ಐಸಿಸಿ ಅಳವಡಿಸಿಕೊಂಡಿತ್ತು. ನಿವೃತ್ತಿಯ ನಂತರದಲ್ಲಿ ಅವರು ಪತ್ರಕರ್ತ, ವೀಕ್ಷಕವಿವರಣೆಕಾರ ಮತ್ತು ಇಂಗ್ಲೆಂಡ್ ಆಯ್ಕೆ ಮಂಡಳಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 21 ಸಾವಿರಕ್ಕೂ ಅಧಿಕ ರನ್ ಮತ್ತು 419 ವಿಕೆಟ್ ಗಳಿಸಿದ್ದರು.

ಇಂಗ್ಲೆಂಡ್ ತಂಡ ಶ್ರದ್ಧಾಂಜಲಿ

ಡೆಕ್ಸ್‌ಟರ್‌ಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇಂಗ್ಲೆಂಡ್ ತಂಡದ ಆಟಗಾರರು ಲೀಡ್ಸ್ ಟೆಸ್ಟ್‌ನ 2ನೇ ದಿನದಾಟದಲ್ಲಿ ಭುಜಕ್ಕೆ ಕಪ್ಪು ಪಟ್ಟಿ ಧರಿಸಿ ಆಡಿದರು. ಡೆಕ್ಸ್‌ಟರ್ ನಿಧನಕ್ಕೆ ಐಸಿಸಿ ಮತ್ತು ಎಂಸಿಸಿ ಸಂತಾಪ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net