More

  ಶಾಸಕ ಸ್ಥಾನದಿಂದ ಮಾಜಿ ಸಚಿವ ರಾಜ್ ಕುಮಾರ್ ಆನಂದ್ ಅನರ್ಹ!

  ನವದೆಹಲಿ: ದೆಹಲಿ ವಿಧಾನಸಭೆ ಸದಸ್ಯತ್ವದಿಂದ ಶಾಸಕ ರಾಜ್‌ ಕುಮಾರ್‌ ಆನಂದ್‌ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್‌ ರಾಮ್‌ ನಿವಾಸ್‌ ಗೋಯಲ್‌ ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ: ಬಿಎಸ್​ವೈ ವಿರುದ್ಧ ಸೇಡಿನ ರಾಜಕಾರಣ: ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಜೋಶಿ ಕಿಡಿ

  ರಾಜ್‌ ಕುಮಾರ್‌ ಆನಂದ್‌ ಅವರು ಆಮ್‌ ಆದ್ಮಿ ಪಕ್ಷದ ನಾಯಕರಾಗಿದ್ದರು. ಅಲ್ಲದೆ, ಇವರು ದೆಹಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಈಗ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಆನಂದ್ ಅವರು ಎಎಪಿ ಮತ್ತು ಮಂತ್ರಿಸ್ಥಾನಕ್ಕೆ ಸ್ಥಾನಕ್ಕೆ ಏಪ್ರಿಲ್‌ನಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇರಲು ರಾಜೀನಾಮೆ ನೀಡಿದ್ದರು.

  “ಆನಂದ್‌ ಅವರಿಗೆ ಜೂನ್‌ 10ರೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ನೋಟಿಸ್‌ ನೀಡಲಾಗಿತ್ತು ಆದರೆ, ಅವರು ನೋಟಿಸ್‌ಗೆ ಇದುವರೆಗೆ ಉತ್ತರ ನೀಡಿರಲಿಲ್ಲ. ಜೂನ್‌ 11ರಂದು ಹಾಜರಾಗಬೇಕು ಎಂದು ಕೂಡ ಅದೇ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಆದರೂ, ಅವರು ಹಾಜರಾಗಿಲ್ಲ. ಜೂನ್‌ 14ರವರೆಗೆ ಹಾಜರಾಗಲು ಕೂಡ ಸಮಯಾವಕಾಶ ನೀಡಲಾಗಿತ್ತು. ಹೀಗಿದ್ದರೂ ಅವರು ಹಾಜರಾಗಿಲ್ಲ. ಹಾಗಾಗಿ, ವಿಧಾನಸಭೆಯಿಂದ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ” ಎಂದು ಸ್ಪೀಕರ್‌ ತಿಳಿಸಿದ್ದಾರೆ.

  ರಾಜ್‌ ಕುಮಾರ್‌ ಆನಂದ್‌ ಅವರು 2020ರ ವಿಧಾನಸಭೆ ಚುನಾವಣೆಯಲ್ಲಿ ಆಪ್‌ನಿಂದ ಸ್ಪರ್ಧಿಸಿ, ಪಟೇಲ್‌ ನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಇವರಿಗೆ ಸಚಿವ ಸ್ಥಾನವನ್ನೂ ನೀಡಲಾಗಿತ್ತು.

  See also  ಕೇರಳದಲ್ಲಿ ಸರಣಿ ಸ್ಫೋಟ: ದೆಹಲಿ, ಮುಂಬೈನಲ್ಲಿ ಹೈ ಅಲರ್ಟ್- ಮೃತರ ಸಂಖ್ಯೆ 2ಕ್ಕೆ ಏರಿಕೆ

  ಅರವಿಂದ್ ಕೇಜ್ರಿವಾಲ್ ಕ್ಯಾಬಿನೆಟ್‌ನಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ ಆನಂದ್ ಏಪ್ರಿಲ್ 10 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅವರು ಎಎಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಮಾರ್ಚ್ 21 ರಂದು ದೆಹಲಿ ಸಿಎಂ ಬಂಧನದ ನಂತರ ಕೇಜ್ರಿವಾಲ್ ಸರ್ಕಾರದಿಂದ ಆನಂದ್ ರಾಜೀನಾಮೆ ನೀಡಿ ಅದಕ್ಕೆ ಕಾರಣವನ್ನು ತಿಳಿಸಿದ್ದರು.

  “ಎಎಪಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹುಟ್ಟಿದೆ ಆದರೆ ಇಂದು ಪಕ್ಷವು ಭ್ರಷ್ಟಾಚಾರದ ಕೆಸರುಗದ್ದೆಯಲ್ಲಿ ಸಿಲುಕಿದೆ. ಈ ಭ್ರಷ್ಟಾಚಾರಕ್ಕೆ ನನ್ನ ಹೆಸರನ್ನು ಜೋಡಿಸಲು ಸಾಧ್ಯವಿಲ್ಲ ಎಂದು ನಾನು ಸಚಿವ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ರಾಜ್‌ ಕುಮಾರ್‌ ಆನಂದ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

  ಎಎಪಿ ಕುರಿತು ರಾಜ್‌ ಕುಮಾರ್‌ ಆನಂದ್‌ ಅವರು ಹಲವು ಆರೋಪ ಮಾಡಿದರು. “ಆಪ್‌ನಲ್ಲಿ ದಲಿತ ಸಚಿವರು, ಶಾಸಕರು ಹಾಗೂ ಕೌನ್ಸಿಲರ್‌ಗಳಿಗೆ ಗೌರವ ಇಲ್ಲ. ಪಕ್ಷದಲ್ಲಿ ದಲಿತರಿಗೆ ಮೋಸ ಮಾಡಲಾಗುತ್ತಿದೆ. ಇಂತಹ ವಾತಾವರಣದಲ್ಲಿ ನನಗೆ ಕೆಲಸ ಮಾಡಲು ಆಗುವುದಿಲ್ಲ. ನಾನು ರಾಜೀನಾಮೆ ನೀಡಿರುವ ಸಂದರ್ಭದ ಕುರಿತು ಮಾತನಾಡಬೇಕಿಲ್ಲ. ಯಾವಾಗ ಹೈಕೋರ್ಟ್‌ ಜಾಮೀನು ಅರ್ಜಿ ತಿರಸ್ಕರಿಸಿತೋ, ದೊಡ್ಡ ಪ್ರಮಾದವೇ ನಡೆದಿದೆ ಎಂಬುದು ತಿಳಿಯಿತು. ಹಾಗಾಗಿ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದರು.

  ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ಕಾಂಗ್ರೆಸ್ ಸಂಸದ ಇ ತುಕಾರಾಂ ರಾಜಿನಾಮೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts