ತಿರುಪತಿ: ಭಾರತ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮಹತ್ವದ ಕೊಡುಗೆಗಾಗಿ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ರೋಹಿತ್, ವಿರಾಟ್ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಮತ್ತೊಬ್ಬ ಸ್ಟಾರ್ ಆಟಗಾರ ಗುಡ್ಬೈ! ಫ್ಯಾನ್ಸ್ ಶಾಕ್
ಭಾನುವಾರ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಂಭೀರ್, ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ಭಾರತದ ಜನತೆ ಹೆಮ್ಮೆ ಪಡುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಕೊಹ್ಲಿ, ರೋಹಿತ್ ಟಿ20 ನಿವೃತ್ತಿಯಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಇದಕ್ಕಿಂತ ಉತ್ತಮ ಸಂದರ್ಭ ಯಾವುದು? ಟಿ20 ಕಪ್ ಗೆಲ್ಲುವುದಕ್ಕಿಂತ ನಿವೃತ್ತಿಗೆ ಉತ್ತಮ ಸಂದರ್ಭ ಯಾವುದು? ಇವರಿಬ್ಬರೂ ಏಕದಿನ ಹಾಗೂ ಟೆಸ್ಟ್‌ನಲ್ಲಿ ತಂಡಕ್ಕೆ ಅಮೂಲ್ಯ ಸೇವೆ ನೀಡಲಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.
ನಾಯಕ ರೋಹಿತ್ ಶರ್ಮಾ ಮತ್ತು ಕೊಹ್ಲಿ ವಿಶೇಷವಾಗಿ ರಾಹುಲ್ ದ್ರಾವಿಡ್ ಅವರನ್ನು ಗಂಭೀರ್ ಅಭಿನಂದಿಸಿದರು. ಕೊಹ್ಲಿ ಮತ್ತು ರೋಹಿತ್ ನಿವೃತ್ತಿಯ ಬಗ್ಗೆ ಗಂಭೀರ್ ಪ್ರತಿಕ್ರಿಯಿಸಿದ್ದಾರೆ.
ಇಬ್ಬರೂ ಆಟಗಾರರು ಶ್ರೇಷ್ಠರು. ಅವರು ಭಾರತೀಯ ಕ್ರಿಕೆಟ್‌ಗಾಗಿ ಬಹಳಷ್ಟು ಮಾಡಿದ್ದಾರೆ ಮತ್ತು ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ಶುಭ ಹಾರೈಸುತ್ತೇನೆ” ಎಂದು ಗಂಭೀರ್ ತಿಳಿಸಿದರು.
ಕೊಹ್ಲಿ ಮತ್ತು ಶರ್ಮಾ ಇಬ್ಬರೂ ಟೆಸ್ಟ್ ಮತ್ತು ಓಡಿಐ ಸ್ವರೂಪಗಳಲ್ಲಿ ಭಾರತೀಯ ಕ್ರಿಕೆಟ್‌ನ ಮೇಲೆ ಪ್ರಭಾವ ಬೀರುವುದನ್ನು ಮುಂದುವರಿಸುತ್ತಾರೆ ಎಂದು ಗಂಭೀರ್ ಒತ್ತಿ ಹೇಳಿದರು.
ಜೂ.1ಕ್ಕೆ ಸಂಸತ್ ಕಲಾಪ ಪುನರಾರಂಭ: ಪ್ರತಿಧ್ವನಿಸಲಿವೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತಿತರ ವಿಷಯಗಳು..