ತನಗಿಂತ 28 ವರ್ಷ ಕಿರಿಯ ವಯಸ್ಸಿನ ಮಹಿಳೆಯನ್ನು ವರಿಸಿದ 66ರ ಮಾಜಿ ಕ್ರಿಕೆಟಿಗ!

Arun lal marriage
Published on

ಕೋಲ್ಕತ್ತಾ: ಅಂದುಕೊಂಡಂತೆಯೇ ಮಾಜಿ ಕ್ರಿಕೆಟಿಗ ಅರುಣ್​ ಲಾಲ್​ ತಮಗಿಂತ ಅರ್ಧವಯಸ್ಸಿನ ಮಹಿಳೆಯನ್ನು ವಿವಾಹವಾಗಿದ್ದಾರೆ. 

ಇತ್ತೀಚೆಗೆ ನಾವಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮೇ ಮೊದಲ ವಾರದಲ್ಲಿ ಮದುವೆಯಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ತಮ್ಮ ಮೊದಲ ಪತ್ನಿ ಅನುಮತಿಯಿಂದಲೇ ಎರಡನೇ ಮದುವೆಯಾಗುತ್ತಿರುವುದಾಗಿಯೂ ಘೋಷಿಸಿಕೊಂಡಿದ್ದರು.

66 ವರ್ಷದ ಅರುಣ್​ ಲಾಲ್ ತಮಗಿಂತ 28 ವರ್ಷ ಚಿಕ್ಕವಳಾದ ಬುಲ್​ ಬುಲ್​ ಸಾಹಾ ಅವರನ್ನು ಈ ವಯಸ್ಸಿನಲ್ಲೂ ಪ್ರೀತಿಸಿ ವಿವಾಹವಾಗಿದ್ದಾರೆ. ಸದ್ಯ ಇವರಿಬ್ಬರ ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಕೋಲ್ಕತ್ತಾದ ಖಾಸಗಿ ಹೋಟೆಲ್​ವೊಂದರಲ್ಲಿ ಇಬ್ಬರು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net