ಮಾಜಿ ಮುಖ್ಯಮಂತ್ರಿ ಎಸ್ಆರ್ ಕಂಠಿ ಪತ್ನಿ ಮರಿಬಸಮ್ಮ ನಿಧನ

maribasamma s kanthi
Published on

ಬೆಳಗಾವಿ: ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್.ಕಂಠಿ ಅವರ ಪತ್ನಿ ಮರಿಬಸಮ್ಮ ಎಸ್. ಕಂಠಿ ನಿಧನರಾದರು.

ಮರಿಬಸಮ್ಮಗೆ 104 ವರ್ಷ ವಯಸ್ಸಾಗಿತ್ತು. ಕಿತ್ತೂರಿನ ಸೈನಿಕ ಶಾಲೆಯಲ್ಲಿ ವಾಸವಿದ್ದ ಅವರು ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದರು.

ಮರಿಬಸಮ್ಮರ ಪಾರ್ಥಿವ ಶರೀರ ದರ್ಶನಕ್ಕೆ ಕಿತ್ತೂರು ಸೈನಿಕ ಶಾಲೆಯಲ್ಲಿ ಬುಧವಾರ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ದರ್ಶನ ಮುಗಿದ ಬಳಿಕ ಅಂದು ಸಂಜೆ ಬಾಗಲಕೋಟೆ ಜಿಲ್ಲೆ ಇಳಕಲ್​ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಎಸ್.ಆರ್.ಕಂಠಿ (ಶಿವಲಿಂಗಪ್ಪ ರುದ್ರಪ್ಪ ಕಂಠಿ) ಅವರು ಬಾಗಲಕೋಟೆ(ಹಳೆಯ ವಿಜಯಪುರ) ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್​ ನಗರದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net