
ಕಾರವಾರ: ಅಪೂರ್ಣ ಸಮಿತಿಯಿಂದ Forest Dwellers Act ಅರ್ಜಿಗಳ ಪುನರ್ ಪರಿಶೀಲನೆ ಕಾನೂನು ಬಾಹಿರ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ಷೇಪಿಸಿದ್ದಾರೆ.
ಕಾರವಾರ ಅರಣ್ಯ ಹಕ್ಕು ಹೋರಾಟಗಾರರಿಂದ ಅಪರ ಜಿಲ್ಲಾಧಿಕಾರಿ, ಸಾಜಿದ್ ಮುಲ್ಲಾ ಅವರಿಗೆ ಸೋಮವಾರ ಆಕ್ಷೇಪಣಾ ಪತ್ರ ಸಲ್ಲಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನವೆಂಬರ್ 28 ರಂದು ಮುಖ್ಯ ಕಾರ್ಯದರ್ಶಿ ಹಾಗೂ ಇತರ ಐವರ ಸಮಿತಿ ಸಭೆ ಸೇರಿ, Forest Dwellers Act ಬಗ್ಗೆ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಬಾಕಿ ಇರುವ ಅರಣ್ಯ ಹಕ್ಕು ಅರ್ಜಿಗಳನ್ನು ಶೀಘ್ರ ಮರು ಪರಿಶೀಲನೆ ಮಾಡುವಂತೆ ಎಲ್ಲ ಜಿಲ್ಲಾ ಸಮಿತಿಗಳಿಗೆ ಆದೇಶಿಸಿದೆ.
ಅದರಂತೆ ಈಗ ಉಪ ವಿಭಾಗೀಯ ಸಮಿತಿಗಳು ಅರಣ್ಯ ಅತಿಕ್ರಮಣದಾರರಿಗೆ ನೋಟಿಸ್ ಕಳಿಸುತ್ತಿವೆ. ಉಪ ವಿಭಾಗೀಯ ಸಮಿತಿ 6 ಸದಸ್ಯರನ್ನು ಹೊಂದಿವೆ. ಅದರಲ್ಲಿ ಮೂವರು ಅಧಿಕಾರಿಗಳಾಗಿದ್ದರೆ ಇನ್ನು ಮೂವರು ತಾಪಂ ಅಥವಾ ಜಿಪಂಗಳಿಗೆ ಚುನಾಯಿತ ಜನ ಪ್ರತಿನಿಧಿಯಾಗಿರುತ್ತಾರೆ.
ಆದರೆ, ತಾಪಂ, ಜಿಪಂ ಚುನಾವಣೆ ನಡೆಯದೇ ಸದಸ್ಯರಿಲ್ಲ. ಜನಪ್ರತಿನಿಧಿಗಳಿಲ್ಲದ ಅರಣ್ಯ ಹಕ್ಕು ಸಮಿತಿ ಅಪೂರ್ಣವಾಗುತ್ತದೆ. ಅಪೂರ್ಣ ಸಮಿತಿಯಿಂದ ಅರ್ಜಿಗಳ ವಿಚಾರಣೆ ಕಾನೂನು ಬಾಹಿರವಾಗಿದೆ ಎಂದರು.
Forest Dwellers Act 3 ತಲೆಮಾರಿನ ದಾಖಲೆ ಬೇಕಿಲ್ಲ
ಅರಣ್ಯ ಹಕ್ಕು ಮಂಜೂರಿಗೆ 3 ತಲೆಮಾರಿನ ವೈಯಕ್ತಿಕ ದಾಖಲೆ ಬೇಕಿಲ್ಲ ಎಂದು ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿ ಮಾಡಿರುವ ನೋಡಲ್ ಏಜೆನ್ಸಿ , ಕೇಂದ್ರ ಬುಡಕಟ್ಟು ಮಂತ್ರಾಲಯ ಹಲವು ವರ್ಷಗಳ ಸ್ಪಷ್ಟಪಡಿಸಿದೆ.
ಆ ಪ್ರದೇಶದಲ್ಲಿ ಜನವಸತಿ, ಕೃಷಿ ಇರುವ ಬಗ್ಗೆ ದೇವಾಲಯ, ಚರ್ಚ್ ಮುಂತಾದ ಸಾಂದರ್ಭಿಕ ದಾಖಲೆಗಳಿದ್ದರೂ ಅರ್ಜಿಗಳನ್ನು ಪರಿಗಣಿಸಬಹುದು ಎಂದು ಹೇಳಿದೆ.
ಆದರೆ, ಮತ್ತೆ 3 ತಲೆಮಾರಿನ ದಾಖಲೆಗಳನ್ನು ಹಾಜರುಪಡಿಸಿ ಎಂದು ಅರ್ಜಿದಾರರಿಗೆ ನೋಟಿಸ್ ನೀಡುತ್ತಿರುವುದೂ ಕಾನೂನು ಬಾಹಿರವಾಗಿದೆ.
ಅರ್ಜಿ ವಿಚಾರಣಾ ಪ್ರಕ್ರಿಯೆ ಪುನಃ ಪ್ರಾರಂಭಿಸಿರುವ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಕಾನೂನು ಬಾಹಿರ ಸಮಿತಿಯಿಂದ ವಿಚಾರಣೆ ಹಾಗೂ 3 ತಲೆಮಾರಿನ ದಾಖಲೆ ಕೇಳುತ್ತಿರುವುದನ್ನು ವಿರೋಧಿಸಿ, ಉತ್ತರ ಕನ್ನಡದಿಂದ ಕರ್ನಾಟಕ ಸರ್ಕಾರಕ್ಕೆ 50 ಸಾವಿರ ಆಕ್ಷೇಪಣೆ ಸಲ್ಲಿಸಲಿದ್ದೇವೆ.
ಕಾರವಾರದಿಂದ ಅದನ್ನು ಪ್ರಾರಂಭಿಸಿದ್ದು, ಜಿಲ್ಲೆಯ ಇತರ ವಿವಿಧ ಭಾಗಗಳಿಂದಲೂ ಆಕ್ಷೇಪಣೆ ಸಲ್ಲಿಕೆ ನಡೆಯಲಿದೆ ಎಂದರು.
https://youtu.be/QeYdfRLBdws
