ರಷ್ಯಾ, ಭಾರತ, ಚೀನಾ ವಿದೇಶಾಂಗ ಸಚಿವರ ಸಭೆ

Jaishankar-Wang
Published on

ಬೀಜಿಂಗ್​: ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ (ಎಸ್​ಸಿಒ) ಸಭೆ ಮಾಸ್ಕೋದಲ್ಲಿ ನಡೆಯುತ್ತಿದ್ದು, ವಿದೇಶಾಂಗ ಸಚಿವರ ಮಟ್ಟದ ಸಭೆಯ ಬಳಿಕ ವಿರಾಮದ ಅವಧಿಯಲ್ಲಿ ರಷ್ಯಾ, ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರ ಸಭೆ ನಡೆಯಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ.

ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ನಾಲ್ಕು ದಿನಗಳ ಮಾಸ್ಕೋ ಪ್ರವಾಸದಲ್ಲಿದ್ದಾರೆ. ರಷ್ಯಾ ವಿದೇಶಾಂಗ ಸಚಿವ ಸರ್ಗೇ ಲಾವ್​​ರೋವ್​ ಅವರ ವಿದೇಶಾಂಗ ಸಚಿವರ ಸಭೆಯ ಆತಿಥ್ಯವಹಿಸಿದ್ದು, ಇದು ಬುಧವಾರ ಮತ್ತು ಗುರುವಾರ ನಡೆಯುತ್ತಿದೆ. ಈ ಸಭೆಯ ವಿರಾಮದ ಅವಧಿಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಇ ಅವರು ಎಸ್​​ಸಿಒ ಸದಸ್ಯ ರಾಷ್ಟ್ರಗಳ ಪೈಕಿ ಆಯ್ದ ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝವೋ ಲಿಜಿಯಾನ್ ತಿಳಿಸಿದ್ದಾರೆ.

ಭಾರತದ ವಿದೇಶಾಂಗ ಸಚಿವರ ಜತೆಗಿನ ಮಾತುಕತೆ ಸದ್ಯ ಗಮನಸೆಳೆದಿದ್ದು, ಗಡಿ ಸಂಘರ್ಷದ ಭವಿಷ್ಯ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net