

ಜೈಪುರ: ತನ್ನ ಅಳಿಯ ಅದೇ ಸಮುದಾಯಕ್ಕೆ ಸೇರಿದವನಲ್ಲ ಎಂದು ಅಸಮಾಧಾನಗೊಂಡ ರಾಜಸ್ಥಾನದ ಜೋಧ್‌ಪುರದ ವ್ಯಕ್ತಿಯೊಬ್ಬರು, ಈಗಾಗಲೇ ಮದುವೆಯಾದ ತನ್ನ ಮಗಳನ್ನು ಆಕೆ ಪತಿಯಿಂದ ದೂರ ಮಾಡಿ ಇನ್ನೊಂದು ಮದುವೆ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಯುವತಿಯೊಬ್ಬಳು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಹುಡುಗ ತನ್ನ ಸಮುದಾಯಕ್ಕೆ ಸೇರದ ಕಾರಣ ಯುವತಿ ತಂದೆಗೆ ಇಷ್ಟವಿರಲಿಲ್ಲ. ಮದುವೆಯಾದ 10 ದಿನಗಳ ಬಳಿಕ ಯುವತಿ ಮನೆಯವರು ಇಬ್ಬರನ್ನು ಹುಡುಕಿ ಬಲೇಸರ್ ಪೊಲೀಸ್ ಠಾಣೆಗೆ ಕರೆತಂದು ಗಂಡನಿಂದ ದೂರವಾಗುವಂತೆ ಮಾಡಿದ್ದಾರೆ. ಇದೇ ವೇಳೆ ಯುವತಿಯ ತಂದೆ ಆಕೆಗೆ ಎರಡನೇ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಬಲವಂತವಾಗಿ ಮೊದಲ ಮದುವೆ ಮುರಿದು ಬಿತ್ತು:
ಛತ್ತೀಸ್‌ಗಢ ಪಟ್ಟಣದ ನಿವಾಸಿ ಜಿತೇಂದ್ರ ಜೋಶಿ ಎಂಬಾತನೊಂದಿಗೆ ಮೇ. 1 ರಂದು ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಮಹಿಳೆಯ ಮೊದಲ ಮದುವೆಯ ಬಗ್ಗೆ ಪುರುಷನ ಕುಟುಂಬಕ್ಕೆ ತಿಳಿದಿರಲಿಲ್ಲ. ಮದುವೆಯಾದ ಬಳಿಕ ತನ್ನ ಎರಡನೇ ಗಂಡನಿಗೆ ಮೊದಲ ಗಂಡನ ಬಗ್ಗೆ ಹೇಳಿ ಆತನ ಕೈಗೆ ರಾಖಿಯನ್ನು ಕಟ್ಟಿದ್ದಾಳೆ. ಮೊದಲ ಗಂಡನ ಬಳಿ ಹೋಗಲು ಬಿಡುವಂತೆ ಹೇಳಿದ್ದಾಳೆ. ಇತ್ತೀಚೆಗೆ ಮಹಿಳೆ ಬೇರೊಬ್ಬರ ಪೋನ್ ಬಳಸಿ ಟ್ವಿಟರ್ ನಲ್ಲಿ ತನ್ನ ಕಷ್ಟದ ಬಗ್ಗೆ ಬರೆದುಕೊಂಡು ಪೋಸ್ಟ್ ಮಾಡಿದ್ದಾಳೆ. ಈ ಪೋಸ್ಟ್ ವೈರಲ್ ಆಗಿದೆ.
ಈ ಕುರಿತಾಗಿ ತನಿಖೆ ನಡೆಸಲಾಗುತ್ತಿದೆ. ಮಹಿಳೆಯ 2ನೇ ಪತಿಯ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ. ಯುವತಿಯ ಮೊದಲ ಪತಿ ಕುರಿತಾಗಿ ವಿಚಾರವಾಣೆ ಮಾಡುತ್ತೇವೆಂದು ಅಂತಗಢ ಪೊಲೀಸ್ ಠಾಣೆಯ ಉಸ್ತುವಾರಿ ರೋಷನ್ ಕೌಶಿಕ್ ಹೇಳಿದ್ದಾರೆ.