ಎಲ್ಲರಿಗೂ ಆದರ್ಶ ಅಂಬೇಡ್ಕರ್​

14GKK6
Published on

ಗೋಕಾಕ: ಅಂಬೇಡ್ಕರ್​ ಕೇವಲ ದಲಿತರ ನಾಯಕರಾಗಿರದೇ ಸಮಾಜದಲ್ಲಿ ಶೋಷಿತರು, ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರ ಹೋರಾಡಿದ ಧೀಮಂತ ವ್ಯಕ್ತಿ. ಹೀಗಾಗಿ ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಎನ್​ಎಸ್​ಎ್​ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್​ ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಿಸಲು ಶ್ರಮಿಸಿದವರು. ಅಂತಹ ಮಹಾತ್ಮರ ಸ್ಮರಣೆ ನಮಗೆಲ್ಲರಿಗೂ ಸಂಭ್ರಮದ ಸಂಗತಿ. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪಶ್ಯತೆ ನಿವಾರಣೆ, ಪ್ರಜೆಗಳ ಮೂಲ ಕರ್ತವ್ಯ, ಸಮಾನತೆ, ಶಿಣ ಸೇರಿ ಅವರ ಕೊಡುಗೆ ಇಂದಿಗೂ ಪ್ರಸ್ತುತವಾಗಿವೆ ಎಂದರು.

ಡಾ.ಬಿ.ಆರ್​.ಅಂಬೇಡ್ಕರ್​ ಬದುಕು, ಜೀವನಶೈಲಿ, ತತ್ತ್ವ ಹಾಗೂಸಿದ್ಧಾಂತಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ. ಅವರ ದೂರ ದೃಷ್ಟಿಯಿಂದಲೇ ಇಂದು ದೇಶದಲ್ಲಿ ಸಮಾನತೆ, ಹಕ್ಕು, ಕರ್ತವ್ಯ ಹಾಗೂ ಪ್ರಗತಿಯ ಕನಸು ದೊರೆತಿದೆ ಎಂದು ತಿಳಿಸಿದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕುಡಚಿ, ಗ್ರಾಮೀಣ ಬಿಜೆಪಿ ಅಧ್ಯ ರಾಜೇಂದ್ರ ಗೌಡಪ್ಪಗೊಳ, ಆನಂದ ಅತ್ಯಾಗೋಳ, ಮುಖಂಡರಾದ ಲ$್ಮಣ್​ ಕತ್ತಿ, ಬಸು ಭುಜನ್ನವರ, ಅಮೃತ ದಪ್ಪಿನ್ನವರ, ಅವ್ವಣ್ಣ ಗೌಡಿ, ಪ್ರಮೋದ ನುಗ್ಗಾನಟ್ಟಿ, ನಾಗರಾಜ ಕುದರಿ, ಅಡಿವೆಪ್ಪ ಗೌಳಿ, ಹಣಮಂತ ಕೆಂಡಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net