ಫುಟ್ಬಾಲ್ ತಾರೆ ಮೆಸ್ಸಿ ಭಾರತ ಭೇಟಿ ಖಚಿತ! ಎಲ್ಲಿ, ಯಾವಾಗ? ಇಲ್ಲಿದೆ ಮಾಹಿತಿ | Lionel Messi

photo-88-68a97f8858d74
Published on

Lionel Messi: ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಭಾರತದಲ್ಲಿ ಆಡಲು ಸಜ್ಜಾಗಿದೆ ಎಂದು ದೇಶದ ಫುಟ್ಬಾಲ್ ಫೆಡರೇಶನ್ (ಆ.23) ಶನಿವಾರ ದೃಢಪಡಿಸಿದೆ.

202ರ ಫಿಫಾ ವಿಶ್ವಕಪ್‌ಗೆ ಮುಂಚಿತವಾಗಿ ಭಾರತದಲ್ಲಿ ಸ್ನೇಹಪರ ಪಂದ್ಯ ಆಡಲು ತಂಡವನ್ನು ಕರೆತರಲು ಕೇರಳ ಸರ್ಕಾರ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೆ ಬಹು ನಿರೀಕ್ಷಿತ ಪಂದ್ಯವನ್ನು ನವೆಂಬರ್ 10 ರಿಂದ 18 ರವರೆಗೆ ಕೇರಳದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಎಎಫ್‌ಎ ತಿಳಿಸಿದೆ.

ಸುಮಾರು ಒಂದೂವರೆ ದಶಕದಲ್ಲಿ ತಂಡವು ಭಾರತೀಯ ನೆಲದಲ್ಲಿ ಆಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಕೊನೆಯ ಬಾರಿಗೆ 2011ರಲ್ಲಿ ಲಿಯೋನೆಲ್ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಡಿತ್ತು.

ಪಿಟಿಐ ವರದಿ ಪ್ರಕಾರ, ದಂತಕತೆ ಫುಟ್ಬಾಲ್ ಆಟಗಾರ ಮತ್ತು ಅವರ ತಂಡ ದೇಶಾದ್ಯಂತ ಪ್ರವಾಸ ಕೈಗೊಳ್ಳುವ ನಿರೀಕ್ಷೆಯಿದೆ. ಮೆಸ್ಸಿ ಕೋಲ್ಕತ್ತಾ, ಅಹಮದಾಬಾದ್, ಮುಂಬೈ ಮತ್ತು ನವದೆಹಲಿಗೆ ಪ್ರಯಾಣಿಸುವ ನಿರೀಕ್ಷೆಯಿದ್ದು, ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಭೇಟಿಯಲ್ಲಿ ಅಂತ್ಯಗೊಳ್ಳಲಿದೆ ಎಂದು ಆಗಷ್ಟ್​ ಆರಂಭದಲ್ಲಿ ವರದಿ ಮಾಡಿತ್ತು. ಎಎಫ್‌ಎ ಬಿಡುಗಡೆಯ ಪ್ರಕಾರ, ಅರ್ಜೆಂಟೀನಾ ತಂಡವು ನವೆಂಬರ್ 10-18 ರ ನಡುವೆ ಕೇರಳದಲ್ಲಿ ಪಂದ್ಯವನ್ನು ಆಡಲಿದೆ. ಆ ಪಂದ್ಯದ ಎದುರಾಳಿಯನ್ನು ಇನ್ನೂ ಘೋಷಿಸಲಾಗಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net