ಸಿಹಿ ಪ್ರಿಯರಿಗೆ ಸ್ವರ್ಗದ ಅನುಭವ: ನೀವೂ ಟ್ರೈ ಮಾಡಿ ಲೋಟಸ್ ಬಿಸ್ಕಾಫ್ ಚೀಸ್‌ಕೇಕ್ ಜಾರ್! Biscoff Cheese cake

 Biscoff Cheese cake  ಸಾಂದರ್ಭಿಕ ಚಿತ್ರ
Biscoff Cheese cake ಸಾಂದರ್ಭಿಕ ಚಿತ್ರ
Published on

Biscoff Cheese cake: ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ಸ್ಪೆಷಲ್ ಡೆಸರ್ಟ್ ಸವಿಯುವ ಆಸೆಯಿದೆಯೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಅತ್ಯಂತ ಸುಲಭ ಹಾಗೂ ಬಾಯಲ್ಲಿ ನೀರೂರಿಸುವ 'ಲೋಟಸ್ ಬಿಸ್ಕಾಫ್ ಚೀಸ್‌ಕೇಕ್ ಜಾರ್'. ವಿಶೇಷ ಎಂದರೆ ಇದನ್ನು ಮಾಡಲು ಯಾವುದೇ ಓವನ್, ಗ್ಯಾಸ್ ಉರಿಸುವ ಶ್ರಮ ಅಥವಾ ಸುದೀರ್ಘ ಅಡುಗೆಯ ಅಗತ್ಯವೇ ಇಲ್ಲ. ಕೆಲವೇ ಕೆಲವು ಸಾಮಗ್ರಿ ಬಳಸಿ, ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ಕ್ರಂಚಿ ಮತ್ತು ಕೆನೆಭರಿತ ಡೆಸರ್ಟ್, ನಿಮ್ಮ ಪ್ರತಿಯೊಂದು ಸಿಹಿ ತಿನಿಸಿನ ಬಯಕೆಯನ್ನು ತೃಪ್ತಿಪಡಿಸುವುದರಲ್ಲಿ ಸಂಶಯವಿಲ್ಲ. ಇನ್ಯಾಕೆ ತಡ ಈಗ್ಲೇ ಮಾಡಿ..

ಬೇಕಾಗುವ ಪದಾರ್ಥಗಳು

*10 ರಿಂದ 12 ಲೋಟಸ್ ಬಿಸ್ಕಾಫ್ ಬಿಸ್ಕತ್ತುಗಳು

*

*

*

*

*

*

ಮಾಡುವ ವಿಧಾನ

ಮೊದಲು 8-10 ಬಿಸ್ಕಾಫ್ ಬಿಸ್ಕತ್ತುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿಗೆ ಕರಗಿಸಿದ 2 ಚಮಚ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸಣ್ಣ ಗ್ಲಾಸ್ ಅಥವಾ ಜಾರ್‌ಗಳ ತಳದಲ್ಲಿ ಹಾಕಿ, ಚಮಚದಿಂದ ಹಗುರವಾಗಿ ಒತ್ತಿ. ನಂತರ ಇದನ್ನು 10 ನಿಮಿಷ ಫ್ರಿಡ್ಜ್‌ನಲ್ಲಿಡಿ.
ಇದಾದ ಬಳಿಕ ಒಂದು ಬೌಲ್‌ನಲ್ಲಿ ಗಟ್ಟಿ ಕ್ರೀಮ್ ಚೀಸ್, ಸಕ್ಕರೆ ಪುಡಿ ಮತ್ತು ವೆನಿಲಾ ಎಸೆನ್ಸ್ ಹಾಕಿ ಸ್ಮೂತ್ ಆಗುವವರೆಗೆ ವಿಸ್ಕ್ ಮಾಡಿಕೊಳ್ಳಿ. ಇನ್ನೊಂದು ಬೌಲ್‌ನಲ್ಲಿ ವಿಪ್ಪಿಂಗ್ ಕ್ರೀಮ್ ಅನ್ನು ಗಟ್ಟಿಯಾಗುವವರೆಗೆ ಬೀಟ್ ಮಾಡಿಕೊಳ್ಳಿ.
ಈಗ ವಿಪ್ ಮಾಡಿದ ಕ್ರೀಮ್ ಅನ್ನು ಕ್ರೀಮ್ ಚೀಸ್ ಮಿಶ್ರಣದೊಂದಿಗೆ ಹಗುರವಾಗಿ ಮಿಕ್ಸ್ ಮಾಡಿ. ಇದಕ್ಕೆ 2 ಚಮಚ ಕರಗಿಸಿದ ಬಿಸ್ಕಾಫ್ ಸ್ಪ್ರೆಡ್ ಸೇರಿಸಿ ಮಿಕ್ಸ್ ಮಾಡಿದರೆ, ರುಚಿಯಾದ ಬಿಸ್ಕಾಫ್ ಕ್ರೀಮ್ ರೆಡಿಯಾಗುತ್ತದೆ.
ಫ್ರಿಡ್ಜ್‌ನಿಂದ ಜಾರ್‌ಗಳನ್ನು ಹೊರತೆಗೆದು, ಬಿಸ್ಕತ್ತು ಬೇಸ್‌ನ ಮೇಲೆ ಸಿದ್ಧಪಡಿಸಿದ ಬಿಸ್ಕಾಫ್ ಕ್ರೀಮ್ ಮಿಶ್ರಣವನ್ನು ಹಾಕಿ. ಇದರ ಮೇಲೆ ಸ್ವಲ್ಪ ಕರಗಿಸಿದ ಬಿಸ್ಕಾಫ್ ಸ್ಪ್ರೆಡ್ ಅನ್ನು ಮೇಲ್ಭಾಗದಲ್ಲಿ ಸಮನಾಗಿ ಹರಡಿ. ಕೊನೆಯಲ್ಲಿ ಅಲಂಕಾರಕ್ಕಾಗಿ ಮೇಲೆ ಸ್ವಲ್ಪ ಬಿಸ್ಕತ್ತು ಪುಡಿ ಹಾಗೂ ಒಂದು ಇಡೀ ಬಿಸ್ಕಾಫ್ ಬಿಸ್ಕತ್ತು ಇಡಿ.
ಈ ಜಾರ್‌ಗಳನ್ನು 2 ರಿಂದ 3 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾಗಲು ಬಿಡಿ. ಈಗ ತಣ್ಣಗಿನ, ಕೆನೆಭರಿತ ಮತ್ತು ಅತ್ಯಂತ ರುಚಿಯಾದ ಬಿಸ್ಕಾಫ್ ಡೆಸರ್ಟ್ ಸವಿಯಲು ಸಿದ್ಧ.

ಪ್ರಮುಖ ಟಿಪ್ಸ್

ನಿಮ್ಮ ಬಳಿ ವಿಪ್ಪಿಂಗ್ ಕ್ರೀಮ್ ಇಲ್ಲದಿದ್ದರೆ, ಸಾಮಾನ್ಯ ಅಮುಲ್ ಫ್ರೆಶ್ ಕ್ರೀಮ್ ಅನ್ನು ಚೆನ್ನಾಗಿ ತಣ್ಣಗೆ ಮಾಡಿ ಸಕ್ಕರೆ ಜೊತೆ ಬೀಟ್ ಮಾಡಿ ಬಳಸಬಹುದು.
ಇದೇ ವಿಧಾನದಲ್ಲಿ ನೀವು ಬಿಸ್ಕಾಫ್ ಪುಡಿ ಮತ್ತು ಕ್ರೀಮ್ ಅನ್ನು ಒಂದರ ಮೇಲೊಂದರಂತೆ ಪದರಗಳಾಗಿ ಹಾಕಿ ಬಿಸ್ಕಾಫ್ ಪುಡಿಂಗ್ ಕೂಡ ಮಾಡಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net