ಮಲಬದ್ಧತೆ ಸಮಸ್ಯೆ ನಿವಾರಣೆಗಾಗಿ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದೀರಾ?
ಪ್ಲಮ್, ಶುಂಠಿ ಚಹಾ, ಬೆಚ್ಚಗಿನ ನೀರು ಈ ಸಮಸ್ಯೆ ನಿವಾರಣೆಗೆ ನೈಸರ್ಗಿಕ ಮುಕ್ತಿ ನೀಡುತ್ತೆ
ದೇಹಕ್ಕೆ ವ್ಯಾಯಾಮ ಮುಖ್ಯ, ಕುಳಿತಲ್ಲೇ ಕುಳಿತುಕೊಳ್ಳುವುದನ್ನು ಅವಾಯ್ಡ್ ಮಾಡಿ.
Struggling With Constipation Drinks May Help Support Naturally: ನಿರಂತರ ಕುಳಿತೇ ಕೆಲಸ ಮಾಡೋದು, ದೇಹಕ್ಕೆ ವ್ಯಾಯಾಮ ಇಲ್ಲದೇ, ಜಡ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಕರುಳಿನ ಚಲನೆ ಸರಿಯಾಗಿರದೆ ಮಲವು ಗಟ್ಟಿಯಾಗಿ ವಾರಕ್ಕೆ ಮೂರಕ್ಕಿಂತ ಕಡಿಮೆ ಬಾರಿ ವಿಸರ್ಜನೆಯಾಗುವುದು ಅಥವಾ ಮಲವಿಸರ್ಜನೆ ಕಷ್ಟವಾಗುವ ಸ್ಥಿತಿಯನ್ನು ಮಲಬದ್ಧತೆ ಎನ್ನಲಾಗುತ್ತದೆ.
ಈ ಮಲಬದ್ಧತೆಯನ್ನು ಪ್ರಾಥಮಿಕ ಮಟ್ಟದಲ್ಲಿ ಕಡಿಮೆ ಮಾಡಿಕೊಳ್ಳಲು ಕೆಲವರು ಒದ್ದಾಡುತ್ತಾರೆ. ಆದರೆ, ನೈಸರ್ಗಿಕವಾಗಿಯೇ ನೀವು ಮಲಬದ್ಧತೆಯಿಂದ ದೂರವಿರಬಹುದು. ಅದಕ್ಕಾಗಿ ಕೆಲವು ಸಿಂಪಲ್ ಜ್ಯೂಸ್ಗಳನ್ನು ಸೇವನೆ ಮಾಡಿದರೆ ಸಾಕು ಮಲಬದ್ಧತೆಗೆ ಗುಡ್ ಬಾಯ್ ಹೇಳಬಹುದು ಎಂದು ಇನ್ಸ್ಟಾಗ್ರಾಮ್ನಲ್ಲಿ ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ AIIMS ನಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಲಬದ್ಧತೆ ನಿವಾರಣೆಗೆ ಈ ಜ್ಯೂಸ್ ಕುಡಿಯಿರಿ
ಬೆಚ್ಚಗಿನ ನೀರು
ಮಲವು ಮೃದುವಾಗಲು ಮತ್ತು ಸುಲಭವಾಗಿ ಹೊರಬರುವ ಸಲುವಾಗಿ ಸಾಕಷ್ಟು ದ್ರವವು ದೇಹಕ್ಕೆ ಸೇರುವುದು ಮುಖ್ಯ. ಹೀಗಾಗಿ ಬೆಳಿಗ್ಗೆ ಎದ್ದ ಕೂಡಲೇ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಹೈಡ್ರೇಟ್ ಆಗಲು ಸಹಾಯ ಮಾಡುತ್ತದೆ.
ಪ್ಲಮ್ ಜ್ಯೂಸ್
ಪೌಷ್ಠಿಕಾಂಶಯುಕ್ತವಾದ ಪ್ಲಮ್ ಹಣ್ಣನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಇದು ಕರುಳನ್ನು ಸಡಿಲಗೊಳಿಸಿ ಮಲಬದ್ಧತೆ ದೂರ ಮಾಡಲು ಸಹಾಯ ಮಾಡುತ್ತದೆ. ಕರುಳಿನ ಆಹಾರ ಕಾಪಾಡಿಕೊಳ್ಳಲು ಒಣಗಿದ ಪ್ಲಮ್ ಹಣ್ಣನು ಸೇವಿಸೋದು ಉತ್ತಮ.
ಕಿವಿ ಹಣ್ಣಿನ ಸ್ಮೂತಿ
ಕಿವಿ ಹಣ್ಣು ದೇಹದಲ್ಲಿ ಪ್ಲೇಟ್ಲೆಟ್ ಉತ್ಪತಿಗೆ ಸಹಾಯ ಮಾಡುತ್ತದೆ. ಜೊತೆಗೆ ಅದರಲ್ಲಿರುವ ಫೈಬರ್ ಮತ್ತು ಆಕ್ಟಿನಿಡಿನ್ ಪೋಷಕಾಂಶವು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಇದು ನಿಯಮಿತ ಕರುಳಿನ ಚಲನೆಯನ್ನು ಸಹಕರಿಸುತ್ತದೆ.
ಚಿಯಾ ಮತ್ತು ಸಬ್ಜಾ
ಚಿಯಾ ಬೀಜ..ನೆನಸಿಸಿದ ಚಿಯಾ ಬೀಜಗಳು ಜೆಲ್ನಂತಾಗುವ ಕಾರಣ ಇದು ಆಹಾರಕ್ಕೆ ಫೈಬರ್ ಮತ್ತು ದ್ರವವನ್ನು ಸೇರಿಸುತ್ತದೆ. ಇದರೊಂದಿಗೆ ಸೌತೆ ಕಾಯಿ, ಪುದೀನ ಹಾಗೂ ನಿಂಬೆ ರಸ ಹಿಂಡಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು. ಸಬ್ಜಾ ಸೀಡ್ಸ್ನ್ನು ಸಹ ನೆನಸಿ ಕುಡಿಬಹುದಾಗಿದೆ.
ಶುಂಠಿ ಚಹಾ
ನೀರಿಗೆ ಶುಂಠಿ ಹಾಕಿ ಕುದಿಸಿ ಕುಡಿಯುವುದು ಕರುಳಿನಲ್ಲಿರುವ ಬ್ಯಾಕ್ಟೀರಿಯಾ ನಿರ್ಮೂಲನೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳಿಂದ ದೂರವಿಡಲು ರಾಮಬಾಣವಾಗಿದೆ.
ಗಮನಿಸಿ: ಈ ಮಾಹಿತಿಯು ಜಾಗೃತಿ ಉದ್ದೇಶಕ್ಕಾಗಿ ಮಾ
ತ್ರ. ನೀವು ಯಾವುದೇ ಸಮಸ್ಯೆಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.