ಶ್ರಾವಣ ಮಾಸ 2026; ಪವಿತ್ರ ತಿಂಗಳಲ್ಲಿ ಯಾವ ಆಹಾರ ಸೇವಿಸಬೇಕು, ಯಾವುದನ್ನು ಕಡ್ಡಾಯವಾಗಿ ತಪ್ಪಿಸಬೇಕು?..Sawan 2026

Sawan 2026 What food to Eat And What To Avoid
Sawan 2026 What food to Eat And What To Avoid
Published on
Sawan 2026 What food to Eat And What To Avoid: ಹಿಂದೂ ಧರ್ಮದಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು. ಜೊತೆಗೆ ಪವಿತ್ರವಾದ ತಿಂಗಳು ಎಂದು ಭಾವಿಸಲಾಗುತ್ತದೆ. ಈ ತಿಂಗಳಲ್ಲಿ ಶಿವ ಮತ್ತು ಪಾರ್ವತಿ ದೇವಿಯನ್ನು ಭಕ್ತಿಯಿಂದ ಪೂಕೆ ಮಾಡಲಾಗುತ್ತದೆ. ದೃಕ್​​​ ಪಂಚಾಂಗದ ಪ್ರಕಾರ 2026ರಲ್ಲಿ ಶ್ರಾವಣವು ಜು.30ರಿಂದ ಆರಂಭವಾಗಿ ಆ.28ರವರೆಗೆ ಇರಲಿದೆ ಎನ್ನಲಾಗಿದೆ.
ಶ್ರಾವಣದ ಪ್ರತಿ ಸೋಮವಾರ ಶಿವನಿಗೆ ಉಪವಾಸ ಮತ್ತು ಪೂಜೆ ಸಲ್ಲಿಕೆ ಮಾಡಿದರೆ ಇಷ್ಟಗಳು ಈಡೇರುತ್ತದೆ ಎನ್ನುವ ನಂಬಿಕೆ ಅನಾದಿಕಾಲದಿಂದಲೂ ಇದೆ. ಈ ಮಾಸದಲ್ಲಿ ಹಲವರು ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಮಾಡುತ್ತಾರೆ. ಇನ್ನೂ ಕೆಲವರು ಉಪವಾಸ ಕೂರುತ್ತಾರೆ. ಈ ಪವಿತ್ರ ಮಾಸದಲ್ಲಿ ಕೆಲವೊಂದು ಆಹಾರ ಸೇವನೆ ಮಾಡಬೇಕು ಮತ್ತು ಮಾಡಕೂಡದು ಎನ್ನುವ ಮಾತಿದೆ. ಮಳೆಗಾಲದಲ್ಲಿ ಜೀರ್ಣಾಂಗವು ನಿಧಾನವಾಗಿ ಅರಗಿಸಿಕೊಳ್ಳುವುದರಿಂದ ಹಗುರವಾದ ಆಹಾರವನ್ನು ಸೇವನೆ ಮಾಡಬೇಕು ಎನ್ನಲಾಗುತ್ತದೆ. ಹಾಗಾದ್ರೆ ಈ ಕಾಲಮಾನದಲ್ಲಿ ಯಾವುದನ್ನು ತಿನ್ನಬೇಕು ಯಾವುದು ಬೇಡ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.

ಈ ಆಹಾರ ಸೇವಿಸಿ

ಶ್ರಾವಣ ಮಾಸದಲ್ಲಿ ಹೆಚ್ಚು ತಾಜಾ ಹಣ್ಣುಗಳನ್ನು ಸೇವಿಸಬೇಕು. ಬಾಳೆ ಹಣ್ಣು, ಸೇಬು, ಪಪ್ಪಾಯ, ದಾಳಿಂಬೆ, ದ್ರಾಕ್ಷಿ, ಕಲ್ಲಂಗಡಿ, ಪೇರಳೆ ಹಣ್ಣುಗಳನ್ನು ನಿಮ್ಮ ಆಹಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಿ.

ಡೈರಿ ಉತ್ಪನ್ನ

ಶ್ರಾವಣ ಮಾಸದಲ್ಲಿ ಹಾಲು ಹಾಗೂ ಡೈರಿ ಉತ್ಪನ್ನಗಳನ್ನು ಸೇವನೆ ಮಾಡಬಹುದು. ಹಾಲು, ಮೊಸರು, ಮೊಟ್ಟೆ, ಪನ್ನೀರ್​, ಮಜ್ಜಿಗೆ, ಲಸ್ಸಿಯನ್ನು ಸೇವನೆ ಮಾಡಿದ್ರೆ ಇವೇ ಹೊಟ್ಟೆ ತುಂಬಿದಂತೆ ಭಾಸವಾಗಿಸುತ್ತದೆ. ಇದರಲ್ಲಿರುವ ಪ್ರೋಟೀನ್​ ಹಾಗೂ ಕ್ಯಾಲ್ಸಿಯಂ ದೇಹದ ಆರೋಗ್ಯಕ್ಕೆ ಸಹಕಾರಿ.

ಸಾಬುದಾನ(ಸಬ್ಬಕ್ಕಿ)

ಶ್ರಾವಣ ಸಮಯದಲ್ಲಿ ಉಪವಾಸ ಕೈಗೊಳ್ಳುವವರಿಗೆ ಸಾಬುದಾನ ಅಥವಾ ಸಬ್ಬಕ್ಕಿ ಉತ್ತಮ ಆಹಾರ. ಇದು ಹೆಚ್ಚು ಕಾರ್ಬೊಹೈಡ್ರೇಟ್​ ಮತ್ತು ಪಿಷ್ಟ ಅಂಶವನ್ನು ಹೊಂದಿದೆ. ಉಪವಾಸದ ದಿನಗಳಲ್ಲಿ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.

ಸಿಹಿಗೆಣಸು

ಸರಳವಾಗಿ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕು ಎಂದು ಬಯಸುವವರು ಈ ಹೊತ್ತಲ್ಲಿ ಸಿಹಿಗೆಣಸು ತಿನ್ನಬಹುದು ಇದರಲ್ಲಿರವ ನಾರಿನಾಂಶ, ವಿಟಮಿನ್​ ಎ ಮತ್ತು ರೋಗನಿರೋಧ ಶಕ್ತಿಯನ್ನು ಹೆಚ್ಚಿಸುವಂಣತೆ ಮಾಡುತ್ತದೆ. ಜೀರ್ಣಕ್ರಿಯೆ ಕಣ್ಣಿನ ಆರೋಗ್ಯಕ್ಕೆ ಸಹಕಾರಿ.

ಕಮಲದ ಹೂವಿನ ಬೀಜಗಳ ಮಖಾನ

ಮಖಾನವು ಕಮಲದ ಬೀಜಗಳಿಂದ ತಯಾರಿಸುವ ಒಂದು ಖಾದ್ಯ ಇದನ್ನು ಉರಿದು ಸೇವನೆ ಮಾಡಬಹುದು. ದೇಹಕ್ಕಿದು ಶಕ್ತಿ ನೀಡುತ್ತದೆ. ಉಪವಾಸದ ಸಮಯದಲ್ಲಿ ಕಾಡುವ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದು. ತೂಕ ನಿಯಂತ್ರಣಕ್ಕೆ, ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಇದು ಸಹಕಾರಿ.

ಈ ಆಹಾರ ಸೇವನೆ ಮಾಡ್ಬೇಡಿ

ಮೊಟ್ಟೆ, ಮಾಂಸದಿಂದ ತಯಾರದ ಆಹಾರ. ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಳಕೆ ಮಾಡಿ ಯಾವುದೇ ಆಹಾರವನ್ನು ಖರೀದಿ ಮಾಡೋದು ನಿಲ್ಲಿಸಿ. ಶ್ರಾವಣ ಮಾಸವು ಪವಿತ್ರವಾದ ದಿನಗಳಾದ ಕಾರಣ ಮದ್ಯ ಸೇವನೆ ಮಾಡದರಿ. ಎಣ್ಣೆಯುಕ್ತ ಆಹಾರ, ಉಳಿದ ಆಹಾರ ಹಾಗೂ ಸೊಪ್ಪು, ಎಲೆಕೋಸಿನಂತಹ ತರಕಾರಿಯನ್ನು ತಿನ್ನಲು ಹೋಗಲೇ ಬೇಡಿ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net