ವರದಿಯ ಪ್ರಕಾರ, ಅವರ ದಿನವು ಬೆಳಿಗ್ಗೆ 7 ಗಂಟೆಗೆ 6 ನೆನೆಸಿದ ಬಾದಾಮಿ, ಮೊಳಕೆ ಕಾಳುಗಳ ಸಲಾಡ್ ಮತ್ತು ತಾಜಾ ಜ್ಯೂಸ್‌ನೊಂದಿಗೆ ಪ್ರಾರಂಭವಾಗುತ್ತಿತ್ತು. ಬೆಳಿಗ್ಗೆ 9:30 ರ ಸುಮಾರಿಗೆ ಉಪಹಾರಕ್ಕಾಗಿ ಹಣ್ಣುಗಳು ಮತ್ತು ಒಂದು ಲೋಟ ಹಾಲಿನೊಂದಿಗೆ ಓಟ್‌ಮೀಲ್ ತೆಗೆದುಕೊಳ್ಳುತ್ತಿದ್ದರು. ಬೆಳಿಗ್ಗೆ 11:30 ರ ವೇಳೆಗೆ ಮೊಸರು, ಚಿಲ್ಲಾ ಮತ್ತು ಎಳನೀರನ್ನು ಸೇವಿಸುತ್ತಿದ್ದರು. ಮಧ್ಯಾಹ್ನ 1:30 ರ ಊಟದಲ್ಲಿ ತರಕಾರಿ ಕರಿ, ದಾಲ್, ಅನ್ನ ಮತ್ತು ಸಲಾಡ್ ಇರುತ್ತಿತ್ತು.