ಪೌಷ್ಟಿಕಾಂಶದ ಆಗರ, ಜೀರ್ಣಕ್ರಿಗೆ ರಾಮಬಾಣ ಈ ಮೊಸರು; ಯಾವ ಸಮಯದಲ್ಲಿ, ಎಷ್ಟು ಸೇವಿಸುವುದು ಸೂಕ್ತ?.. Health benefits of Curd

Health benefits of Curd
Health benefits of Curd
Published on

ಪ್ರಮುಖ ಮುಖ್ಯಾಂಶಗಳು

  • ಮೊಸರಿನಿಂದ ದೇಹದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು?.
  • 100 ಗ್ರಾಂ ಮೊಸರಿನಲ್ಲಿ ಎಷ್ಟು ಪ್ರೋಟೀನ್​ ಇದೆ, ಯಾವ ಸಮಯದಲ್ಲಿ ಸೇವಿಸಬೇಕು.
  • ಮೊಸರು ದೇಹದ ಜೀರ್ಣಕ್ರಿತೆ, ಒಳ್ಳೆಯ ಬ್ಯಾಕ್ಟೀರಿಯಾ ಉತ್ಪತ್ತಿಗೆ ಸಹಾಯ ಮಾಡುತ್ತದೆ.
Health benefits of Curd :

ಮೊಸರು ಎಂದರೆ ಯಾರಿಗೆ ತಾನೆ ಇಷ್ಟವಾಗೋದಿಲ್ಲ. ಅದರಲ್ಲಿ ಸಕ್ಕರೆ ಹಾಕಿ ಲಸ್ಸಿಯಂತೆ ಸೇವನೆ ಮಾಡೋದು, ಮಜ್ಜಿಗೆ, ದಹಿ ಪುರಿ ಹೀಗೆ ನಾನಾ ಆಹಾರದೊಂದಿಗೆ ಇದನ್ನು ಹೊಟ್ಟೆಗೆ ಇಳಿಸಿಕೊಳ್ಳಲಾಗುತ್ತದೆ. ಮೊಸರು ತಿನ್ನೋಕೆ ಮಜ ನೀಡೋದಷ್ಟೇ ಅಲ್ಲ. ಇದರಲ್ಲಿರುವ ಸೂಕ್ಷ್ಮಾಣು ಜೀವಿಗಳು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ.

ಕೆಲವರು ಮೊಸರು ಹಾಲಿನಿಂದ ತಯಾರಾಗುತ್ತದೆ. ಕೆನೆ ಇರುತ್ತದೆ ಎಂದು ಸೇವಿಸೋದನ್ನು ನಿರ್ಲಕ್ಷ್ಯಿಸಿ. ಮೂಗು ಮುರಿಯುತ್ತಾರೆ. ಆದರೆ, ಮೊಸರು ಜೀರ್ಣಕ್ರಿಯೆಗೆ, ರೋಗನಿರೋಧ ಶಕ್ತಿ ಹೆಚ್ಚಳಕ್ಕೆ, ಮೂಳೆ ಗಟ್ಟಿಗೊಳಿಸಲು ಹಾಗೂ ಪೌಷ್ಟಿಕಾಂಶದ ಆಗರ. ಈ ಮೊಸರನ್ನು ಯಾವಗ ತಿನ್ನಬೇಕು. ಇದರಲ್ಲಿ ಪ್ರೋಟೀನ್​ ಪ್ರಮಾಣ ಎಷ್ಟಿರುತ್ತದೆ. ಮೊಸರು ಸೇವನೆಗೆ ಸೂಕ್ತ ಸಮಯ ಯಾವುದು ಎನ್ನುವ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

100 ಗ್ರಾಂ ಮೊಸರಲ್ಲಿ ಎಷ್ಟು ಪ್ರೋಟಿನ್ ಇರತ್ತೆ?

ಇತ್ತೀಚೆಗೆ ನಡೆಸಿದ ಸಂಶೋಧನಾ ವರದಿಗಳ ಪ್ರಕಾರ, ಮನೆಯಲ್ಲಿಯೇ ತಯಾರು ಮಾಡಿದ 100 ಗ್ರಾಂ ಮೊಸರಿನಲ್ಲಿ ಸುಮಾರು 3.1 ರಿಂದ 3.5 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ. ಒಬ್ಬ ಆರೋಗ್ಯವಂತ ವಯಸ್ಕನ ದೈನಂದಿನ ಪ್ರೋಟೀನ್ ಅವಶ್ಯಕತೆಯ ಸುಮಾರು 6-8% ಅನ್ನು ಇದು ಪೂರೈಸಬಲ್ಲದು. ಇದರಲ್ಲಿ ಪ್ರಮುಖವಾಗಿ ಕ್ಯಾಸೀನ್ ಮತ್ತು ವೇ ಪ್ರೋಟೀನ್‌ಗಳು ಇರುತ್ತವೆ, ಇವು ಸುಲಭವಾಗಿ ಜೀರ್ಣವಾಗುತ್ತವೆ.

ಮೊಸರು ಸೇವನೆಗೆ ಸೂಕ್ತ ಸಮಯ ಯಾವುದು?

ಮೊಸರನ್ನು ಇದೇ ಸಮಯದಲ್ಲಿ ಸೇವನೆ ಮಾಡಬೇಕು ಎನ್ನುವ ಯಾವುದೇ ನಿಯಮಗಳಿಲ್ಲ. ಜೊತೆಗೆ ಇಷ್ಟೇ ಸೇವಿಸಬೇಕು ಎನ್ನುವ ಯಾವುದೇ ಕಟ್ಟಳೆಗಳು ಇಲ್ಲ. ಆದರೂ ಕೆಲವು ಸಮಯ ಮಾತ್ರ ದೇಹ ಪೌಷ್ಠಿಕಾಂಶವನ್ನು ಹೀರಿಕೊಳ್ಳುತ್ತದೆ. ಅದು ಯಾವ ಸಮಯ ಎಂದು ನೋಡೋಣ ಬನ್ನಿ.
  • ಹೆಚ್ಚಿನ ಜನರಿಗೆ ಬೆಳಗ್ಗೆ ಮೊಸರು ಸೇವಿಸುವುದು ಆರೋಗ್ಯಕರ. ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ
  • ವ್ಯಾಯಾಮದ ನಂತರ; ಕೆಲವರು ವ್ಯಾಯಾಮ, ವರ್ಕೌಟ್​ ಮಾಡಿದ ನಂತರ ಮೊಸರನ್ನು ಸೇವನೆ ಮಾಡುತ್ತಾರೆ. ಇದು ಸರಿಯಾದ ವಾಡಿಕೆ. ಮೊಸರಿನೊಂದಿಗೆ ಹಣ್ಣುಗಳು, ನಟ್ಸ್ ಅಥವಾ ಸೀಡ್ಸ್​ಗಳಿದ್ದರೆ ಇನ್ನಷ್ಟು ಆರೋಗ್ಯಕರ ಲಾಭವನ್ನು ದೇಹಕ್ಕೆ ಕೊಡಬಹುದು.
  • ಮಧ್ಯಾಹ್ನದ ಊಟದ ಜೊತೆಗೆ ಮೊಸರನ್ನು ಸೇರಿಸುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ಸಹಾಯವಾಗುತ್ತದೆ.
  • ಎಣ್ಣೆಯಲ್ಲಿ ಕರಿದ ಹಾಗೂ ತೂಕ ಹೆಚ್ಚಿಸುವ ತಿಂಡಿಗಳ ಬದಲಾಗಿ ಸಂಜೆಯ ಹೊತ್ತು ಒಂದು ಬಟ್ಟಲು ಮೊಸರು ಸೇವಿಸಬಹುದು.

ಮೊಸರಿನಿಂದ ಸಿಗುತ್ತದೆ ಈ ಪ್ರಯೋಜನಗಳು

  • ಮೊಸರಿನಲ್ಲಿರುವ ಪ್ರೋಟೀನ್ ಸ್ನಾಯುಗಳ ದುರಸ್ತಿ ಮತ್ತು ಬಲವರ್ಧನೆಗೆ ಸಹಾಯ ಮಾಡುತ್ತದೆ.
  • ಮೊಸರು ತಿನ್ನುವುದು ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಭಾವನೆ ನೀಡುವ ಕಾರಣ ಹಸಿವಾಗೋದಿಲ್ಲ. ಹಸಿವಾದಾಗ ಕುರುಕಲು ತಿಂಡಿಗಳನ್ನು ತಿನ್ನುವುದನ್ನು ಅವಾಯ್ಡ್​ ಮಾಡಬಹುದು. ಜೊತೆಗೆ ಇದು ಅನಗತ್ಯ ತೂಕ ಏರಿಕೆಯನ್ನು ನಿಯಂತ್ರಿಸುತ್ತದೆ.
  • ಮೊಸರಿನಲ್ಲಿರುವ ಪ್ರೊಬಯಾಟಿಕ್ಸ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
  • ಮೂಳೆಗಳ ಆರೋಗ್ಯ: ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಕಾರಿ.

ಎಚ್ಚರ ಇರಲಿ

ಹಾಲಿನ ಅಲರ್ಜಿ ಅಥವಾ ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಸಮಸ್ಯೆ ಇದ್ದರೆ, ಮೊಸರು ಸೇವಿಸುವ ಮುನ್ನ ಎಚ್ಚರಿಕೆ ವಹಿಸಿ. ಸಕ್ಕರೆ ಬೆರೆಸಿದ ಮಾರುಕಟ್ಟೆಯ ಫ್ಲೇವರ್ಡ್ ಮೊಸರುಗಳಿಗಿಂತ, ತಾಜಾ ಮತ್ತು ಸಾದಾ ಮೊಸರು ಆರೋಗ್ಯಕ್ಕೆ ಉತ್ತಮ, (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯು ಜಾಗೃತಿ ಉದ್ದೇಶಕ್ಕಾಗಿ ಮಾ

ತ್ರ. ನೀವು ಯಾವುದೇ ಸಮಸ್ಯೆಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net