ಆರೋಗ್ಯಕರವಾಗಿರಲು, ನಾವು ದಿನಕ್ಕೆ ಕನಿಷ್ಠ ಎರಡು ರೀತಿಯ ಹಣ್ಣುಗಳನ್ನು ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಣ್ಣುಗಳಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ನಾರು ನಮ್ಮ ದೇಹಕ್ಕೆ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಆಯುರ್ವೇದ ಮತ್ತು ಪೌಷ್ಟಿಕಾಂಶ ತಜ್ಞರ ಪ್ರಕಾರ, ಸೂರ್ಯಾಸ್ತದ ನಂತರ ಅಥವಾ ರಾತ್ರಿ ಮಲಗುವ ಮೊದಲು ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಗಿಂತ ಪೆಟ್ಟು ಜಾಸ್ತಿ ಎನ್ನಲಾಗಿದೆ.