ತಣ್ಣಗಾದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿತೀರಾ? ತಕ್ಷಣ ನಿಲ್ಲಿಸಿ, ಇಲ್ಲದಿದ್ರೆ ಕಾದಿದೆ ಗಂಡಾಂತರ! Tea Health

Tea Health ಸಾಂದರ್ಭಿಕ ಚಿತ್ರ
Tea Health ಸಾಂದರ್ಭಿಕ ಚಿತ್ರ
Published on

Tea Health:

ಹಲವು ಬಾರಿ ಕೆಲಸದ ಒತ್ತಡದಲ್ಲಿಯೋ ಅಥವಾ ಸ್ನೇಹಿತರೊಡನೆ ಹರಟೆ ಹೊಡೆಯುವಾಗಲೋ ಕಪ್‌ನಲ್ಲಿದ್ದ ಚಹಾ ತಣ್ಣಗಾಗಿ ಬಿಡುತ್ತದೆ. ಆಗ ತಣ್ಣಗಾದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುವುದು, ಅಥವಾ ರಸ್ತೆಬದಿಯ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕುದಿಸಿ ಇಟ್ಟ ಚಹಾವನ್ನು ಕುಡಿಯುವುದು ನಮ್ಮಲ್ಲಿ ಬಹುತೇಕರ ಅಭ್ಯಾಸ. ಆದರೆ, ಈ ಪುಟ್ಟ ನಿರ್ಲಕ್ಷ್ಯ ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬುದು ನಿಮಗೆ ತಿಳಿದಿದೆಯೇ?

ಬೀದಿ ಬದಿಯ ಚಹಾ ಅಂಗಡಿಗಳಲ್ಲಿ ಒಂದೇ ಚಹಾವನ್ನು ಕುದಿಸಿ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ಚಹಾದ ತಾಜಾ ಸುವಾಸನೆ ಸಂಪೂರ್ಣವಾಗಿ ನಾಶವಾಗುವುದಲ್ಲದೆ, ಅದರಲ್ಲಿರುವ ಯಾವುದೇ ರೀತಿಯ ರುಚಿ ಹಾಗೂ ಪೌಷ್ಟಿಕಾಂಶದ ಮೌಲ್ಯಗಳು ಉಳಿಯುವುದಿಲ್ಲ. ಅಷ್ಟೇ ಅಲ್ಲ, ಇದು ದೇಹಕ್ಕೆ ವಿಷಕಾರಿಯಾಗುವ ಸಾಧ್ಯತೆಯೂ ಇರುತ್ತದೆ.

ಚಹಾವನ್ನು ಮತ್ತೆ ಬಿಸಿ ಮಾಡುವುದು ಸುರಕ್ಷಿತವೇ?

1. ಕೆಫೀನ್ ಮತ್ತು ಟ್ಯಾನಿನ್‌ಗಳು ಎರಡೂ ನಾಶ

ಚಹಾವನ್ನು ದೀರ್ಘಕಾಲದವರೆಗೆ ಬಿಸಿ ಮಾಡುವುದರಿಂದ ಅದರಲ್ಲಿರುವ ಕೆಫೀನ್ ಮತ್ತು ಟ್ಯಾನಿನ್‌ಗಳು ಎರಡೂ ನಾಶವಾಗುತ್ತವೆ. ಇದರಿಂದ ಚಹಾದ ರುಚಿ ಕಹಿಯಾಗುತ್ತದೆ ಮತ್ತು ದೇಹಕ್ಕೆ ಒಳ್ಳೆಯದಲ್ಲ. ಆದಾಗ್ಯೂ, ಮತ್ತೆ ಬಿಸಿ ಮಾಡಿಕೊಂಡು ಚಹಾ ಕುಡಿಯುವುದರಿಂದ ಅನ್ನನಾಳದ ಕ್ಯಾನ್ಸರ್​ನ ಅಪಾಯ ಹೆಚ್ಚಾಗುತ್ತದೆ.

2. ನರಗಳ ಮೇಲೆ ಪರಿಣಾಮ

ಚಹಾ ಎಲೆಗಳಲ್ಲಿ ಒಂದು ರೀತಿಯ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಹೊಂದಿರುತ್ತವೆ. ಇವು ಬಿಸಿ ಮಾಡಿದಾಗ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ. ಹೆಚ್ಚುವರಿ ಬ್ಯಾಕ್ಟೀರಿಯಾ ಇರುವಂತಹ ಚಹಾವನ್ನು ಕುಡಿಯುವುದರಿಂದ ಗ್ಲುಕೋಮಾ ಉಂಟಾಗುತ್ತದೆ. ಇದರಿಂದ ನರಗಳ ಮೇಲೆ ಪರಿಣಾಮ ಬೀರುತ್ತದೆ. ಇವು ಸ್ಮರಣಶಕ್ತಿ ಮತ್ತು ದೃಷ್ಟಿ ಕಡಿಮೆಯಾಗಲು ಕಾರಣವಾಗಬಹುದು.

3. ಜೀರ್ಣಕ್ರಿಯೆ ಮೇಲೆ ಪರಿಣಾಮ

ಚಹಾವು ಪ್ರಯೋಜನಕಾರಿ ಆಂಟಿ-ಆಕ್ಸಿಡೆಂಟ್ ಕ್ಯಾಟೆಚಿನ್‌ಗಳನ್ನು ಹೊಂದಿರುತ್ತದೆ. ಹಾಲಿನಲ್ಲಿ ಕ್ಯಾಸೀನ್ ತರಹದ ಪ್ರೋಟೀನ್‌ಗಳಿವೆ. ನೀವು ಚಹಾದೊಂದಿಗೆ ಹಾಲನ್ನು ಬೆರೆಸಿ ಪದೇ ಪದೇ ಬಿಸಿ ಮಾಡಿ ಕುಡಿಯುವುದರಿಂದ ಕ್ಯಾಟೆಚಿನ್‌ಗಳು ಮತ್ತು ಕ್ಯಾಸೀನ್ ಮಿಶ್ರಣವಾಗಿ ಚಹಾದ ಪ್ರಯೋಜನಗಳನ್ನು ನಾಶಮಾಡುತ್ತವೆ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಿ ಅತಿಸಾರ, ಹೊಟ್ಟೆನೋವಿನ ಸಮಸ್ಯೆಯನ್ನು ಉಂಟು ಮಾಡುತ್ತದೆ.

4. ಟ್ಯಾನಿನ್‌ಗಳ ಪ್ರಮಾಣ ಹೆಚ್ಚಾಗುತ್ತದೆ

ಚಹಾ ಪುನಃ ಬಿಸಿ ಮಾಡುವುದರಿಂದ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ನಾಶವಾಗುತ್ತವೆ ಮತ್ತು ಟ್ಯಾನಿನ್‌ಗಳ ಪ್ರಮಾಣ ಹೆಚ್ಚಾಗುತ್ತದೆ. ಇದು ಯಕೃತ್ತಿನ ಸಮಸ್ಯೆ ಮತ್ತು ಆಮ್ಲಾವ್ಯಾಧಿಗೆ ಕಾರಣವಾಗಬಹುದು.

ಏನು ಮಾಡಬೇಕು

ಚಹಾ ತಯಾರಿಸಿದ 15 ನಿಮಿಷಗಳ ಒಳಗಾಗಿ ಕುಡಿಯುವುದು ಅತ್ಯಂತ ಸೂಕ್ತ. ಇದರಿಂದ ಚಹಾ ತಣ್ಣಗಾಗುವುದಿಲ್ಲ ಮತ್ತು ಅದನ್ನು ಮತ್ತೆ ಮರುಬಿಸಿ ಮಾಡುವ ತೊಂದರೆಯೂ ಇರುವುದಿಲ್ಲ. ತಾಜಾ ಚಹಾ ಕುಡಿಯುವುದರಿಂದ ಅದರ ನೈಜ ಸುವಾಸನೆ, ರುಚಿ ಹಾಗೂ ಆಂಟಿಆಕ್ಸಿಡೆಂಟ್‌ಗಳು ಹಾಳಾಗದೆ ಉಳಿಯುತ್ತವೆ. ಅಲ್ಲದೆ ಆಸಿಡಿಟಿ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯ ಕಿರಿಕಿರಿಯಂತಹ ಜೀರ್ಣಕ್ರಿಯೆಯ ಸಮಸ್ಯೆಗಳಿಂದ ದೂರವಿರಬಹುದು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net