ಖರ್ಜೂರದಲ್ಲಿ ನೈಸರ್ಗಿಕ ಸಿಹಿ ಮತ್ತು ಫೈಬರ್ ಇದ್ದರೆ, ಪೀನಟ್ ಬಟರ್‌ನಲ್ಲಿ ಉತ್ತಮ ಕೊಬ್ಬು ಇದೆ. ಓಟ್ಸ್ ಕೂಡ ಫೈಬರ್ ಇದ್ದೂ, ಕೋಕೋ ಮತ್ತು ಡಾರ್ಕ್ ಚಾಕೊಲೇಟ್ ಬ್ರೌನಿಯ ರುಚಿ ನೀಡುತ್ತೆ. ಆದರೆ, ನೈಸರ್ಗಿಕ ಪದಾರ್ಥಗಳಾದರೂ ಇದರಲ್ಲಿ ಕ್ಯಾಲೊರಿ ಇರಲ್ಲ ಎಂದಲ್ಲ. ಖರ್ಜೂರ, ಪೀನಟ್ ಬಟರ್ ಮತ್ತು ಚಾಕೊಲೇಟ್‌ಗಳು ಹೆಚ್ಚು ಶಕ್ತಿಯನ್ನು ಇರುವ ಪದಾರ್ಥಗಳು. ಹೀಗಾಗಿ ಇದನ್ನು ಕೂಡ ಮಿತ ಪ್ರಮಾಣದಲ್ಲಿ ತಿನ್ನುವುದು ಮುಖ್ಯ. ಚಾಕೊಲೇಟ್ ತಿನ್ನಬೇಕು ಅನ್ನಿಸಿದಾಗ ಸಣ್ಣ ಡೆಸರ್ಟ್ ಅಥವಾ ಸ್ನ್ಯಾಕ್ ಆಗಿ ಈ ಬೈಟ್ಸ್‌ಗಳನ್ನು ಸವಿಯಬಹುದು.