ನಂದನಾ ಪ್ಯಾಲೇಸ್ ಸಿಬ್ಬಂದಿಗಳಿಗೆ ಕಾರ್, ಬೈಕ್ ಗಿಫ್ಟ್

37 ವರ್ಷಗಳ ಸಂಭ್ರಮಕ್ಕೆ 37 ವಾಹನಗಳ ವಿತರಣೆ
Nandana Palace gifted cars and bikes to its employees; CMD Dr. R. Ravichandar, actor Ramesh Aravind, and others were present.
ನಂದನ ಪ್ಯಾಲೇಸ್ ತನ್ನ ಕಾರ್ಮಿಕರಿಗೆ ಕಾರು ಮತ್ತು ಬೈಕ್‌ಗಳನ್ನು ಊಡುಗೊರೆಯಾಗಿ ನೀಡಿದ್ದು, ಸಿಎಂಡಿ, ಡಾ.ಆರ್.ರವಿಚಂದರ್, ನಟ ರಮೇಶ್ ಅರವಿಂದ್ ಮತ್ತಿತರರಿದ್ದರು.
Published on: 

ಬೆಂಗಳೂರು : ಹೋಟೆಲ್ ಉದ್ಯಮದಲ್ಲೇ ಮೊಟ್ಟ ಮೊದಲಬಾರಿಗೆ ನಂದನ ಪ್ಯಾಲೇಸ್ ತನ್ನ ಕಾರ್ಮಿಕರಿಗೆ ಕಾರು ಮತ್ತು ಬೈಕ್‌ಗಳನ್ನು ಊಡುಗೊರೆಯಾಗಿ ನೀಡಿದೆ. ಕೋರಮಂಗಲದ ಸೇಂಟ್‌ಜಾನ್ ಸಭಾಂಗಣದಲ್ಲಿ ನಡೆದ ಮಹಾತ್ರಿಯಾ ಪ್ರತಿಪಾದಿತ ಇನ್ಫಿನಿಥಿಸಂ ತತ್ವದ ಸ್ಮರಣಾರ್ಥ ಹಾಗೂ ನಂದನ ಅಚಿವರ್ಸ್‌ಡೇ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಮತ್ತು ನಂದನ ಪ್ಯಾಲೇಸ್‌ನ ಸಿಎಂಡಿ ಡಾ.ಆರ್.ರವಿಚಂದರ್ ಕಾರ್ಮಿಕರಿಗೆ ಊಡುಗೊರೆ ವಿತರಿಸಿದರು.

ಹೋಟೆಲ್ ಉದ್ಯಮ ಆರಂಭಿಸಿದ ದಿನಗಳಿಂದ ಜೊತೆಯಲ್ಲಿರುವ ಹಾಗೂ ಉತ್ತಮವಾಗಿ ಕರ್ತವ್ಯ ಪಾಲನೆ ಮಾಡಿದ ಶೆಫ್, ಸಪ್ಲೈರ್, ಚಾಲಕ, ಸೂಪರ್ ವೈಸರ್, ಜನರಲ್ ಮ್ಯಾನೇಜರ್, ಮ್ಯಾನೇಜರ್ ಸೇರಿದಂತೆ ವಿವಿಧ ಹಂತದ ಕಾರ್ಮಿಕರನ್ನು ಗುರುತಿಸಿ ಒಟ್ಟು 15 ಕಾರು ಮತ್ತು 22 ದ್ವಿಚಕ್ರವಾಹನ ಸೇರಿ ಒಟ್ಟು 37 ವಾಹನಗಳನ್ನು ನೀಡಿದ್ದು, ಒಟ್ಟು ಒಂದು 1 ಕೋಟಿ ರೂ. ಮೌಲ್ಯದ ವಾಹನಗಳಾಗಿವೆ.

ಈ ವೇಳೆ ಮಾತನಾಡಿದ ನಟ ರಮೇಶ್ ಅರವಿಂದ್, ನಂದನ ಎಂದರೆ ಖುಷಿಯನ್ನು ಹಂಚುವವರು ಎಂದರ್ಥ. ಊಟ ಮಾಡಿದಾಗ ಜನರಿಗೆ ತೃಪ್ತಿಯಾಗಬೇಕು. ಇಲ್ಲಿ ಬರುವ ಗ್ರಾಹಕರಿಗೆ ಸಂತೃಪ್ತಿ ಸಿಗಲಿದೆ. ಮನತಿಲ್ ಉರುತಿ ವೆಂಡುಮ್ ಇದು ನನ್ನ ಮೊದಲ ತಮಿಳು ಚಿತ್ರ. ಈ ಚಿತ್ರವನ್ನು ನೋಡಿ ಸ್ಫೂರ್ತಿ ಪಡೆದು ಅವರು ಇಷ್ಟು ದೊಡ್ಡ ಉದ್ಯಮ ಕಟ್ಟಿರುವುದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಕಾರ್ಮಿಕರ ಕೆಲಸವನ್ನು ನೆನಪಿನಲ್ಲಿಟ್ಟುಕೊಂಡು ಅವರಿಗೆ ಊಡುಗೊರೆ ನೀಡುವುದು ಇವರಲ್ಲಿರುವ ಬದ್ಧತೆಯನ್ನು ತೋರಿಸಲಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ಮೊಬೈಲ್ ಎಂ.ಡಿ.ಸುಭಾಷ್ ಚಂದ್ರ, ಮಾಜಿ ಇನ್ಫಿನಿಟಿಸಂ ಪಿ.ಮನೋಹರ, ಎಸ್.ಆರ್.ಆರ್.ಫುಡ್ಸ್ ಇಂಡಿಯಾ ಪ್ರೈ.ಲಿ. ನಿರ್ದೇಶಕಿ ರಮ್ಯ, ಲಸಾರಾ ಹೋಟೆಲ್ ಪ್ರೈ.ಲಿ. ನಿರ್ದೇಶಕ ರವಿನಾ, ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಪ್ರಕಾಶ್ ರಾಜು ಇನ್ನಿತರರಿದ್ದರು.

ನಾನು ಬ್ಯಾಂಕ್ ಕೆಲಸ ಬಿಟ್ಟು ಹೊಟೇಲ್ ಉದ್ಯಮಕ್ಕೆ ಬಂದೆ. ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ, ಗೆಲ್ಲಬೇಕೆಂಬ ಛಲವನ್ನು ‘ಮನತಿಲ್ ಉರುತಿ ವೆಂಡುಮ್’ ಸಿನಿಮಾ ನೋಡಿ ಕಲಿತೆ. ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ನನ್ನ ಜೊತೆಗಿರುವ ಕೆಲಸಗರಾರ ಪರಿಶ್ರಮವೇ ಕಾರಣ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಈ ಊಡುಗೊರೆಯನ್ನು ನೀಡುತ್ತಿದ್ದೇನೆ.
ಡಾ.ಆರ್.ರವಿಚಂದರ್, ನಂದನ ಪ್ಯಾಲೇಸ್ ಸಿಎಂಡಿ