ಹಬ್ಬದ ನೈವೇದ್ಯಕ್ಕೆ ಪರ್ಫೆಕ್ಟ್: ರುಚಿಕರ ಹಾಗೂ ಆರೋಗ್ಯಕರ ಹೆಸರು ಬೇಳೆ ಪಾಯಸ ಮಾಡುವ ಸರಳ ವಿಧಾನ! Hesaru Bele Payasa

 Hesaru Bele Payasa  ಸಾಂದರ್ಭಿಕ ಚಿತ್ರ
Hesaru Bele Payasa ಸಾಂದರ್ಭಿಕ ಚಿತ್ರ
Published on

Hesaru Bele Payasa:

ಶ್ರಾವಣ ಮಾಸದ ಪವಿತ್ರ ಪೂಜೆ ಹಾಗೂ ಹಬ್ಬಗಳಿಗೆ ಹೆಸರು ಬೇಳೆ ಪಾಯಸ ಅತ್ಯುತ್ತಮ ನೈವೇದ್ಯ. ಬೆಲ್ಲ ಮತ್ತು ತೆಂಗಿನ ಹಾಲಿನ ಸುವಾಸನೆಯಿಂದ ಕೂಡಿದ ಈ ಸಾಂಪ್ರದಾಯಿಕ ಪಾಯಸವು ರುಚಿಕರ ಮಾತ್ರವಲ್ಲ, ದೇಹಕ್ಕೂ ಅತ್ಯಂತ ತಂಪು. ಮನೆಮಂದಿಯಲ್ಲ ಮೆಚ್ಚುವ ಈ ದಿವ್ಯ ನೈವೇದ್ಯವನ್ನು ಅತೀ ಸುಲಭವಾಗಿ ಹಾಗೂ ರುಚಿಕರವಾಗಿ ತಯಾರಿಸುವ ಸಂಪೂರ್ಣ ಹಂತ-ಹಂತದ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

* 1/2 ಕಪ್ ಹೆಸರು ಬೇಳೆ

*

*

*

*

*

*

*

*

ಮಾಡುವ ವಿಧಾನ

ಮೊದಲು ಬಾಣಲೆಗೆ 1 ಚಮಚ ತುಪ್ಪ ಹಾಕಿ, ಹೆಸರು ಬೇಳೆಯನ್ನು ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಹುರಿದ ಹೆಸರು ಬೇಳೆಯನ್ನು ತೊಳೆದು, ಪ್ರೆಶರ್ ಕುಕ್ಕರ್‌ಗೆ 1.5 ಕಪ್​ ನೀರು ಸೇರಿಸಿ 3 ಸಿಟಿ ಬರುವವರೆಗೆ ಬೇಯಿಸಿಕೊಂಡು ಪಕ್ಕಕ್ಕಿಟ್ಟುಕೊಳ್ಳಿ.
ಇದಾದ ಬಳಿಕ ತೆಂಗಿನ ತುರಿ ಮತ್ತು 1-2 ಏಲಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಬೆಲ್ಲ ಮತ್ತು 1/4 ಕಪ್​ ನೀರು ಹಾಕಿ ಬೆಲ್ಲ ಕರಗಿಸಿ ಸೋಸಿಕೊಳ್ಳಿ. ಬೆಂದ ಹೆಸರು ಬೇಳೆಗೆ ಬೆಲ್ಲದ ನೀರು ಮತ್ತು ತೆಂಗಿನ ಮಿಶ್ರಣ ಸೇರಿಸಿ 5 ನಿಮಿಷ ಕುದಿಸಿರಿ. ಉರಿ ಆಫ್ ಮಾಡಿ ಕಾಯಿಸಿದ ಹಾಲು ಸೇರಿಸಿ, ತುಪ್ಪದಲ್ಲಿ ಹುರಿದ 10-12 ಗೇರುಬೀಜ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಸೇರಿಸಿ ದೇವರಿಗೆ ನೈವೇದ್ಯ ಮಾಡಿ ಸೇವಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net