ಹವಾಮಾನ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗಳಿಗೆ ಎಡತಾಕುತ್ತಿರುವ ಜನರು

ಅವಿನಾಶ್ ಜೈನಹಳ್ಳಿ ಮೈಸೂರು
ವಾತಾವರಣದಲ್ಲಿನ ಏರುಪೇರಿನಿಂದಾಗಿ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಜನರಿಗೆ ಶೀತ, ಸಾಮಾನ್ಯ ಜ್ವರ, ಕೆಮ್ಮು, ಮೈ-ಕೈ ಹಾಗೂ ಕೀಲುಗಳ ನೋವು ಹೆಚ್ಚಾಗಿ ಕಂಡುಬರುತ್ತಿದ್ದು, ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ.

ಋತುಮಾನದ ಬದಲಾವಣೆಯಿಂದ ಉಂಟಾಗಿರುವ ಈ ಸಮಸ್ಯೆಯಿಂದ ಬಹುತೇಕ ಮನೆಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರು ಕಂಡುಬರುತ್ತಿದ್ದಾರೆ. ಈ ಸಮಸ್ಯೆಗೂ, ಜನರನ್ನು ಕಾಡುವ ಬೇರೆ ಬೇರೆ ರೋಗ ಲಕ್ಷಣಗಳಿಗೂ ಸಾಮ್ಯತೆ ಇರುವುದರಿಂದ ಜನರು ಆತಂಕಗೊಂಡಿದ್ದಾರೆ. ಆದರೆ ಆತಂಕ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹವಾಮಾನ ಬದಲಾವಣೆಯಿಂದಾಗಿ ವಿವಿಧ ರೋಗಲಕ್ಷಣಗಳು ಕಂಡುಬರುತ್ತಿವೆ. ಈ ಬಗ್ಗೆ ಸಾರ್ವಜನಿಕರು ಆತಂಕಪಡದೆ ಎಚ್ಚರಿಕೆ ವಹಿಸಬೇಕು. ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಮಕ್ಕಳ ಜತೆಗೆ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಕಾಯಿಸಿ ಆರಿಸಿದ ನೀರು ಕುಡಿಯುವುದು ಸೇರಿದಂತೆ ಅಗತ್ಯವಿರುವಾಗ ವೈದ್ಯರ ಸಲಹೆ ಪಡೆದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ ವೈದ್ಯರು.

ಚಳಿ ಜತೆಗೆ ಉಷ್ಣಾಂಶವೂ ಹೆಚ್ಚು

ಜಿಲ್ಲೆಯಲ್ಲಿ ಪ್ರತಿ ಬಾರಿ ಜನವರಿ ಅಂತ್ಯದ ವೇಳೆಗೆ ಚಳಿ ಕಡಿಮೆಯಾಗುತ್ತದೆ. ಆದರೆ, ಈ ವರ್ಷ ಜನವರಿ ಆರಂಭಕ್ಕೆ ಹೊಲಿಸಿದರೆ ಅಂತ್ಯದಲ್ಲೇ ಕೊಂಚ ಪ್ರಮಾಣದಲ್ಲಿ ಚಳಿ ಹೆಚ್ಚಾಗಿದೆ. ಚಳಿ ಜತೆಗೆ ಮಧ್ಯಾಹ್ನ ಬಿಸಿಲು ಕೂಡ ಇದೆ. ಡಿಸೆಂಬರ್ ಅಂತ್ಯ ಹಾಗೂ ಜನವರಿ ಆರಂಭದಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಆದರೆ, ಸದ್ಯ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್, ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಚಳಿಯ ಜತೆಗೆ ಉಷ್ಣಾಂಶವೂ ಹೆಚ್ಚಾಗಿದೆ. ಬೆಳಗ್ಗೆ ಮತ್ತು ರಾತ್ರಿ ಚಳಿ ಇದ್ದರೆ, ಮಧ್ಯಾಹ್ನ ಸುಡು ಬಿಸಿಲು ಇದೆ. ಬೆಳಗ್ಗೆ ಸೂರ್ಯನ ಕಿರಣಗಳು ಬೀಳುವವರೆಗೂ ಜನ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಆದರೆ, ಮಧ್ಯಾಹ್ನ 12 ಗಂಟೆಯಾಗುತ್ತಲೇ ಸುಡು ಬಿಸಿಲು ಪ್ರಾರಂಭವಾಗುತ್ತಿದ್ದು, ಆ ಸಮಯದಲ್ಲೂ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಬೆಳಗ್ಗೆ, ಸಂಜೆ ಚಳಿ ಹಾಗೂ ಮಧ್ಯಾಹ್ನ ಬಿಸಿಲಿನ ಶಾಖದಿಂದ ಕಿರಿಕಿರಿ ಅನುಭವಿಸುವಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಆಸ್ಪತ್ರೆಗಳು ಭರ್ತಿ

ಸಾಮಾನ್ಯ ಜ್ವರ ಹೆಚ್ಚಾಗಿರುವುದರಿಂದ ಕೆ.ಆರ್.ನಗರ, ಪಿರಿಯಾಟ್ಟಣ, ಎಚ್.ಡಿ.ಕೋಟೆ, ನಂಜನಗೂಡು, ಹುಣಸೂರು, ತಿ.ನರಸೀಪುರ ಸೇರಿದಂತೆ ಗ್ರಾಮಾಂತರ ಪ್ರದೇಶದ ಎಲ್ಲೆಡೆ ಆಸ್ಪತ್ರೆಗಳು ರೋಗಿಗಳಿಂದ ತುಂಬಿರುತ್ತವೆ. ಇನ್ನು ಮೈಸೂರು ನಗರದ ರಾಮಾನುಜ ರಸ್ತೆ, ವಿದ್ಯಾರಣ್ಯಪುರಂ, ನಾರಾಯಣಶಾಸ್ತ್ರಿ ರಸ್ತೆ, ಚಾಮುಂಡಿಪುರಂ, ಜಯನಗರ, ಅಗ್ರಹಾರ, ಬಂಬೂಬಜಾರ್, ನಜರ್‌ಬಾದ್, ಉದಯಗಿರಿ, ಕುವೆಂಪುನಗರ, ಅರವಿಂದನಗರ, ರಾಮಕೃಷ್ಣನಗರ, ಶಾರದಾದೇವಿನಗರ, ಟಿ.ಕೆ.ಲೇಔಟ್ ಸೇರಿದಂತೆ ಇನ್ನಿತರ ಬಡಾವಣೆಗಳಲ್ಲಿ ಸರ್ಕಾರಿ, ಖಾಸಗಿ ವೈದ್ಯರು ನಡೆಸುವ ಕ್ಲಿನಿಕ್‌ಗಳಲ್ಲಿ ಬೆಳಗ್ಗೆಯಿಂದಲೂ ರೋಗಿಗಳು ತಂಬಿರುವ ದೃಶ್ಯ ಕಂಡುಬರುತ್ತಿದೆ.

ಅದರಲ್ಲೂ ಮಕ್ಕಳನ್ನು ತೋರಿಸಲು ಬರುವವರು ಸರದಿ ಸಾಲಿನಲ್ಲಿ ಕಾಯಲು ಸಾಧ್ಯವಾಗದೆ ಹಲವು ಟೋಕನ್ ಪಡೆದು ಹೋದರೆ, ಮತ್ತಷ್ಟು ಜನ ಮಕ್ಕಳೊಂದಿಗೆ ಕಾದು ಕುಳಿತು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ಮನೆಯವರು ಜ್ವರಕ್ಕೆ ತುತ್ತಾಗಿ ಕ್ಲಿನಿಕ್‌ಗೆ ಆಗಮಿಸಿ ವೈದ್ಯರ ಬಳಿ ಸಲಹೆ ಪಡೆದು ತೆರಳುತ್ತಿರುವ ಉದಾಹರಣೆಗಳೂ ಇವೆ.

ಕಳೆದ ಕೆಲವು ದಿನಗಳಿಂದ ಖಾಸಗಿ ಕ್ಲಿನಿಕ್‌ಗಳ ಮುಂದೆ ಜನರ ದಂಡು ಕಂಡುಬರುತ್ತಿದೆ. ಬಹುತೇಕರಲ್ಲಿ ಕಾಲಿನ ಕೀಲುಗಳ ನೋವು, ಜ್ವರ, ನೆಗಡಿ, ಗಂಟಲ ಕಿರಿಕಿರಿಯಂಥ ಸಮಸ್ಯೆಗಳು ಕಾಣಿಸಿಕೊಂಡಿವೆ. ಶೀತಬಾಧೆ, ಕೆಮ್ಮು, ದೇಹ ಸುಸ್ತಾದಂತೆ ಭಾಸವಾಗುತ್ತಿದೆ ಎಂದು ಜನರು ಆತಂಕ ತೋಡಿಕೊಳ್ಳುತ್ತಾರೆ.

ಹೀಗೆ ಮಾಡುವುದು ಸೂಕ್ತ

ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಶುಚಿತ್ವಕ್ಕೆ ಆದ್ಯತೆ ಕೊಡಬೇಕು. ಉಸಿರಾಟದ ತೊಂದರೆ, 99 ಡಿಗ್ರಿ ಮೀರಿದ ಜ್ವರವಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಮನೆಯ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಮಸಾಲೆ ಮತ್ತು ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ದೇಹವನ್ನು ಬೆಚ್ಚಗಿರಿಸಿಕೊಳ್ಳಲು ಸ್ವೆಟರ್, ಕಿವಿಗೆ ಹತ್ತಿ ಹಾಕಿಕೊಳ್ಳಬೇಕು. ಕುದಿಸಿ ಆರಿಸಿದ ನೀರು ಕುಡಿಯಬೇಕು. ಬಿಸಿ ಹಾಗೂ ಶುಚಿಯಾದ ಆಹಾರ ಸೇವಿಸಬೇಕು. ಫ್ರಿಡ್ಜ್‌ನಲ್ಲಿ ಹೆಚ್ಚು ಹೊತ್ತು ಇಟ್ಟ ಆಹಾರವನ್ನು ತಿನ್ನಬಾರದು. ಧೂಳಿನಿಂದ ದೂರವಿರಬೇಕು. ಹೊರ ಹೋಗುವಾಗ ಚೆನ್ನಾಗಿ ಒಣಗಿಸಿದ ಬಟ್ಟೆಯನ್ನು ಮೈ ತುಂಬ ಧರಿಸಬೇಕು. ಮಕ್ಕಳಿಗೆ ಬೆಚ್ಚನೆಯ ಉಡುಪು ತೊಡಿಸಬೇಕು. ಹೊರಗಿನ ಆಹಾರ ಸೇವನೆ ನಿಯಂತ್ರಿಸಬೇಕು. ಯಾವುದೇ ರೋಗಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು.

ಹವಾಮಾನ ಬದಲಾವಣೆಯಿಂದಾಗಿ ವಿವಿಧ ರೋಗಲಕ್ಷಣಗಳು ಕಂಡುಬರುತ್ತಿವೆ. ಈ ಬಗ್ಗೆ ಸಾರ್ವಜನಿಕರು ಆತಂಕಪಡದೆ ಎಚ್ಚರಿಕೆ ವಹಿಸಬೇಕು. ವೈದ್ಯರ ಸಲಹೆ ಪಡೆದು ಮುಂಜಾಗ್ರತಾ ಕ್ರಮ ವಹಿಸಬೇಕು.
ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ