

ಫ್ಲೋರಿಡಾ: ಕರೊನಾ ವೈರಸ್ ದಾಳಿ ಹಿನ್ನೆಲೆಯಲ್ಲಿ ಮನೆಯಲ್ಲಿ ಇರುವವರನ್ನು ಸಂತೋಷಪಡಿಸಲು ಮಹಿಳೆ ಪೌರಾಣಿಕದಲ್ಲಿ ಚಿತ್ರಿತವಾಗಿರುವ ಯುನಿಕಾರ್ನ್ (ಕುದುರೆ ರೀತಿಯ ಪ್ರಾಣಿ) ವೇಷ ತೊಟ್ಟು ಬೀದಿಗಳಲ್ಲಿ ಸಂಚರಿಸಿದ್ದಾರೆ.
40 ವರ್ಷದ ಮಹಿಳೆ ಕೋರೆ ಜುರ್ಗೆನ್ಸನ್, ಯುನಿಕಾರ್ನ್ ವೇಷ ತೊಟ್ಟು ಮನೆ ಸಮೀಪದ ಬೀದಿಗಳಲ್ಲಿ ಸಂಚರಿಸಿ ಕುಣಿಯುತ್ತಾ, ಹಾಡುತ್ತಾ ಎಲ್ಲರನ್ನೂ ರಂಜಿಸಿದರು. ಮನೆಯಲ್ಲಿದ್ದವರು ಬಾಲ್ಕನಿಗೆ ಬಂದು ಮಹಿಳೆಯ ವೇಷ ನೋಡಿ ಸಂತೋಷಪಟ್ಟರು.
ವಾಷಿಂಗ್ಟನ್ನಲ್ಲಿರುವ ಮಹಿಳೆಯ ಸ್ನೇಹಿತನೊಬ್ಬ ಪ್ರಾಣಿಯೊಂದರ ವೇಷ ತೊಟ್ಟು ರಸ್ತೆಯಲ್ಲಿ ಸಂಚರಿಸಿ ಜನರನ್ನು ಸಂತೋಪಪಡಿಸಿದ್ದ. ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಕೋರೆ ಜುರ್ಗೆನ್ಸನ್ ಅವರಿಗೆ ನೀವು ಈ ರೀತಿ ಮಾಡಿ ಜನರನ್ನು ರಂಜಿಸುತ್ತೀರಾ ಎಂದು ಸವಾಲು ಹಾಕಿದ್ದ. ಈ ಸವಾಲನ್ನು ಸ್ವೀಕರಿಸಿದ ಮಹಿಳೆ ಯುನಿಕಾರ್ನ್ ವೇಷ ತೊಟ್ಟು ಜನರನ್ನು ರಂಜಿಸಿದ್ದಾರೆ.
ಮಹಿಳೆ ಬೀದಿಯಲ್ಲಿ ಸಂಚರಿಸುವಾಗ ವಾಹನಗಳಲ್ಲಿ ತೆರಳುತ್ತಿದ್ದವರು ಆಕೆಗೆ ಚಪ್ಪಾಳೆ ತಟ್ಟಿ ಗೌರವ ಕೂಡ ಸಲ್ಲಿಸಿದ್ದಾರೆ. (ಏಜೆನ್ಸೀಸ್)