VIDEO- ಕೋರ್ಟ್​ ಮುಂದೆ ಭರ್ಜರಿ ವ್ಯಾಯಾಮ ಮಾಡಿ ಹೀಗೊಂದು ಪ್ರತಿಭಟನೆ!

vyayama-protest1
Published on

ಫ್ಲೊರಿಡಾ: ಫ್ಲೊರಿಡಾದ ಕೋರ್ಟ್​ ಆವರಣದಲ್ಲಿ ನಿನ್ನೆ ಏಕಾಏಕಿ ಜಮಾಯಿಸಿದ ಕೆಲವು ಯುವಕ- ಯುವತಿಯರು ಇದ್ದಕ್ಕಿದ್ದಂತೆಯೇ ವ್ಯಾಯಾಮದಲ್ಲಿ ತೊಡಗಿಸಿಕೊಂಡರು. ಅಲ್ಲಿದ್ದವರಿಗೆ ಅಚ್ಚರಿಯೋ ಅಚ್ಚರಿ.

ನಮನಮೂನೆಯ ವ್ಯಾಯಾಮ, ಜಿಮ್ನಾಸ್ಟಿಕ್​ ಎಲ್ಲವೂ ಅಲ್ಲಿ ನಡೆದವು. ಕೋರ್ಟ್​ಗೆ ನ್ಯಾಯಮೂರ್ತಿಗಳು ಬರುತ್ತಿದ್ದಂತೆಯೇ ಇವರ ಎಕ್ಸಸೈಸ್​ ಇನ್ನೂ ಜೋರಾಯಿತು.

ಅಷ್ಟಕ್ಕೂ ಇವರೆಲ್ಲಾ ಹೀಗೆ ಏಕಾಏಕಿ ಕೋರ್ಟ್​ ಆರಣದ ಮುಂದೆ ದಾಳಿ ನಡೆಸಿರುವುದಕ್ಕೆ ಕಾರಣ, ಅಲ್ಲಿಯ ಫಿಟ್ನೆಸ್​ ಕೇಂದ್ರಗಳನ್ನು ಲಾಕ್​ಡೌನ್​ ಹಿನ್ನೆಲೆಯಲ್ಲಿ ಮುಚ್ಚಿರುವುದು! ಹೌದು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಕರೊನಾ ವೈರಸ್​ ಸೋಂಕು ಶೀಘ್ರದಲ್ಲಿ ಹರಡುವಲ್ಲಿ ಇಂಥ ಕೇಂದ್ರಗಳದ್ದು ದೊಡ್ಡ ಪಾಲು ಇದೆ ಎಂಬ ಕಾರಣಕ್ಕೆ ಎಲ್ಲಾ ಕಡೆಗಳಂತೆ ಅಮೆಕದಾದ್ಯಂತ ಫಿಟ್​ನೆಟ್​ ಕೇಂದ್ರ, ಜಿಮ್ನಾಸ್ಟಿಕ್ ಕೇಂದ್ರಗಳನ್ನು ಮುಚ್ಚಲಾಗಿದೆ.

ಕಳೆದ ವಾರ ಇದನ್ನು ತೆರೆಯುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಕರೊನಾ ವೈರಸ್​ ಹರಡುವಿಕೆ ಇನ್ನಷ್ಟು ಭೀಕರ ಆಗಿರುವ ಹಿನ್ನೆಲೆಯಲ್ಲಿ ಇದನ್ನು ತೆರೆಯಬಾರದು ಎಂದು ಆದೇಶಿಸಲಾಗಿದೆ.

ಇದರಿಂದ ಹಲವಾರು ಉದ್ಯೋಗಿಗಳಿಗೆ ಚಿಂತೆ ಕಾಡಿದೆ. ​ ಹಲವು ವಾರ ಕಳೆದರೂ ಫಿಟ್ನೆಸ್ ಕೇಂದ್ರ ತೆರೆಯದ್ದರಿಂದ ತಾಳ್ಮೆ ಕಳೆದುಕೊಂಡ ಫಿಟ್ನೆಸ್ ಉತ್ಸಾಹಿಗಳು ಬೀದಿಗಿಳಿದು ಪ್ರತಿಭಟಿಸಿದ್ದೂ ಆಯ್ತು. ಫಿಟ್ನೆಸ್ ಕೇಂದ್ರ ತೆರೆಯುವಂತೆ ಬ್ಯಾನರ್, ಫಲಕ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು ಆದರೆ ಅದಕ್ಕೆ ಸರ್ಕಾರ ಹೆಚ್ಚಿನ ತಲೆ ಕೆಡಿಸಿಕೊಳ್ಳದ ಕಾರಣ, ಕೋರ್ಟ್​ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.

ಸುಮ್ಮನೆ ಘೋಷಣೆ ಕೂಗಿದರೆ ಪ್ರಯೋಜನ ಇಲ್ಲ ಎಂದುಕೊಂಡು ಘೋಷಣೆ ಜತೆ, ವ್ಯಾಯಾಮ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಈ ಪ್ರತಿಭಟನೆಗಾದರೂ ಸರ್ಕಾರ ಜಗ್ಗಲಿ, ತಮ್ಮ ಗೋಳು ಆಲಿಸಲಿ ಎನ್ನುವುದು ಇವರ ಅಂಬೋಣ. ಇದರ ವೀಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net