ಪ್ರವಾಹದ ಹೊಡೆತಕ್ಕೆ ಸಿಲುಕಿ ಮರವೇರಿದ ಹಾವುಗಳು, ಕೋತಿಗಳು... ಹಸಿವುನಿಂದ ಬಳತ್ತಿವೆ ಮೂಕಜೀವಿಗಳು

Flood -
Published on

ಬೆಂಗಳೂರು: ರಾಜ್ಯದಲ್ಲಿ ರಣಭೀಕರ ಮಳೆಗೆ ಜನರ ಬದುಕು ಮೂರಾಬಟ್ಟೆಯಾಗಿದ್ದು, ಇಡೀ ಜೀವಿಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ವಾಹದ ಹೊಡೆತಕ್ಕೆ ಸಿಕ್ಕ ಹಾವುಗಳು, ಕೋತಿಗಳು, ಪಕ್ಷಿಗಳು ಮರವೇರಿದ್ದು, ಹಸಿವಿನಿಂದ ಬಳಲುತ್ತಿರುವ ದೃಶ್ಯ ಕಣ್ಣೀರು ತರಿಸುತ್ತಿದೆ.

ಮಹಾಮಾರಿ ಕರೊನಾ ಆತಂಕದ ನಡುವೆ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಕರ್ನಾಟಕದ ಅರ್ಧಭಾಗ ಜಲಾವೃತವಾಗಿದೆ. ಗುಡ್ಡ ಕುಸಿತ, ಕಡಲು ಕೊರೆತ, ಮಣ್ಣು ಕುಸಿತ, ತುಂಬಿ ಹರಿಯುತ್ತಿರುವ ನದಿಗಳು-ಜಲಾಶಯಗಳು, ಸಲಕ ಜೀವಿಯನ್ನೇ ಕಾಪಾಡುವ ದೇವರಿಗೂ ಜಲದಿಗ್ಬಂಧನ... ಹೀಗೆ ಈ ಭಾರೀ ಮಳೆ ಸೃಷ್ಟಿಸಿರುವ ಅವಾಂತರ ಹೇಳತೀರದು. ಮೂಕಜೀವಿಗಳ ಮೇಲೂ ಮಳೆರಾಯ ಕರುಣೆ ತೋರಿಲ್ಲ.

ಶಿವಮೊಗ್ಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ತುಂಬಿ ಹರಿಯುತ್ತಿದೆ. ಪ್ರವಾಹಕ್ಕೆ ಸಿಲುಕಿದ ಹಾವುಗಳು ಪ್ರಾಣಭೀತಿಯಲ್ಲಿ ತುಂಗಾ ಸೇತುವೆ ಬಳಿಯ ಮರಗಳನ್ನೇರಿ ನಲುಗುತ್ತಿವೆ.

ತುಂಗಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಪ್ರವಾಹದ ಬಿಸಿ ಕೋತಿಗಳಿಗೂ ತಟ್ಟಿದೆ. ಹರಿಹರ ತಾಲೂಕಿನ ರಾಜನಹಳ್ಳಿ ಬಳಿ ಹೊಳೆಯ ಮಧ್ಯೆ ಇರುವ ಮರದಲ್ಲಿ 60ಕ್ಕೂ ಹೆಚ್ಚು ಕೋತಿಗಳು ಸಿಕ್ಕಿ ಹಾಕಿಕೊಂಡಿವೆ. ಕೆಳಗೆ ಐದಾರು ಅಡಿವರೆಗೂ ಜಲಾವೃತವಾಗಿದ್ದು, ಎರಡು ದಿನಗಳಿಂದ ಆಹಾರವಿಲ್ಲದೆ ಕೋತಿಗಳು ನರಳುತ್ತಿವೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಸಾಪೂರ ಬಳಿ ಮಾರ್ಕಂಡಯ್ಯ ನದಿ ಪ್ರವಾಹದ ನೀರಿನಲ್ಲಿ ಮೀನುಗಳು ತೇಲಿಕೊಂಡು ಬರುತ್ತಿವೆ. ಆ ಪೈಕಿ ಬೃಹತ್​ ಗಾತ್ರದ ಮೀನೊಂದು ತೇಲುತ್ತಿರುವ ದೃಶ್ಯ ವೈರಲ್​ ಆಗಿದೆ.

ಇನ್ನು ಗದಗ ಮತ್ತು ಬೆಳಗಾವಿಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ ನಾಯಿಗಳನ್ನು ರಕ್ಷಿಸಲಾಗಿದೆ. ಹೀಗೆ ರಾಜ್ಯದ ಹಲವೆಡೆ ಮಳೆಯಿಂದಾಗಿ ಮೂಕಜೀವಿಗಳೂ ರೋದಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net