ಕಡಿಮೆ ಬೆಲೆಗೆ ದುಬೈ ಚಿನ್ನ ಕೊಡುವುದಾಗಿ ಸುಲಿಗೆ ಮಾಡಿದ್ದ ಐವರು ಜೈಲಿಗೆ

arrest (10)
Published on

ಬೆಂಗಳೂರು: ದುಬೈಯಿಂದ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಪಾನ್‌ಬ್ರೋಕರ್‌ನನ್ನು ಕರೆಸಿಕೊಂಡು ಮಚ್ಚಿನಿಂದ ಹಲ್ಲೆ ಮಾಡಿ 60 ಲಕ್ಷ ರೂ. ದರೋಡೆ ಮಾಡಿದ್ದ ಐವರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುರುಬರಹಳ್ಳಿಯ ಮಹಮ್ಮದ್ ರಿಜ್ವಾನ್ (24), ಇಂದಿರಾನಗರದ ಸತೀಶ್ (19), ದಿವಾಕರ್ (19) ಮತ್ತು ಮೊಹಮ್ಮದ್ ಇರ್ಪಾನ್ (20) ಮತ್ತು ರಾಜಾಜಿನಗರದ ಆಶ್ರಫ್ (20) ಬಂಧಿತರು.

ಡಿಸೆಂಬರ್ 11ರಂದು ಕೆಜಿಎ್ ಮೂಲದ ಪಾನ್ ಬ್ರೋಕರ್ ಸಂಕೇತ್ ಎಂಬಾತನ ಬಳಿ 60 ಲಕ್ಷ ರೂ. ಸುಲಿಗೆ ಮಾಡಿದ್ದರು. ಆರೋಪಿಗಳನ್ನು ಬಂಧಿಸಿ 55 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ. ಕೆಜಿಎ್ನ ರಾಬರ್ಟಸನ್ ಪೇಟೆಯಲ್ಲಿ ಪಾನ್ ಬ್ರೋಕರ್ ಸಂಕೇತ್ ಜೈನ್, ಬೆಂಗಳೂರಿಗೆ ವ್ಯವಹಾರ ಸಲುವಾಗಿ ಬಂದು ಹೋಗುತ್ತಿದ್ದರು. ಸಂಬಂಧಿಕರ ಮೂಲಕ ಕುರುಬರಹಳ್ಳಿಯಲ್ಲಿ ಜಿಮ್ ನಡೆಸುತ್ತಿರುವ ಮಹಮ್ಮದ್ ರಿಜ್ವಾನ್, ಪರಿಚಯವಾಗಿದೆ.

ದುಬೈನಿಂದ ಚಿನ್ನದ ಗಟ್ಟಿಯನ್ನು ಕಡಿಮೆ ಬೆಲೆಗೆ ತಂದು ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದ. ನಿಮಗೇ ಬೇಕಾದರೇ ಕಡಿಮೆ ಬೆಲೆಗೆ ಕೊಡುವುದಾಗಿ ಆಮಿಷವೊಡ್ಡಿದ್ದ. ಸಹೋದರ ಮನೆಗೆ ಹಣ ಹೊಂದಿಸುತ್ತಿದ್ದ ಸಂಕೇತ್, ಕಡಿಮೆ ಅವದಿಯಲ್ಲಿ ಹೆಚ್ಚಿನ ಹಣ ಗಳಿಸುವ ಆಸೆಯಿಂದ ಒಪ್ಪಿಕೊಂಡಿದ್ದರು. ಸಂಕೇತ್‌ಗೆ ಕರೆ ಮಾಡಿದ ರಿಜ್ವಾನ್, ದುಬೈಯಿಂದ 1 ಕೆಜಿ ಚಿನ್ನ ಬರುತ್ತಿದೆ. ಹಣ ಹೊಂದಿಸಿಕೊಳ್ಳುವಂತೆ ಸೂಚಿಸಿದ್ದ. ಪಾನ್‌ಬ್ರೋಕರ್ 60 ಲಕ್ಷ ರೂ. ಸಂಗ್ರಹಿಸಿ ರಿಜ್ವಾನ್‌ಗೆ ತಿಳಿಸಿದ್ದರು. ಅಷ್ಟೊತ್ತಿಗೆ ರಿಜ್ವಾನ್ ತನ್ನ ಆಪ್ತ ರ್ಇಾನ್ ಸೇರಿದಂತೆ ಐವರು ಸಹಚರರೊಂದಿಗೆ ಸೇರಿಕೊಂಡು ಸುಲಿಗೆಗೆ ಸಿದ್ದವಾಗಿದ್ದರು.

ಪೂರ್ವ ಸಂಚಿನಂತೆ ಡಿ.11ರ ಮಧ್ಯಾಹ್ನ 12 ಗಂಟೆಗೆ ರಾಜಾಜಿನಗರ ಮೆಟ್ರೋ ನಿಲ್ದಾಣದ ಬಳಿಗೆ ಸಂಕೇತ್ ಹಣದೊಂದಿಗೆ ಹೋಗಿದ್ದರು. ಕಾರಿನಲ್ಲಿ ಕಾಯುತ್ತಿದ್ದ ರಿಜ್ವಾನ್ ಮತ್ತು ಸ್ನೇಹಿತರು, ತಮ್ಮ ಕಾರಿಗೆ ಸಂಕೇತ್‌ನನ್ನು ಹತ್ತಿಸಿಕೊಂಡು ಮಾರಕಾಸಗಳಿಂದ ಹಲ್ಲೆ ನಡೆಸಿ ಹಣ ದೋಚಿದ್ದರು.

ಬಸವೇಶ್ವರದ ಆರ್ದಶ್ ಲೇಔಟ್ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಕಾರಿನಿಂದ ಸಂಕೇತ್‌ನನ್ನು ತಳ್ಳಿ ಆರೋಪಿಗಳು ಪರಾರಿಯಾಗಿದ್ದರು. ಸ್ಥಳೀಯರ ಸಹಾಯದಿಂದ ಸಂಕೇತ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆನಂತರ ದೂರು ಸಲ್ಲಿಸಿದದರು. ಇದರ ಮೇರೆಗೆ ತನಿಖೆ ಕೈಗೊಂಡು ಆರೋಪಿಯ ಮಾಹಿತಿ ಕಲೆ ಹಾಕಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net