More

    ಎಎಐನಲ್ಲಿ ಉದ್ಯೋಗ ನೀಡುವ ಹುಸಿ ಭರವಸೆ ನೀಡಿ ಲಕ್ಷಾಂತರ ರೂ. ವಂಚಿಸಿದ ಐವರ ಬಂಧನ

    ದೆಹಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಮೋಸ ಮಾಡಿದ ಆರೋಪದಡಿ ದೆಹಲಿ ಪೊಲೀಸರು ಮಂಗಳವಾರ ಐವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸಾಜಿದ್ ಅಲಿ ಸಾಜಿದ್ ಎಂಬ ಗುಂಪಿನ ಮಾಸ್ಟರ್ ಮೈಂಡ್ ಕೂಡ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
    ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಸುಮಾರು 4.47 ಲಕ್ಷ ರೂ.ಗಳನ್ನು ವಂಚಿಸಲಾಗಿದೆ ಎಂದು ಉದ್ಯೋಗಾಕಾಂಕ್ಷಿ ಉತ್ತರ ಪ್ರದೇಶದ ಇಟಾ ಜಿಲ್ಲೆಯ ದೀಪಕ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ:  ಕರೊನಾದಿಂದ ಕೆಲಸ ಕಳೆದುಕೊಂಡವರೆಷ್ಟು? ಅಧ್ಯಯನ ವರದಿ ಏನು ಹೇಳಿದೆ ನೋಡಿ…


    ಕಳೆದ ವರ್ಷ ಜುಲೈ 11 ರಂದು ಉದ್ಯೋಗ ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಅಪರಾಧಿಗಳು  ಕುಮಾರ್ ಅವರನ್ನು ಪತ್ತೆ ಮಾಡಿ  ಉದ್ಯೋಗದ ಭರವಸೆ ನೀಡುವ ಮೂಲಕ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸುಮಾರು 4.47 ಲಕ್ಷ ರೂ. ಸಂದಾಯ ಮಾಡುವಂತೆ ತಿಳಿಸಿ ಅವರನ್ನು ಮೋಸಗೊಳಿಸಿದರು.
    ಅದರ ನಂತರ, ಆರೋಪಿಗಳು ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಎಎಐನ ನಕಲಿ ನೇಮಕಾತಿ ಪತ್ರವನ್ನು ಬಿಡುಗಡೆ ಮಾಡಿದ್ದರು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
    ಅಪರಾಧಿಗಳ ಮೊಬೈಲ್, ಬ್ಯಾಂಕ್ ಖಾತೆ ವಿವರಗಳನ್ನು ವಿಶ್ಲೇಷಿಸುವಾಗ, ಶಹಜಾದ್ ಎಂಬ 40 ವರ್ಷದ ವ್ಯಕ್ತಿ ತನ್ನ ಖಾತೆಯ ವಿವರಗಳನ್ನು ಆರೋಪಿಗಳ ಪೈಕಿ ಒಬ್ಬನಿಗೆ ನೀಡಿದ್ದು, ಈ ಕೆಲಸಕ್ಕಾಗಿ ಆತನಿಗೆ 5,000 ರೂ. ನೀಡಲಾಗಿತ್ತು ಎಂಬ ಸಂಗತಿ ಬಹಿರಂಗಗೊಂಡಿದೆ.
    ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    25 ಅಡಿ ತಿಮಿಂಗಲದ ಬೇಟೆಯಾಡಿ ಪೀಸ್‌ಪೀಸ್‌ ಮಾಡಿದವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts