More

    25 ಅಡಿ ತಿಮಿಂಗಲದ ಬೇಟೆಯಾಡಿ ಪೀಸ್‌ಪೀಸ್‌ ಮಾಡಿದವರ ಬಂಧನ

    ಕೊಲಾಬಾ (ಮಹಾರಾಷ್ಟ್ರ): ಅಳಿವಿನಂಚಿನಲ್ಲಿರುವ ತಿಮಿಂಗಿಲವನ್ನು ಬೇಟೆಯಾಗಿರುವ ಕೆಲವರು, ಅದನ್ನು ಪೀಸ್‌ ಪೀಸ್‌ ಮಾಡಿ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲಾಬಾದಲ್ಲಿ ನಡೆದಿದೆ.

    ಇದಕ್ಕೆ ಸಂಬಂಧಿಸಿದಂತೆ ಇಂದು ಮೂರು ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 5ಕ್ಕೆ ಏರಿದೆ.

    ಕಳೆದ ಮಂಗಳವಾರ ಈ ಕೃತ್ಯ ಮಾಡಲಾಗಿತ್ತು. 25 ಅಡಿ ಉದ್ದದ ಹೆಣ್ಣು ತಿಮಿಂಗಿಲವನ್ನು ಬೇಟೆಯಾಡಿ ಅದನ್ನು ತುಂಡುತುಂಡಾಗಿ ಕತ್ತರಿಸಿದ್ದನ್ನು ಅಧಿಕಾರಿಗಳು ದಡದ ಮೇಲೆ ನೋಡಿದ್ದರು. ನಂತರ ತನಿಖೆ ನಡೆಸಿದಾಗ ಅದನ್ನು ಕೆಲವು ಮೀನುಗಾರರು ಅಕ್ರಮವಾಗಿ ಬೇಟೆಯಾಡಿರುವುದು ಪತ್ತೆಯಾಗಿದೆ.

    ಇದು ಅತಿ ಅಪರೂಪದ ತಿಮಿಂಗಿಲದ ತಳಿಯಾಗಿದೆ. ರಿಂಕೋಡಾನ್ ಟೈಪಸ್ ಶಾರ್ಕ್ ಎಂಬುದು ಇದರ ವೈಜ್ಞಾನಿಕ ಹೆಸರು. ಇದನ್ನು ಬೇಟೆಯಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ (ಡಬ್ಲ್ಯುಪಿಎ) ವಿರೋಧ ವಾಗಿದೆ. ಪಶ್ಚಿಮ ಕರಾವಳಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಪ್ರಭೇದವನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಘೋಷಣೆ ಮಾಡಲಾಗಿದೆ.

    ಇದನ್ನೂ ಓದಿ: ಇಬ್ಬರು ಮಹಿಳೆಯರಿಗೆ ಮರಣದಂಡನೆ: ಮಾಟಮಂತ್ರಕ್ಕಾಗಿ 4 ವರ್ಷದ ಗಂಡುಮಗುವನ್ನು ಕೊಂದ ದುಷ್ಟ ಹೆಂಗಸರು…

    ಈ ನಿಷೇಧದ ಹೊರತಾಗಿಯೂ, ತಿಮಿಂಗಲವನ್ನು ಬೇಟೆ ಮಾಡಲಾಗಿದೆ. ಇದರ ಯಕೃತ್ತು ಮತ್ತು ಬಾಲದಿಂದ ಎಣ್ಣೆಯನ್ನು ಮಾಡಲಾಗುತ್ತದೆ. ಆದ್ದರಿಂದ ಇದರ ಬೇಟೆಯು ಅವ್ಯಾಹತವಾಗಿ ನಡೆಯುತ್ತಿದೆ. ಇದರ ಎಣ್ಣೆಗೆ ಭಾರಿ ಬೇಡಿಕೆ ಇದೆ.
    ಆದರೆ ಈ ಮೀನುಗಾರರು ಒಂದು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಈಗ ಸಿಕ್ಕಿರುವ ತಿಮಿಂಗಲವನ್ನು ತುಂಡುತುಂಡಾಗಿ ಮಾಡಲಾಗಿದ್ದು, ಬಾಲ ನಾಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

    ಪ್ಯಾನ್‌ ಕಾರ್ಡ್‌ಗೆ ಕನ್ನ ಹಾಕಿ ಐದು ಲಕ್ಷ ವಂಚನೆ! ಟೆಕ್ಕಿ ಕಕ್ಕಾಬಿಕ್ಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts