More

    ಕರೊನಾದಿಂದ ಕೆಲಸ ಕಳೆದುಕೊಂಡವರೆಷ್ಟು? ಅಧ್ಯಯನ ವರದಿ ಏನು ಹೇಳಿದೆ ನೋಡಿ…

    ನವದೆಹಲಿ: ಕರೊನಾ ವೈರಸ್‌ನಿಂದಾಗಿ ಇಡೀ ವಿಶ್ವದ ಎಲ್ಲಾ ಕ್ಷೇತ್ರಗಳಲ್ಲಿಯೂ ಅಲ್ಲೋಲ ಕಲ್ಲೋಲವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ. ಅದರಲ್ಲಿಯೂ ಮುಖ್ಯವಾಗಿ ಉದ್ಯೋಗ ಕ್ಷೇತ್ರದಲ್ಲಂತೂ ಭಾರಿ ಹೊಡೆತ ಬಿದ್ದಿದೆ.

    ಬಹುತೇಕ ಕಂಪೆನಿಗಳು ತನ್ನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿವೆ. ಈ ಕುರಿತು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಮತ್ತು ಏಷಿಯನ್‌ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಜಂಟಿ ವರದಿ ನೀಡಿದೆ. ಈ ವರದಿಯ ಪ್ರಕಾರ, 41 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
    “ಏಷ್ಯಾ ಹಾಗೂ ಪೆಸಿಫಿಕ್‌ ಕೋವಿಡ್ -19 ಯುವ ಉದ್ಯೋಗ ಬಿಕ್ಕಟ್ಟಿನ ನಿರ್ವಹಣೆ” ಎಂಬ ಶೀರ್ಷಿಕೆಯೊಂದಿಗೆ ಮಂಗಳವಾರ ಬಿಡುಗಡೆಯಾದ ಐಎಲ್ಒ-ಎಡಿಬಿ ವರದಿಯಲ್ಲಿ, ಭಾರತದಲ್ಲಿ 41 ಲಕ್ಷ ಯುವಕರಿಗೆ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಎರಡು ಲಕ್ಷಕ್ಕೂ ಅಧಿಕ ಸಾಫ್ಟ್‌ವೇರ್‌ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಈ ಹಿಂದೆಯೇ ಕೆಲವು ಅಧ್ಯಯನಗಳು ಉಲ್ಲೇಖಿಸಿದ್ದವು. ಅದೂ ಸೇರಿದಂತೆ ಏಳು ಪ್ರಮುಖ ಕ್ಷೇತ್ರಗಳಿಗೆ ಕರೊನಾ ಮತ್ತು ಅದರಿಂದ ಉಂಟಾಗಿರುವ ಲಾಕ್‌ಡೌನ್‌ ಹೆಚ್ಚು ಪರಿಣಾಮ ಬೀರಿದೆ ಎಂದಿರುವ ಈ ವರದಿ, ಅದರಲ್ಲಿಯೂ ಮುಖ್ಯವಾಗಿ ನಿರ್ಮಾಣ ಮತ್ತು ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿರುವುದಾಗಿ ಹೇಳಿದೆ.

    ಇನ್ನು ಏಷ್ಯಾ ಮತ್ತು ಪೆಸಿಫಿಕ್‌ನ 13 ದೇಶಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ಒಂದೂವರೆ ಕೋಟಿ ಯುವ- ಯುವತಿಯರು ಕೆಲಸವನ್ನು ಕಳೆದುಕೊಂಡಿದ್ದಾರೆ.

    ಇದನ್ನೂ ಓದಿ: 25 ಅಡಿ ತಿಮಿಂಗಲದ ಬೇಟೆಯಾಡಿ ಪೀಸ್‌ಪೀಸ್‌ ಮಾಡಿದವರ ಬಂಧನ

    ಲಾಕ್‌ಡೌನ್‌ ಹಾಗೂ ಕರೊನಾ ವೈರಸ್‌ ಮಹಿಳಾ ಉದ್ಯೋಗಿಗಳ ಮೇಲೆ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದೆ. ಪ್ರತಿ ನಾಲ್ಕು ಮಂದಿ ಕೆಲಸ ಕಳೆದುಕೊಂಡವರ ಪೈಕಿ ಮೂವರು ಮಹಿಳೆಯರೇ ಆಗಿದ್ದಾರೆ. ಅದರಲ್ಲಿಯೂ ನಿರ್ಮಾಣ ಕಾಮಗಾರಿ, ಆಹಾರ ಪೂರೈಕೆ, ವಸತಿ ಸೌಕರ್ಯ ಕಲ್ಪಿಸುವುದು ಈ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ.

    15ರಿಂದ 24 ವರ್ಷ ವಯಸ್ಸಿಗಿಂತ ಕಡಿಮೆ ವಯೋಮಾನದ ಯುವಕ-ಯುವತಿಯರು ಕರೊನಾದಿಂದಾಗಿ ಭವಿಷ್ಯದಲ್ಲಿ ಸಮಸ್ಯೆ ಎದುರಿಸಲಿದ್ದಾರೆ. ಇದು ಸದ್ಯದ ಸಮಸ್ಯೆ ಆಗಿರದೇ ದೀರ್ಘಕಾಲೀನ ಸಮಸ್ಯೆಯಾಗಿದೆ ಎನ್ನಲಾಗಿದೆ.

    ವಿವಿಧ ದೇಶಗಳಲ್ಲಿ ಲಭ್ಯವಿರುವ ನಿರುದ್ಯೋಗದ ಅಂದಾಜು ಅಂಕಿ ಅಂಶಗಳನ್ನು ಆಧರಿಸಿದೆ. ಭಾರತದಲ್ಲಿ ಮಹಾಮಾರಿಯ ಕಾಲದಲ್ಲಿ ಕಂಪೆನಿಗಳ ಮಟ್ಟದ ತರಬೇತಿಯಲ್ಲಿ ಮೂರನೇ ಎರಡರಷ್ಟು ಪರಿಣಾಮ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

    ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

    ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

    ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

    ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

    ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

    ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

    ಪ್ಯಾನ್‌ ಕಾರ್ಡ್‌ಗೆ ಕನ್ನ ಹಾಕಿ ಐದು ಲಕ್ಷ ವಂಚನೆ! ಟೆಕ್ಕಿ ಕಕ್ಕಾಬಿಕ್ಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts